ಬುಲ್ಡೋಜರ್ ಶಾಂತಿಯ ಸಂಕೇತ

ಬುಲ್ಡೋಜರ್‌ಗಳು ಶಾಂತಿ ಮತ್ತು ಅಭಿವೃದ್ಧಿಯ ಸಂಕೇತವಾಗಿದ್ದು, ಅವುಗಳನ್ನು ಕಾನೂನನ್ನು ಜಾರಿಗೊಳಿಸಲು ಬಳಸಬಹುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಬುಲ್ಡೋಜರ್ ಪಾತ್ರ ಇದೆ. ಆದ್ದರಿಂದ ಅವರು ಶಾಂತಿ ಮತ್ತು ಬೆಳವಣಿಗೆಯ ಸಂಕೇತಗಳಾಗಿರಬಹುದು.
ಜನರು ಕಾನೂನುಗಳನ್ನು ಉಲ್ಲಂಘಿಸಿದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲು ಬುಲ್ಡೋಜರ್ ಗಳನ್ನು ಬಳಸಬಹುದು ಎಂದರು.ಯುಪಿ ತನ್ನದೇ ಆದ ಫಿಲ್ಮ್ ಸಿಟಿಯನ್ನು ನಿರ್ಮಿಸುವ ಮೂಲಕ ಚಲನಚಿತ್ರೋದ್ಯಮವನ್ನು ಮುಂಬೈನಿಂದ ಹೊರಹಾಕಲು ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮಾಡಿದ ಆರೋಪಗಳ ಬಗ್ಗೆ ಅವರು, ಮುಂಬೈ ಆರ್ಥಿಕ ಭೂಮಿ.
ಆದರೆ, ಯುಪಿ ’ಧರ್ಮಭೂಮಿ’ ಇವೆರಡರ ಸುಂದರ ಸಂಗಮವಾಗಬಹುದು. ನಾವು ಫಿಲ್ಮ್ ಸಿಟಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಆದರೆ ನಮ್ಮದೇ ಆದ ನಿರ್ಮಾಣ ಮಾಡುತ್ತಿದ್ದೇವೆ ಎಂದರು.ಯುಪಿಯ ಫಿಲ್ಮ್ ಸಿಟಿಯು ೧,೨೦೦ ಎಕರೆಗಳಲ್ಲಿ ನಿರ್ಮಾಣವಾಗಲಿದೆ ಎಂದ ಅವರು, ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ೧ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಆದಿತ್ಯನಾಥ್ ಹೇಳಿದರು.
ಯುಪಿ ಹೂಡಿಕೆಯ ತಾಣವಾಗಿದ್ದು, ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಯುವಕರನ್ನು ಹೊಂದಿದೆ. ಅಲ್ಲದೆ, ಹೂಡಿಕೆದಾರರನ್ನು ಆಕರ್ಷಿಸಲು ೧೬ ದೇಶಗಳಿಗೆ ಭೇಟಿ ನೀಡಿದ ನಂತರ, ಯುಪಿ ಸರ್ಕಾರವು ಮುಂಬೈನಿಂದ ತನ್ನ ದೇಶೀಯ ಪ್ರವಾಸವನ್ನು ಪ್ರಾರಂಭಿಸಿದೆ ಎಂದು ನುಡಿದರು.