
ಈ ಹಿಂದೆ ಇದ್ದ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಲಾಗಿದೆ. ಕೆಲ ಹೊಸ ವಾರ್ಡ್‍ಗಳಿಗೆ ಇತಿಹಾಸ ಪುರುಷರು ಹಾಗೂ ಹಿಂದೂ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಹೆಸರಿಡಲಾಗಿದೆ ಎನ್ನಲಾಗಿದೆ. ಈಗಾಗಲೇ ವಾರ್ಡ್‍ಪುನರ್ ವಿಂಗಡಣೆ ಸಂಪೂರ್ಣಗೊಂಡಿದ್ದರೂ ಪರಿವರ್ತಿತ ವಾರ್ಡ್‍ಗಳ ಪಟ್ಟಿ ಮಾತ್ರ ಇದುವರೆಗೂ ಯಾರ ಕೈಗೆ ಸಿಗದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ಸಮಿತಿ ವಾರ್ಡ್ ಪುನರ್ ವಿಂಗಡಣಾ ಸಮಿತಿ 198 ವಾರ್ಡ್‍ಗಳನ್ನು ಪುನರ್ ವಿಂಗಡಿಸಿ 243 ವಾರ್ಡ್‍ಗಳನ್ನಾಗಿ ವಿಂಗಡಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿ ಸಲ್ಲಿಸಿ ಒಂದು ವಾರ ಕಳೆಯುತ್ತ ಬಂದರೂ ಇದುವರೆಗೂ ಗೆಜೆಟ್ ನೋಟಿಫಿಕೇಷನ್ ಮಾಡಿಲ್ಲ. ಮಾತ್ರವಲ್ಲ ವಾರ್ಡ್ ಪುನರ್‍ವಿಂಗಡಣಾ ವರದಿ ಸೋರಿಕೆಯಾಗದಂತೆ ನೋಡಿಕೊಳ್ಳಲಾಗಿದೆ.ಆದರೆ, ಆಯಾ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಪುನರ್‍ವಿಂಗಡಣೆ ವರದಿ ಮಾತ್ರ ಸ್ಥಳೀಯ ಶಾಸಕರ ಕೈ ಸೇರಿದೆ.
ವಾರ್ಡ್ ಪುನರ್‍ವಿಂಗಡಣಾ ವರದಿ ಬಿಜೆಪಿ ಶಾಸಕರ ಕೈ ಸೇರಿದ್ದು, ಅಂತಹ ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿಗಳೆಂದು ಗುರುತಿಸಿಕೊಂಡಿರುವ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ. ಆದರೆ, ಒಟ್ಟಾರೆ ವಾರ್ಡ್ ಪುನರ್‍ವಿಂಗಡಣಾ ವರದಿ ಮಾತ್ರ ಇದುವರೆಗೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ.ಬಲ್ಲ ಮಾಹಿತಿಗಳ ಪ್ರಕಾರ ನಗರದ ಹಲವಾರು ವಾರ್ಡ್‍ಗಳಿಗೆ ಹಿಂದಿನ ರಾಜಮನೆತನ ಹಾಗೂ ಹಿಂದೂ ಸಂಸ್ಕøತಿ ಪ್ರತಿನಿಸುವ ಹೆಸರಗಳನ್ನಿಡಲಾಗಿದೆ ಎಂದು ತಿಳಿದು ಬಂದಿದೆ.
ಉದಾಹರಣೆಗೆ ಕನ್ನೇಶ್ವರ ರಾಮ, ವೀರಮದಕರಿ, ಚಾಣಕ್ಯ ಹಾಗೂ ಬಂಡೇಮಠದಂತಹ ಹೊಸ ವಾರ್ಡ್‍ಗಳನ್ನು ರಚನೆ ಮಾಡಲಾಗಿದೆ.30 ರಿಂದ 35 ಸಾವಿರ ಮತದಾರರಿಗೆ ಒಂದು ವಾರ್ಡ್‍ನಂತೆ ಒಟ್ಟು 243 ವಾರ್ಡ್‍ಗಳನ್ನು ರಚನೆ ಮಾಡಲಾಗಿದೆ.
