ಅಪರಾಧರಾಜ್ಯರಾಷ್ಟ್ರಿಯ

ಬೀದಿ ನಾಯಿ ಕಚ್ಚಿದರೆ, ಆಹಾರ ಕೊಟ್ಟವರೇ ಹೊಣೆ: ಸುಪ್ರೀಂಕೋರ್ಟ್

ಹೊಸದಿಲ್ಲಿ: ಇತ್ತೀಚೆಗೆ ನಗರಗಳಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಬೀದಿ ನಾಯಿಗಳು ಕಚ್ಚಿದರೆ, ಶ್ವಾನಗಳಿಗೆ ಆಹಾರ ಹಾಕುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಅಲ್ಲದೆ, ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳ ವೈದ್ಯಕೀಯ ವೆಚ್ಚವನ್ನೂ ಬೀದಿ ನಾಯಿಗಳಿಗೆ ಆಹಾರ ಒದಗಿಸುವವರು ಭರಿಸಬೇಕು. ಜತೆಗೆ ಶ್ವಾನಗಳಿಗೆ ಲಸಿಕೆ ಹಾಕಿಸುವ ಜವಾಬ್ದಾರಿಯನ್ನೂ ಅವರೇ ಹೊರಬೇಕು. ನಾಯಿಗಳನ್ನು ಪ್ರೀತಿಸಿದರೆ ಸಾಲದು, ಅವುಗಳ ಕಾಳಜಿಯನ್ನೂ ಮಾಡಬೇಕು.

ಬೀದಿ ನಾಯಿಗಳು ಅಮಾಯಕರಿಗೆ ಹಾನಿ ಮಾಡುವುದನ್ನು ಸಹಿಸಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಹೇಳಿದೆ.

ಕೇರಳದಲ್ಲಿ ಹೆಚ್ಚಿರುವ ಬೀದಿನಾಯಿಗಳ ಹಾವಳಿ ಕುರಿತು ಸಲ್ಲಿಸಲಾದ ಅರ್ಜಿಗಳ ಬಗ್ಗೆ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೀದಿ ನಾಯಿಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿರುವ ನ್ಯಾಯಪೀಠ, ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಅವಶ್ಯಕ ಎಂದಿದೆ. ಮುಂದಿನ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಿದೆ.

ತಾವು ಕೂಡ ಶ್ವಾನ ಪ್ರೇಮಿ ಎಂದು ಮೌಖಿಕವಾಗಿ ಹೇಳಿದ ನ್ಯಾಯಮೂರ್ತಿ ಖನ್ನಾ, ತಾವು ಆಹಾರ ನೀಡುವ ನಾಯಿಗಳ ಸಂಖ್ಯೆ ಅಥವಾ ಗುರುತನ್ನು ಜನರು ನೆನಪಿಟ್ಟುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಆಕ್ರಮಣಕಾರಿ ಬೀದಿ ನಾಯಿಗಳ ದಾಳಿಯಿಂದ ಆಗಸ್ಟ್‌ನಿಂದ ಎಂಟು ಮಂದಿ ಮೃತಪಟ್ಟಿದ್ದಾರೆ. ಶಾಲಾ ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿಗಳು ನಡೆದಿವೆ ಎಂದು ವಕೀಲ ವಿ.ಕೆ. ಬಿಜು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬೀದಿ ನಾಯಿ ದಾಳಿಗಳ ಬಗ್ಗೆ ಇತ್ತೀಚೆಗಷ್ಟೇ ಬಿಜು ಅವರು ಸುಪ್ರೀಂಕೋರ್ಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಕೇರಳದಲ್ಲಿ ಬೀದಿನಾಯಿ ದಾಳಿಗೆ ಬಲಿಯಾದ 12 ವರ್ಷದ ಬಾಲಕಿಯ ಘಟನೆಯನ್ನು ಮುಖ್ಯವಾಗಿ ಉದಾಹರಣೆ ನೀಡಿದರು.

ನಾಯಿಗಳು ಕೆಲವೊಮ್ಮೆ ಆಹಾರದ ಕೊರತೆಯಿಂದ ಅಥವಾ ಯಾವುದೋ ಸೋಂಕಿಗೆ ಒಳಗಾದಾಗ ಆಕ್ರಮಣಕಾರಿಯಾಗಿ ವರ್ತಿಸುತ್ತವೆ.

ರೇಬೀಸ್ ಸೋಂಕು ತಗುಲಿದ ನಾಯಿಗಳನ್ನು ಸಂಬಂಧಿತ ಅಧಿಕಾರಿಗಳು ಆರೈಕೆ ಕೇಂದ್ರಕ್ಕೆ ದಾಖಲಿಸಬೇಕು” ಎಂದ ಕೋರ್ಟ್, ಬೀದಿ ನಾಯಿ ಕಾಟ ತೀವ್ರವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು ಎಂದಿದೆ.

ಸ್ಥಳೀಯ ಸಂಸ್ಥೆಗಳ ಕಾನೂನಿಗೆ ಅನುಗುಣವಾಗಿ ಬೀದಿ ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂಬ 2015ರ ಕೇರಳ ಹೈಕೋರ್ಟ್ ಆದೇಶವನ್ನು ಬಿಜು ಉಲ್ಲೇಖಿಸಿದರು.

ಕೇರಳದಲ್ಲಿ ಶ್ವಾನ ದಾಳಿಗಳ ಕುರಿತಾದ ದೂರುಗಳ ತನಿಖೆ ನಡೆಸಲು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಲು 2016ರಲ್ಲಿ ಸುಪ್ರೀಂಕೋರ್ಟ್ ರಚಿಸಿದ್ದ ಶ್ರೀ ಜಗನ್ ಆಯೋಗವು ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಕೇರಳದ ಕೊಟ್ಟಾಯಂನಲ್ಲಿ ಬೀದಿ ನಾಯಿ ದಾಳಿಗೆ ಒಳಗಾಗಿದ್ದ 12 ವರ್ಷದ ಅಭಿರಾಮಿ ಎಂಬ ಬಾಲಕಿ, ಸೆಪ್ಟೆಂಬರ್ 5ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.

ಆಗಸ್ಟ್ 13ರಂದು ಹಾಲು ತರಲು ತೆರಳಿದ್ದ ಬಾಲಕಿ ಮೇಲೆ ನಾಯಿ ಆಕ್ರಮಣ ಮಾಡಿತ್ತು. ಆಕೆಯ ದೇಹದಲ್ಲಿ ಏಳು ಕಡೆ ಗಾಯಗಳಾಗಿದ್ದವು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button