
ನಗರದಲ್ಲಿ ಯುವಕರ ಬೈಕ್ ವ್ಹೀಲಿಂಗ್ ಹಾವಳಿ ಮಿತಿಮೀರಿದೆ.ನಗರದ ಹೊರ ವಲಯಗಳ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರು ಇದೀಗ ಮತ್ತೆ ಜನನಿಬಿಡ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಾ, ದುಸ್ಸಾಹಸ ಮುಂದುವರೆಸಿದ್ದಾರೆ.ಲಗ್ಗೆರೆಯ ಔಟರ್ ರಿಂಗ್ ರೋಡ್‍ನಲ್ಲಿ ಪ್ರತಿನಿತ್ಯ ಯುವಕರು ವ್ಹೀಲಿಂಗ್‍ನಲ್ಲಿ ತೊಡಗುತ್ತಿರುವುದು ಕಂಡುಬಂದಿದೆ.ಕತ್ತಲಾಗುತ್ತಿದ್ದಂತೆ ಯುವಕರು ಬೈಕ್‍ಗಳಲ್ಲಿ ಕರ್ಕಶ ಶಬ್ದ ಮಾಡುತ್ತಾ, ಕಿಲೋ ಮೀಟರ್‍ಗಟ್ಟಲೆ ವ್ಹೀಲಿಂಗ್‍ನಲ್ಲಿ ತೊಡಗಿದ್ದಾರೆ.
ಈ ರೀತಿಯ ಅಪಾಯಕಾರಿ ವ್ಹೀಲಿಂಗ್‍ನಿಂದಾಗಿ ಇತರೆ ವಾಹನ ಸವಾರರು ಸಂಚರಿಸುವುದು ಕಷ್ಟವಾಗಿದೆ.ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಜೊತೆ ವ್ಹೀಲಿಂಗ್‍ಮಾಡುವವರ ಕಾಟ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ರೀತಿ ಏರ್ ಪೋರ್ಟ್ ರಸ್ತೆಯಲ್ಲಿ ಈ ಹಿಂದೆ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದವರನ್ನು ಸಿಲಿಕಾನ್ ಸಿಟಿ ಪೊಲೀಸರು ಬಂಧಿಸಿ ಇತರರಿಗೆ ಬುದ್ಧಿ ಕಲಿಸಿದ್ದರು.
ಯಮಹಾ ಮತ್ತು ಹೋಂಡಾ ಡಿಯೋ ಬೈಕ್‍ನಲ್ಲಿ ಯುವಕರು ಹೆಚ್ಚಾಗಿ ಮುಖ್ಯ ರಸ್ತೆಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದಾರೆ.ಬೈಕ್ ಜೊತೆ ಸರ್ಕಸ್ ಮಾಡುತ್ತಾ, ಬ್ಯುಸಿ ರಸ್ತೆಯಲ್ಲೇ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಟಾರ್ಚರ್ ಕೊಡುತ್ತಿದ್ದಾರೆ.
ಇತ್ತೀಚೆಗೆ ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಗೆ ವ್ಹೀಲಿಂಗ್ ಮಾಡುತ್ತಾ ಡಿಕ್ಕಿ ಹೊಡೆದಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಅಲ್ಲದೆ ವ್ಹೀಲಿಂಗ್ ಮಾಡುತ್ತಾ ಭೀಕರವಾಗಿ ಪ್ರಾಣ ಕಳೆದುಕೊಂಡಿರುವುದನ್ನೂ ಸಹ ನಾವು ನೋಡಿದ್ದೇವೆ.ಇಷ್ಟಾದರೂ ವ್ಹೀಲಿಂಗ್ ಮಾಡುವವರು ಇನ್ನೂ ಬುದ್ಧಿ ಕಲಿತಿಲ್ಲ. ವ್ಹೀಲಿಂಗ್ ಮಾಡುತ್ತಾ ತಮ್ಮ ಪ್ರಾಣದೊಂದಿಗೆ ಚಲ್ಲಾಟವಾಡುವುದರ ಜೊತೆಗೆ ಇತರರ ಪ್ರಾಣಕ್ಕೂ ಕಂಟಕ ತರುತ್ತಿರುವ ಯುವಕರ ವಿರುದ್ಧ ನಗರ ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಅಭಿಪ್ರಾಯವಾಗಿದೆ.
ವ್ಹೀಲಿಂಗ್ ಚಟಕ್ಕೆ ಬಿದ್ದವರ ಬೈಕ್‍ಗಳನ್ನು ವಶಪಡಿಸಿಕೊಂಡು ಅವರನ್ನು ಬಂಸಿ ಕಾನೂನು ರೀತಿ ಕ್ರಮಕೈಗೊಳ್ಳುವ ಮೂಲಕ ಸಂಭವಿಸಬಹುದಾದ ಪ್ರಾಣ ಹಾನಿಯನ್ನು ತಪ್ಪಿಸಬೇಕೆಂದು ನಾಗರಿಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.