ರಾಷ್ಟ್ರಿಯ

ಬೃಹತ್ ಆಕಾರದ ಹೋರ್ಡಿಂಗ್‌ವೊಂದರಲ್ಲಿ ‘ಮ್ಯಾರಿ ಮೀ ಉತ್ಕರ್ಷ’ : ಬೆಚ್ಚಿಬೀಳಿಸಿದ ಲವ್ ಕಹಾನಿ ?

ಕೊಲ್ಲಾಪುರ(ಮಹಾರಾಷ್ಟ್ರ): ತಾವು ಇಷ್ಟಪಡುವ ಪ್ರಿಯತಮೆಗೆ ರಿಂಗ್, ಗುಲಾಬಿ ಸೇರಿ ವಿವಿಧ ವಸ್ತು ನೀಡಿ ಲವ್ ಪ್ರಪೋಸ್ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಕೊಲ್ಲಾಪುರದ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಗೆ ಎಲ್ಲರಿಗಿಂತಲೂ ವಿಭಿನ್ನವಾಗಿ ಪ್ರಪೋಸ್ ಮಾಡಿದ್ದಾನೆ.
ಈ ಮೂಲಕ ಅನೇಕರ ಮನಗೆದ್ದಿದ್ದಾನೆ. ಬೃಹತ್​ ಆಕಾರದ ಹೋರ್ಡಿಂಗ್​ವೊಂದರಲ್ಲಿ ‘ಮ್ಯಾರಿ ಮೀ ಉತ್ಕರ್ಷ’ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಿಸಿ, ಮದುವೆ ಪ್ರಸ್ತಾಪ ಮಾಡಿದ್ದಾನೆ. ಇದಕ್ಕೆ ಯುವತಿ ಸಹ ಒಪ್ಪಿಕೊಂಡಿದ್ದಾಳಂತೆ.
ಪ್ರಿಯತಮೆಗೆ ವಿಭಿನ್ನ ರೀತಿಯಲ್ಲಿ ಪ್ರಪೋಸ್

ಏನಿದು ಲವ್ ಕಹಾನಿ?: 2017ರಿಂದಲೂ ಒಂದೇ ಕಾಲೇಜ್​​ನಲ್ಲಿ ಸೌರಭ್ ಮತ್ತು ಉತ್ಕರ್ಷ್​​ ಇಂಜಿನಿಯರಿಂಗ್​ ವ್ಯಾಸಂಗ ಮಾಡಿದ್ದಾರೆ. ಸಾಂಗ್ಲಿಯ ವಸಂತವಾಡ ಪಾಟೀಲ್ ಇನ್​​​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯ ಸಿವಿಲ್​ ವಿಭಾಗದಲ್ಲಿ ಇವರಿಬ್ಬರು ಓದಿದ್ದಾರೆ. ಇವರ ವ್ಯಾಸಂಗ ಮುಕ್ತಾಯದವರೆಗೂ ಉತ್ಕರ್ಷ್​-ಸೌರಭ್​ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ.

ಆದರೆ, ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಸೌರಭ್ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ, ಕಾಲೇಜ್​​ನಲ್ಲಿ ಯಾರಾದರೂ ಇದ್ದರೆ ಹೇಳು, ನಾವು ಅವರ ಮುಂದೆ ಮದುವೆ ಪ್ರಸ್ತಾಪ ಇಡುತ್ತೇವೆಂದು ಕೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button