ಬಿಐಎಎಲ್ನಲ್ಲಿ ೧೩ ಕೋಟಿ ಕೊಕೇನ್ ಕ್ಯಾಪ್ಸುಲ್ ವಶ

ಕೊಕೇನ್ ಕ್ಯಾಪ್ಸುಲ್ಗಳನ್ನು ನುಂಗಿ ಮಾದಕ ವಸ್ತು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತನ ಹೊಟ್ಟೆಯಲ್ಲಿದ್ದ ಬರೋಬ್ಬರಿ ೧೩.೬ ಕೋಟಿ ಮೌಲ್ಯದ ೧೦೪ ಕೊಕೇನ್ ಕ್ಯಾಪ್ಸುಲ್ಗಳನ್ನು ವಶಕ್ಕೆ ಪಡೆಯಲಾಗಿದೆ.ಕಳೆದ ಸೆ.೨೦ರಂದು ಇಥಿಯೋಪಿಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಇಂಟಲಿಜೆನ್ಸ್ ಯುನಿಟ್(ಸಿಐಯು) ಅಧಿಕಾರಿಗಳು ಸಂಶಯಗೊಂಡು ವಿಚಾರಣೆ ನಡೆಸಿದ್ದಾಗ ಮಾದಕ ದ್ರವ್ಯ ಕಳ್ಳಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತನನ್ನು ಘಾನದಬಾಹ್ ಅಂಪಾಡು ಕ್ವಾಡ್ವೋ (೫೩) ಎಂದು ಗುರುತಿಸಲಾಗಿದೆ. ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯನ್ ಏರ್ಲೈನ್ಸ್ ಫ್ಲೈಟ್ ಇಟಿ ೬೯೦ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ.ಸಂಶಯದ ಮೇರೆಗೆ ಕಸ್ಟಮ್ಸ್ನ ಅಧಿಕಾರಿಗಳು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದಕೀಯ ತಪಾಸಣೆ ನಡೆಸಿದಾಗ ಆತನ ಕಿಬ್ಬೊಟ್ಟೆಯಲ್ಲಿ ಕ್ಯಾಪ್ಸುಲ್ಗಳನ್ನು ತೋರಿಸಿದೆ.
ಬಹಳ ಎಚ್ಚರಿಕೆಯಿಂದ ೧೦೪ ಕ್ಯಾಪ್ಸುಲ್?ಗಳನ್ನು ಹೊರಗೆ ತೆಗೆಯಲಾಗಿದೆ. ಮೂರು ದಿನದೊಳಗೆ ಕ್ಯಾಪ್ಸುಲ್?ಗಳನ್ನು ಹೊರಗೆ ತೆಗೆಯದಿದ್ದಲ್ಲಿ ಆತನ ಜೀವಕ್ಕೆ ಅಪಾಯ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಆರೋಪಿಯಿಂದ ಒಟ್ಟು ೧.೨ ಕೆಜಿಯ ೧೦೪ ಕ್ಯಾಪ್ಸುಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ೧೩.೬ ಕೋಟಿ ಎಂದು ಅಂದಾಜಿಸಲಾಗಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.