ಬಾಳೆಹಣ್ಣು ಹೆಚ್ಚು ತಿನ್ನಬಾರದು ಎಂದು ಇದಕ್ಕೆ ಹೇಳುವುದು!

ಬಾಳೆಹಣ್ಣಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಇರುತ್ತವೆ ಮತ್ತು ಅಷ್ಟೇ ರುಚಿಕರವಾಗಿ ಕೂಡ ಬಾಳೆಹಣ್ಣು ಇರುತ್ತದೆ. ಬೆಳಗಿನ ಸಂದರ್ಭದಲ್ಲಿ ತಿಂಡಿ ತಿನ್ನುವಾಗ ಬಾಳೆಹಣ್ಣು ತಿನ್ನ ಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಮಧ್ಯಾಹ್ನ ಊಟ ಮಾಡಿದ ನಂತರದಲ್ಲಿ ಮತ್ತು ಸಂಜೆಯ ಸ್ನಾಕ್ಸ್ ಸಂದರ್ಭದಲ್ಲಿ ಕೂಡ ಚಹಾದ ಜೊತೆಗೆ ಬಾಳೆಹಣ್ಣು ಸವಿಯಬಹುದು. ವರ್ಷದ ಯಾವುದೇ ಸಮಯದಲ್ಲಿ ಸಿಗುವ ಹಣ್ಣು ಇದಾಗಿರುವುದರಿಂದ ಇದರಿಂದ ನಿರಂತರವಾದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಹಾಗೆಂದು ಅತಿಯಾಗಿ ಬಾಳೆಹಣ್ಣು ತಿನ್ನಲು ಹೋದರೆ, ಅದರಿಂದ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ ಎಂದು ವೈದ್ಯರು ಎಚ್ಚರಿಕೆ ಕೊಡುತ್ತಾರೆ. ಹಾಗಾದರೆ ಹೆಚ್ಚು ಹೆಚ್ಚು ಬಾಳೆಹಣ್ಣು ತಿಂದರೆ ಏನಾಗುತ್ತದೆ? ನೋಡೋಣ ಬನ್ನಿ.ಯಾವುದೇ ಆಹಾರ ನಮಗೆ ಮಿತಿಯಲ್ಲಿರಬೇಕು. ಅದು ಆರೋಗ್ಯಕರವಾಗಿದ್ದರು ಕೂಡ.
ಇಲ್ಲಿ ಬಾಳೆಹಣ್ಣು ಕೂಡ ಅಷ್ಟೇ. ಮಿತಿಯಲ್ಲಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಆದರೆ ಮಿತಿಮೀರಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲು ಹೋದರೆ ಈ ಕೆಳಗಿನ ಆರೋಗ್ಯ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ.ಹೌದು.
ನಿಯಮಿತ ಪ್ರಮಾಣದಲ್ಲಿ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಮತ್ತು ಅಗತ್ಯ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತವೆ. ಆದರೆ ಬಾಳೆಹಣ್ಣಿನ ಸೇವನೆ ಪ್ರಮಾಣ ಹೆಚ್ಚಾದರೆ ದೇಹಕ್ಕೆ ಪೌಷ್ಟಿಕ ಸತ್ವಗಳ ಕೊರತೆ ಉಂಟಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಪ್ರೋಟೀನ್ ಹಾಗೂ ಒಳ್ಳೆಯ ಕೊಬ್ಬಿನಾಂಶ ಸಿಗದೇ ಹೋಗಬಹುದು!ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಅಂದರೆ ಕೆಲವರು ಬಾಳೆ ಹಣ್ಣಿನ ಡಯೆಟ್ ಫಾಲೋ ಮಾಡುತ್ತಿರುತ್ತಾರೆ. ಕೇವಲ ಬಾಳೆಹಣ್ಣು ತಿಂದು ಬದುಕುವ ಡಯಟ್ ಪದ್ಧತಿ ಇದಾಗಿದೆ.
