ರಾಜಕೀಯ

ಬಿಜೆಪಿಗೆ ಡಿಕೆಶಿ ಸವಾಲು

ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯಾನರ್ ಹರಿದಿರುವುದಕ್ಕೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬ್ಯಾನರ್ ಹರಿಯೋದಲ್ಲ, ಅವರಿಗೆ ಧೈರ್ಯವಿದ್ದರೆ ಸಿದ್ಧರಾಮಯ್ಯ ಅವರಿಗಾಗಲೀ, ನನಗಾಗಲೀ ಚಾಕು ಹಾಕಲಿ ಎಂದು ಸವಾಲು ಹಾಕಿದ್ದಾರೆ.

ಬ್ಯಾನರ್ ಹರಿಯೋದರಲ್ಲಿ ಅವರ ತಾಕತ್ತು ತೋರಿಸುವುದಲ್ಲ ನಾವು ಮನಸ್ಸು ಮಾಡಿದರೆ ಬಿಜೆಪಿ ಅವರ ಬ್ಯಾನರ್‌ಗಳಿಗೆ ಬೆಂಕಿ ಹಚ್ಚುವುದು ಗೊತ್ತು, ಅವರ ಕಾರ್ಯಕ್ರಮ ನಿಲ್ಲಿಸುವುದು ಗೊತ್ತು ಎಂದು ಕಳಲೆ ಗೇಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಕ್ರೋಶ ಹೊರಹಾಕಿದರು.

ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೇ. ಆದರೆ ಬಿಜೆಪಿಯವರು ಟೀಕೆ ಮಡುತ್ತಿದ್ದಾರೆ. ಇದು ಸರಿಯಲ್ಲ. ಜನರ ಭಾವನೆ ಕೆರಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಜನರ ನೋವು ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂದು ಮಳೆ ಬಂದ ಕಾರಣ ಸ್ವಲ್ಪ ತಡವಾಗಿ ಪಾದಯಾತ್ರೆ ಆರಂಭವಾಯಿತು. ಕಾರ್ಯರ್ತರು ಹಾಗೂ ಜನರ ಉತ್ಸಾಹ ಇಂದು ಹೆಚ್ಚಿದೆ.

ಭಾರತ್ ಜೋಡೋ ಯಾತ್ರೆಯಿಂದ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದರು.ಕೊರೊನಾ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಚಾಮರಾಜನಗರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರ ಜತೆ ರಾಹುಲ್‌ಗಾಂಧಿ ಮತ್ತು ನಾನು ಮಾತನಾಡಿದ್ದೇವೆ. ಒಬ್ಬ ಮಂತ್ರಿಯಾಗಲಿ, ಅಧಿಕಾರಿಯಾಗಲಿ ಈ ದುರುಂತದಲ್ಲಿ ಸತ್ತ ಕುಟುಂಬದವರಿಗೆ ಸಹಾಯ ಮಾಡುವ ಕೆಲಸ ಮಾಡಲಿಲ್ಲ.

ನಮ್ಮ ಸರ್ಕಾರ ಬಂದೇ ಬರುತ್ತದೆ. ಅವರಿಗೆಲ್ಲಾ ನಾನು ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.ಸಿದ್ಧರಾಮಯ್ಯ ಹೇಳಿಕೆಇದೇ ಸಂದರ್ಭದಲ್ಲಿ ಮತಾನಾಡಿದ ವಿಪಕ್ಷ ನಾಯಕ ಸಿದ್ಧಱಾಮಯ್ಯ, ಜನರ ಉತ್ಸಾಹ ನೀವೇ ನೋಡುತ್ತಾ ಇದ್ದೀರಾ, ರಾಹುಲ್‌ಗಾಂಧಿ ಐತಿಹಾಸಿಕ ಪಾದಯಾತ್ರೆ ಮಾಡುತ್ತಿದ್ದಾರೆ.

ಭಾರವತನ್ನು ಒಗ್ಗೂಡಿಸಿದ್ದು ಕಾಂಗ್ರೆಸ್. ಪ್ರಾದೇಶಿಕವಾಗಿ ಭಾರತವನ್ನು ಒಂದು ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿಯವ ಟೀಕೆಗೆ ತಿರುಗೇಟು ನೀಡಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button