ಇವುಗಳಲ್ಲಿ ಈ ಹಿಂದಿನ ಕೆಲವು ವಾರ್ಡ್‍ಗಳ ಹೆಸರನ್ನು ಕೈಬಿಟ್ಟು ಹೊಸ ಹೆಸರಿನಲ್ಲಿ ಹಲವಾರು ವಾರ್ಡ್‍ಗಳನ್ನು ರಚನೆ ಮಾಡಲಾಗಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಇದ್ದ 7 ವಾರ್ಡ್‍ಗಳನ್ನು ಎಂಟು ವಾರ್ಡ್‍ಗಳಿಗೆ ಹೆಚ್ಚಿಸಲಾಗಿದೆ. ಇವುಗಳಲ್ಲಿ ಹಿಂದಿನ ಕೆಲ ವಾರ್ಡ್‍ಗಳ ಹೆಸರನ್ನು ಕೈಬಿಟ್ಟು ಹೊಸ ಹೆಸರಿನ ವಾರ್ಡ್‍ಗಳಿಗೆ ಆದ್ಯತೆ ನೀಡಲಾಗಿದೆ.
ಅದೇ ರೀತಿ ವಾರ್ಡ್‍ಗಳ ಸಂಖ್ಯೆಗಳನ್ನು ಬದಲಾವಣೆ ಮಾಡಲಾಗಿದೆ. ಈ ಹಿಂದೆ ಇದ್ದ ದೊಡ್ಡ ಬಿದರಕಲ್ಲು ವಾರ್ಡ್ ಹೆಸರು ಕೈ ಬಿಡಲಾಗಿದೆ. ಹೆಮ್ಮಿಗೆಪುರ ವಾರ್ಡ್ ಹೆಸರನ್ನು ತಲಘಟ್ಟಪುರ ಎಂದು ಮರು ನಾಮಕರಣ ಮಾಡಲಾಗಿದೆ. ಹೀಗಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಆಂದ್ರಹಳ್ಳಿ, ವಿದ್ಯಾಮಾನ ನಗರ, ದೊಡ್ಡಗೊಲ್ಲರಹಟ್ಟಿ, ಉಲ್ಲಾಳ, ಕೆಂಗೇರಿ ಉಪನಗರ, ಬಂಡೇಮಠ ಹಾಗೂ ತಲಘಟ್ಟಪುರ ವಾರ್ಡ್‍ಗಳನ್ನು ರಚಿಸಲಾಗಿದೆ.
ಯಶವಂತಪುರದ ಎಂಟು ವಾರ್ಡ್‍ಗಳಿಗೆ ಈಗಾಗಲೇ ಬಿಜೆಪಿ ಅಭ್ಯರ್ಥಿಗಳನ್ನು ಗುರುತಿಸಲಾಗಿದ್ದು, ಕೆಲವರು ಈಗಾಗಲೇ ತಮ್ಮ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವುದು ಕಂಡು ಬರುತ್ತಿದೆ. ಆದರೆ, ಉಳಿದ ಪಕ್ಷಗಳ ಮುಖಂಡರುಗಳಿಗೆ ವಾರ್ಡ್ ಪುನರ್‍ವಿಂಗಡಣಾ ವರದಿ ಮಾಹಿತಿ ಲಭಿಸದಿರುವ ಹಿನ್ನಲೆಯಲ್ಲಿ ಅವರು ಯಾವುದೆ ಪ್ರಚಾರ ನಡೆಸುತ್ತಿಲ್ಲ. ಇದು ಬಿಜೆಪಿ ಪಕ್ಷಕ್ಕೆ ವರದಾನವಾಗುವ ನಿರೀಕ್ಷೆ ಇದೆ.
ಇದು ಕೇವಲ ಯಶವಂತಪುರ ಕ್ಷೇತ್ರಕ್ಕೆ ಮಾತ್ರ ಸಂಬಂಸಿದಲ್ಲ. ಎಲ್ಲಾ 27 ವಿಧಾನಸಭಾ ಕ್ಷೇತ್ರಗಳ ವಾರ್ಡ್ ಪುನರ್‍ವಿಂಗಡಣಾ ವರದಿ ಆಯಾ ಶಾಸಕರ ಕೈ ಸೇರಿರುವುದರಿಂದ ಬಿಜೆಪಿ ಪಾಳಯದಲ್ಲಿ ಬಿಬಿಎಂಪಿ ಚುನಾವಣಾಪ್ರಚಾರ ಚುರುಕುಗೊಂಡಿರುವುದು ಕಂಡು ಬರುತ್ತಿದೆ.