ಇಂತಹ ಸಂದರ್ಭಗಳಲ್ಲಿ ಒಂದು ವಿಚಾರ ಅರ್ಥಮಾಡಿಕೊಳ್ಳಬೇಕು.ಅದೇನೆಂದರೆ ದೇಹಕ್ಕೆ ಪ್ರೊಟೀನ್ ಮತ್ತು ಒಳ್ಳೆಯ ಕೊಬ್ಬಿನ ಅಂಶದ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಇವೆರಡು ಸಮರ್ಪಕವಾಗಿ ಸಿಗುವುದಿಲ್ಲ. ದೇಹಕ್ಕೆ ನಿಜವಾದ ಪೌಷ್ಟಿಕಾಂಶಗಳ ಕೊರತೆ ಎದುರಾಗುತ್ತದೆ.
ಇದನ್ನು ಅನಿಯಂತ್ರಿತ ತೂಕ ಹೆಚ್ಚಳ ಎಂದು ಕರೆಯಬಹುದು. ಯಾರು ಈಗಾಗಲೇ ತುಂಬಾ ಹೆಚ್ಚಿನ ದೈಹಿಕ ತೂಕ ಹೊಂದಿದ್ದಾರೆ ಅಂತಹವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಒಂದು ಡಯಟ್ ಪದ್ಧತಿಯನ್ನು ಅನುಸರಿಸುತ್ತಿರುತ್ತಾರೆ.ಆದರೆ ಈ ಸಂದರ್ಭದಲ್ಲಿ ಬಾಳೆಹಣ್ಣು ಹೆಚ್ಚಾಗಿ ಸೇವನೆ ಮಾಡುವುದರಿಂದ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತದೆ.
ದೇಹದ ತೂಕ ತುಂಬಾ ಹೆಚ್ಚಾಗುತ್ತದೆ.ಮಾಗಿದ ಬಾಳೆಹಣ್ಣು ತಿನ್ನುವ ಆಹಾರ ಪದ್ಧತಿಯೇ ಬೇರೆ. ಅದೇ ರೀತಿ ಬಾಳೆಕಾಯಿ ಅಥವಾ ಹಸಿ ಬಾಳೆಹಣ್ಣು ತಿನ್ನುವುದರ ಆಹಾರ ಪದ್ಧತಿ ಇನ್ನೊಂದು ತರಹ.ಯಾರು ಬಾಳೆಕಾಯಿ ಸ್ವಲ್ಪ ಹೆಚ್ಚು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಅವರಿಗೆ ಮಲಬದ್ಧತೆ ಸಮಸ್ಯೆ ತಪ್ಪಿದ್ದಲ್ಲ.
ಏಕೆಂದರೆ ಇದರಲ್ಲಿ ಸ್ಟಾರ್ಚ್ ಪ್ರಮಾಣ ತುಂಬಾ ಇದೆ. ಹಾಗಾಗಿ ಇದು ಮಲಬದ್ಧತೆಗೆ ಕಾರಣವಾಗುತ್ತದೆ.ನಾವು ಮೊದಲೇ ಹೇಳಿದ ಹಾಗೆ ನಮ್ಮ ದೇಹಕ್ಕೆ ಒಳ್ಳೆಯ ಪ್ರಮಾಣದಲ್ಲಿ ಕೊಬ್ಬಿನ ಅಂಶದ ಅವಶ್ಯಕತೆ ಇರುತ್ತದೆ.
ಆದರೆ ಬಾಳೆ ಹಣ್ಣಿನಲ್ಲಿ ಇದು ಇರುವುದಿಲ್ಲ.ಹಾಗೆಂದು ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ತಿನ್ನಲು ಹೋದರೆ ಅದು ಇನ್ನೊಂದು ರೀತಿಯ ಆರೋಗ್ಯದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು.
ಹಾಗಾಗಿ ಅತಿಯಾಗಿ ಬಾಳೆಹಣ್ಣು ತಿನ್ನುವುದನ್ನು ಬಿಟ್ಟು ಒಳ್ಳೆಯ ಕೊಬ್ಬಿನ ಅಂಶ ಇರುವ ಇನ್ನಿತರ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು.