ರಾಜ್ಯ

ಬಾಬಾಸಾಹೇಬರ ಡಾll ಬಿಆರ್ ಅಂಬೇಡ್ಕರ್ ವಿಮೋಚನ ರಥವನ್ನು ಎಳೆಯುವ ಪ್ರಯತ್ನದಲ್ಲಿ ಬಿ.ಎಂ. ಮುನಿಮಾರಪ್ಪ

ಪ್ರಾರಂಭಿಕ ಜೀವನ ಮತ್ತು ಹಿನ್ನೆಲೆ: ಶ್ರೀಯುತ ಮುನಿಮಾರಪ್ಪನವರು 16/05/1976 ರಂದು ಬೆಂಗಳೂರು ನಗರ ಜಿಲ್ಲೆಯ ಇಂದಿರಾನಗರದ ಭಿನ್ನಮಂಗಲ ಸ್ಲಮ್ ನಿವಾಸಿಗಳಾದ ಪಿ.ಮಾರಪ್ಪ ಮತ್ತು ಪಾರ್ವತಮ್ಮನವರ 11 ಮಕ್ಕಳ (6 ಹೆಣ್ಣು, 5ಗಂಡು) ಪೈಕಿ 8ನೇ ಮಗುವಾಗಿ ಜನಿಸಿದರು. ಇವರ ತಾಯಿ ಬಹಳ ಸಣ್ಣ ವಯಸ್ಸಿಗೆ (38 ವರ್ಷ) ತೀರಿಕೊಂಡ ಪರಿಣಾಮ ಮಕ್ಕಳ ಸಂಪೂರ್ಣ ಜವಾಬ್ದಾರಿ ಇವರ ತಂದೆ ಒಬ್ಬರ ಮೇಲೆಯೇ ಬಿತ್ತು. ಕೂಲಿನಾಲಿ ಮಾಡಿಕೊಂಡು ಮಕ್ಕಳನ್ನು ಸಾಕುತ್ತಿದ್ದ ತಂದೆಯನ್ನು ನೋಡಿ ಸಣ್ಣ ಪ್ರಾಯದ ಹೆಣ್ಣು ಮಕ್ಕಳು ಬಂಗಲೆ ಕೆಲಸ ಮಾಡುತ್ತಿದ್ದರು, ಗಂಡು ಮಕ್ಕಳು ಊರ ಶ್ರೀಮಂತರ ಹಸುಗಳನ್ನು ಮೇಯಿಸುತ್ತ ದನಗಳ ಕೊಟ್ಟಿಗೆಯಲ್ಲಿ ದನಕರುಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಹೀಗೆ ಮುನಿಮಾರಪ್ಪ ನವರು ಶ್ರೀಮಂತರ ಮನೆಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಊಟವನ್ನು ಗಳಿಸಿ ತನ್ನ ತಮ್ಮಂದಿರನ್ನು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದರು.ಕೆಲಸದ ಹಿನ್ನೆಲೆ (ಕೂಲಿಯಿಂದ ಲಾರಿ ಡ್ರೈವರ್): ಇದೇ ಊರಿನಲ್ಲಿ ಕೆಲವರು ಲಾರಿ ಡ್ರೈವರ್ ಗಳಾಗಿ ಹಾಗೂ ಕ್ಲೀನರ್,ಕೂಲಿಗಳಾಗಿ ಕೆಲಸ ಮಾಡುತ್ತಿದ್ದರು. ಅವರ ಜೊತೆಗೆ ಮುನಿಮಾರಪ್ಪ ಸುಮಾರು 13ವರ್ಷದ ಹುಡುಗನಿದ್ದಾಗಲೇ ಮರಳು ಲಾರಿಗಳಲ್ಲಿ ಕೂಲಿಯಾಗಿ ಕೆಲಸ ಮಾಡಲು ಹೋಗುತ್ತಿದ್ದರು. ಇವರ 15 ವರ್ಷ ವಯಸ್ಸಿಗೆ ಲಾರಿ ಡ್ರೈವರ್ ಆಗಿಬಿಟ್ಟರು. ಅಂದಿನಿಂದ ಹಗಲು-ಇರಲುಗಳನ್ನು ಲೆಕ್ಕಿಸದೇ ಕೆಲಸ ಮಾಡಿ, ಹಣ ಗಳಿಸಿ ತಮ್ಮ ಒಡಹುಟ್ಟಿದವರಿಗೆ ಆಸರೆಯಾಗಿದ್ದರು‌.ಮದುವೆ: ಇದೇ ಸ್ಲಮ್ ಪ್ರದೇಶದಲ್ಲಿ 2002 ರಲ್ಲಿ ಮುನಿಮಾರಪ್ಪ ಸ್ವಂತವಾಗಿ ಮನೆಯನ್ನು ಕಟ್ಟಿ ಅವರ ಹಳೇ ಮನೆಗಳನ್ನೆಲ್ಲಾ ರಿಪೇರಿ ಮಾಡಿಸಿ, 2003ರಲ್ಲಿ ಪೌರಕಾರ್ಮಿಕನ ಮಗಳನ್ನು ಮದುವೆಯಾದರು. ಇವರ ಕುಟುಂಬದ ಪೈಕಿ ಮೊಟ್ಟ ಮೊದಲ ಬಾರಿಗೆ ಮದುವೆ ಮಂಟಪದಲ್ಲಿ ಮದುವೆಯಾದವರೂ ಸಹ ಇವರೇ ಆಗಿದ್ದರು.