
ಲುಡೋ ಗೇಮ್ ಆಡುವಾಗ ಉಂಟಾದ ಜಗಳದಲ್ಲಿ ಬಾಲಕನ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದಿದೆ. ಶಾಮಾರಾಯ ಪರೀಟ್ (16) ಕೊಲೆಯಾದ ಬಾಲಕ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಯುವಕನನ್ನು ಸಚೀನ್ ಕಿರಸಾವಳಗಿ (22) ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದಿದೆ.
ಲೂಡೊ ಆಡುವಾಗ ನಾನು ಗೆದ್ದೆ.. ನಾನು ಗೆದ್ದೆ ಎಂದು ಜಗಳವಾಡಿದ್ದಾರೆ. ಈ ವೇಳೆ ಶಾಮರಾಯ ಸಹೋದರ ಜಗಳ ಬಿಡಿಸಿ ಸಮಾಧಾನಮಾಡಿದ್ದರು. ಆದರೂ, ಸಚಿನ್ ಸಮಾಧಾನಗೊಳ್ಳದೆ ಮನೆಯಿಂದ ಚಾಕು ತಂದು ಶಾಮರಾಯನ ಎದೆಗೆ ಇರಿದಿದ್ದಾನೆ. ಇರಿತ ದಿಂದ ಗಾಯಗೊಂಡ ಶಾಮರಾಯನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.