ಬೆಂಗಳೂರು

ಬಿಬಿಎಂಪಿ : ತೆರಿಗೆ ವಂಚಕರ ಪತ್ತೆಗೆ ಡ್ರೋಣ್ ಸರ್ವೆ

bbmp Drone Survey For Tax Fraud

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ತೆರಿಗೆ ವಸೂಲಿ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ಹಾಗೂ ತೆರಿಗೆ ವಂಚಕರ ಪತ್ತೆಗಾಗಿ ಡ್ರೋಣ್ ಸರ್ವೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ದೀಪಕ್ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ 2093 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ 1170 ಕೋಟಿ ಸಂಗ್ರಹವಾಗಿತ್ತು.ಆದರೆ, ಶೇ.30ರಷ್ಟು ವ್ಯತ್ಯಾಸ ಇರೋದು ಕಂಡು ಬಂದಿದೆ.

ಹೀಗಾಗಿ ತೆರಿಗೆ ಸಂಗ್ರಹಕ್ಕೆ ಡ್ರೋನ್ ಸರ್ವೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಜೊತೆಗೆ ಕಂದಾಯ ಅಧಿಕಾರಿಗಳಿಗೆ ಗುರಿ ನೀಡಿ ತೆರಿಗೆ ವಸೂಲಿ ಮಾಡಲಾಗುವುದು. ಮತ್ತೊಂದೆಡೆ, ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡಿದರೆ, ಡ್ರೋಣ್ ಸಮೀಕ್ಷೆಯಲ್ಲಿ ಗೊತ್ತಾಗಲಿದೆ ಎಂದು ಅವರು ಹೇಳಿದರು.

ಅದೇ ರೀತಿ, ಈ ಆಸ್ತಿ ತಂತ್ರಾಂಶ ಜಾರಿಗೆ ಬಿಬಿಎಂಪಿ ಚಿಂತನೆ ನಡೆಸಲಾಗಿದ್ದು, ಬೆಂಗಳೂರು ಒನ್ ಸೆಂಟರ್‍ಗಳ ಮೂಲಕ ತಂತ್ರಾಂಶ ಬಳಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಯೊಂದ ಆಸ್ತಿಯ ಮಾಹಿತಿ ಇಲ್ಲಿ ಸಿಗಲಿದೆ. ಹಾಗೇ, ಮುಂದಿನ ದಿನಗಳಲ್ಲಿ ಖಾತಾ ನೇರವಾಗಿ ಡಿಜಿ ಲಾಕರ್‍ಗೆ ಹೋಗುವ ವ್ಯವಸ್ಥೆ ಇರಲಿದ್ದು, ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಮೊದಲು ಪ್ರಾಯೋಗಿಕ ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ಲಕ್ಸ್ ಬ್ಯಾನರ್ ಹಾವಳಿ ಕುರಿತು ಪ್ರತಿಕ್ರಿಯಿಸಿದ ಅವರು, ನಿಷೇಧವಿದ್ದರೂ ಅನಕೃತವಾಗಿ ಪ್ಲಕ್ಸ್ ಹಾಕುವ ಕೆಲಸ ಬೆಳಕಿಗೆ ಬರುತ್ತಿದೆ. ಬ್ಯಾನರ್‍ನಲ್ಲಿ ಇನ್ನುಮುಂದೆ ಯಾರು ಶುಭ ಕೋರುತ್ತಾರೋ ಅವರಿಗೆ ದಂಡ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬ್ಯಾನರ್ ತೆಗೆಯುವ ವೆಚ್ಚವನ್ನು ಅವರಿಂದಲೇ ಭರಿಸಲಾಗುವುದು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬ್ಯಾನರ್ ಹಾಕುವ ವಿಚಾರ ಕೆಲ ಕಡೆಗಳಲ್ಲಿ ಪ್ಲಕ್ಸ್ , ಬ್ಯಾನರ್ ಹಾಕಲು ಮುಖ್ಯ ಆಯುಕ್ತರು ಅನುಮತಿ ನೀಡಿದ್ದಾರೆ ಎಂದರು.

ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಮಾಡಿ ನಗರಾಭಿವೃದ್ಧಿ ಇಲಾಖೆಗೆ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಸರ್ಕಾರಕ್ಕೆ ಕಳುಹಿಸಿದ ಬಳಿಕ ಅನುಮೋದನೆ ಸಿಗಲಿದೆ. ಸರ್ಕಾರ ಅನುಮೋದನೆ ಸಿಕ್ಕಬಳಿಕ ಬಿಬಿಎಂಪಿ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button