ಲಾರಿ ಡ್ರೈವರ್ನಿಂದ ಲಾರಿ ಮಾಲೀಕ: ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮುನಿಮಾರಪ್ಪ ಮದುವೆಯಾದ ಮೂರೇ ವರ್ಷಗಳಲ್ಲಿ ಸ್ವಂತ ಲಾರಿಯನ್ನು ಕೊಂಡು ಮಾಲಿಕರಾದರು. ಅಂದು ಊರ ಶ್ರೀಮಂತರ ಸರಿಸಮಾನವಾಗಿ ಒಬ್ಬ ದಲಿತ ಲಾರಿ ಮಾಲಿಕನಾದ ಮುನ್ನಡೆ ಅನೇಕರಿಗೆ ಸಹಿಸಲಾರದ ಸಂಗತಿಯಾಗಿತ್ತು. ಡ್ರೈವರ್ ಆಗಿದ್ದ ಮುನಿಮಾರಪ್ಪ ಅವರ ಲಾರಿಗೆ ಇನ್ನೊಬ್ಬ ಡ್ರೈವರನ್ನು ಕೆಲಸಕ್ಕಿಟ್ಟು, ಸಿವಿಲ್ ಕಂಟ್ರಕ್ಷನ್ ಫೀಲ್ಡ್ ಗೆ ಇಳಿದು ಇನ್ನೊಂದು ಲಾರಿಯನ್ನೂ ಕೊಂಡರು. ಇದಾದ ಕೆಲವೇ ವರ್ಷಗಳಲ್ಲಿ ತಮ್ಮ ಬಿಜಿನೆಸ್ ವಿಚಾರದಲ್ಲಿ ನಂಬಿದವರೇ ಮೋಸ ಮಾಡಿದ ಪರಿಣಾಮ ತಮ್ಮ ಎರಡೂ ಲಾರಿಗಳನ್ನು ಕಳೆದುಕೊಂಡರು.ರಾಜಕೀಯ ಹಿನ್ನೆಲೆ: ಆರ್ಥಿಕವಾಗಿ ಬಹಳಷ್ಟು ನಷ್ಟವಾಗಿದ್ದ ಇವರು ಸಣ್ಣ ಪುಟ್ಟ ಕಂಟ್ರಕ್ಷನ್ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಬಿಜೆಪಿ ಕಾರ್ಪೊರೇಟರ್ ಗಳ ನಂಟನ್ನು ಬೆಳೆಸಿ ಬಿಜೆಪಿ ಪಕ್ಷದಲ್ಲಿ ಸುಮಾರು ಆರೇಳು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿ, ತಮಗೆ ನೀಡಿದ ಬೂತ್ ಗಳಲ್ಲಿ ಬಿಜೆಪಿ ಗೆ ಲೀಡ್ ಬರುವಂತೆ ಮಾಡುತ್ತಿದ್ದರು‌. ಯಾವುದೇ ಹಣಕ್ಕಾಗಿ ಆಸೆ ಪಡದೆ ಜನ ಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ಜನರಿಗೆ ಮೂಲಭೂತ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದರು‌. ಚಳುವಳಿ ಜೀವನಕ್ಕೆ ಬಂದಮೇಲೆ ‘ಅಂಬೇಡ್ಕರೈಟ್ ಪಾರ್ಟಿ ಆಫ್ ಇಂಡಿಯಾ’ ದಿಂದ 2018 ರಲ್ಲಿ ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ಶಾಸಕರ ವಿರುದ್ಧ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಯಾವ ಶಾಸಕನ ಬಳಿ ಕೆಲಸ ಮಾಡುತ್ತಿದ್ದರೋ ಅದೇ ಶಾಸಕನ ವಿರುದ್ಧ ಸ್ಪರ್ಧಿಸಿ, ಮತ ಎಣಿಕೆ ಕೇಂದ್ರದಲ್ಲಿ ಅದೇ ಶಾಸಕನ ಸಮನಾಗಿ ಕುಳಿತು ಮತ ಎಣಿಕೆ ವೀಕ್ಷಿಸಿದ್ದು ನಿಜಕ್ಕೂ ರೋಚಕ.ಚಳುವಳಿ ಜೀವನ: 2014 ರಲ್ಲಿ ಮೋದಿ ಗೆಲುವಿಗಾಗಿ ಅವಿರತ ಶ್ರಮ ವಹಿಸಿ ತಮ್ಮ ಕ್ಷೇತ್ರವಲ್ಲದೇ ಬೆಂಗಳೂರಿನಾದ್ಯಂತ ಇರುವ ಸ್ನೇಹಿತರಿಗೆಲ್ಲಾ ಬಿಜೆಪಿ ಪಕ್ಷಕ್ಕೆ ಓಟ್ ನೀಡುವಂತೆ ಒತ್ತಾಯಿಸಿ ಲೀಡ್ ಕೊಡಿಸಿದ ಮುನಿಮಾರಪ್ಪನವರಿಗೆ ಮೋದಿ ಪ್ರಧಾನಿ ಆದ ಮೇಲೆ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳ ಸುದ್