ಬಿಬಿಎಂಪಿ ತುರ್ತು ಪರಿಸ್ಥಿತಿ ಮಳೆ, ಬೆಸ್ಕಾಂ ಸಂಪರ್ಕಿಸಲು ಹೊಸ ನಂಬರ್ ಹಾಗೂ ವಾಟ್ಸಪ್ಪ್ ಅಲ್ಲಿ ಸಂಪರ್ಕ.
BBMP helpline

ಬಿಬಿಎಂಪಿಯ ಸಹಾಯವಾಣಿ ಬೆಂಗಳೂರಿನ ಆಡಳಿತ ನೋಡಿಕೊಳ್ಳುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮಳೆ ಸಂದರ್ಭದಲ್ಲಿ ಸಂಪರ್ಕಿಸಬೇಕು. ಬಿಬಿಎಂಪಿ ಎಲ್ಲಾ ಸಹಾಯವಾಣಿಗಳನ್ನು ವಿಲೀನಗೊಳಿಸಿದೆ.
ಈಗ ಬಿಬಿಎಂಪಿಯನ್ನು ಸಂಪರ್ಕಿಸಲು ಉಚಿತ ಸಹಾಯವಾಣಿ ಸಂಖ್ಯೆ 1533. ಬಿಬಿಎಂಪಿಯ 24*7 ಸಹಾಯವಾಣಿ ಸಂಖ್ಯೆ 2266 0000.
ವಾಟ್ಸಪ್ ಮೂಲಕ ಸಂಪರ್ಕಿಸಲು ಸಂಖ್ಯೆ 94806 85700. ಇದರ ಜೊತೆಗೆ ಜನರು ತಮ್ಮ ವಿಭಾಗವಾರು ಕಚೇರಿಗಳನ್ನು ಸಹ ಸಂಪರ್ಕಿಸಬಹುದು.
ಬೆಸ್ಕಾಂ ಸಂಪರ್ಕಿಸುವುದು ಹೇಗೆ? ನಗರದಲ್ಲಿ ಮಳೆ ಬಂದರೆ ವಿದ್ಯುತ್ ವ್ಯವಸ್ಥೆ ಸಹ ಕೈ ಕೊಡುತ್ತದೆ. ಅದರಲ್ಲೂ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡರೆ ಜನರು ಬೆಸ್ಕಾಂ ಸಂಪರ್ಕಿಸಬೇಕಾಗುತ್ತದೆ.
ಬೆಸ್ಕಾಂ ಜನರ ಉಪಯೋಗಕ್ಕಾಗಿ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದೆ. ಒಂದು ವೇಳೆ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಬ್ಯುಸಿ ಇದ್ದರೆ ಜನರು ವಾಟ್ಸಪ್ ಮೂಲಕವೂ ದೂರು ನೀಡಬಹುದು.
ಉಳಿದರಂತೆ ಸಂಪರ್ಕ ಸಂಖ್ಯೆಗಳು ದಕ್ಷಿಣ ವಲಯ 82778 84011, ಪಶ್ಚಿಮ ವಲಯ 82778 84012, ಪೂರ್ವ ವಲಯ 82778 84013ಮ ಉತ್ತರ ವಲಯ 82778 84014.