ಅಂತಾರಾಷ್ಟ್ರೀಯ

ಬೀದಿಯಲ್ಲಿ ತಿನಿಸು ಮಾರುತ್ತಿರುವ ಟಿವಿ ಆ್ಯಂಕರ್!

ದೆಹಲಿ(ಜೂ.17):  ಅಫ್ಘಾನಿಸ್ತಾನದಿಂದ (Afghanistan) ಯಾವಾಗ ಅಮೆರಿಕದ ಸೇನೆ (American Army) ಮರಳಿ ಹೋಯಿತೋ ಆಗ ತಾಲೀಬಾನ್ (Taliban) ತಾಂಡವ ಶುರುವಾಗಿದೆ. ಅಫ್ಘಾನಿಸ್ತಾನದ ಜನ ಬದುಕಲು ದಿಕ್ಕಿಲ್ಲದೆ ಓಡಿ ಹೋಗುತ್ತಿದ್ದಾರೆ. ತಾಲೀಬಾನ್ ಆಡಳಿತದಲ್ಲಿ ನರಕದ ದಿನಗಳನ್ನು ಕಳೆಯುತ್ತಿರುವ ಜನರು ಖುಷಿಯನ್ನೇ ಮರೆತಿದ್ದಾರೆ. ಹಾಸ್ಯ ಕಲಾವಿದರು, ಪತ್ರಕರ್ತರೂ (Journalists), ನಟರೂ, ಕಲಾವಿದರ ಸ್ಥಿತಿಯನ್ನೂ ವಿವರಿಸಬೇಕಿಲ್ಲ. ತಾಲೀಬಾನ್ ವಿರೋಧಿಸುವ ವಿಚಾರಗಳಿಗೆ ಯಾವುದಕ್ಕೂ ಈಗ ಅಫ್ಘಾನಿಸ್ತಾನದಲ್ಲಿ ಜಾಗವಿಲ್ಲ. ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ಅಫ್ಘಾನಿಸ್ತಾನದ ಟಿವಿ ಆ್ಯಂಕರ್ (TV Anchor) ಬೀದಿಗಳಲ್ಲಿ ಆಹಾರವನ್ನು (Street Food) ಮಾರಾಟ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಮಾಧ್ಯಮ ನಿರೂಪಕರಾಗಿದ್ದ ಮೂಸಾ ಮೊಹಮ್ಮದಿ ಅವರ ಜೀವನೋಪಾಯಕ್ಕಾಗಿ ಆಹಾರವನ್ನು ಮಾರಾಟ ಮಾಡುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡ ಹಕ್ಮಲ್, “ಮೂಸಾ ಮೊಹಮ್ಮದಿ ಅವರು ವಿವಿಧ ಟಿವಿ ಚಾನೆಲ್‌ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ವರ್ಷಗಳ ಕಾಲ ಕೆಲಸ ಮಾಡಿದರು. ಈಗ ಅವರ ಕುಟುಂಬವನ್ನು ಪೋಷಿಸಲು ಯಾವುದೇ ಆದಾಯವಿಲ್ಲ. ಮತ್ತು ಸ್ವಲ್ಪ ಹಣವನ್ನು ಗಳಿಸಲು ಬೀದಿ ಆಹಾರವನ್ನು ಮಾರಾಟ ಮಾಡುತ್ತಾರೆ. ಗಣರಾಜ್ಯದ ಪತನದ ನಂತರ #ಆಫ್ಘನ್ನರು ಬಡತನವನ್ನು ಅನುಭವಿಸುತ್ತಾರೆ ಎಂದು ಬರೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button