
ಬಾಲಕನನ್ನು ಬೀದಿನಾಯಿಗಳು ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಎಳೆದೊಯ್ದು ಮಾರಣಾಂತಿಕವಾಗಿ ಕಚ್ಚಿ ಗಾಯಗೊಳಿಸಿ ಕೊಂದು ಹಾಕಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ವಿರಾಜ್ ರಾಜ್(5) ಬೀದಿನಾಯಿಗಳ ದಾಳಿಗೆ ತುತ್ತಾದ ಬಾಲಕ.
ತನ್ನ ಸಹೋದರಿಯೊಂದಿಗೆ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದಾಗ ಏಕಾಏಕಿ ಬೀದಿನಾಯಿಗಳು ಸುತ್ತುವರೆದು ಬಾಲಕನ ಮೇಲೆ ಎರಗಿದ್ದಾವೆ. ಕೂಡಲೇ ಸಹೋದರಿ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾಳೆ. ಬೆಳಗಿನ ಜಾವ ಆಗಿದ್ದರಿಂದ ಅಲ್ಲಿ ಯಾರ ಓಡಾಟವೂ ಇರಲಿಲ್ಲ. ಕೊನೆಗೂ ಬಾಲಕ ಬೀದಿನಾಯಿಗಳ ದಾಳಿಗೆ ಬಲಿಯಾಗಿದ್ದಾನೆ.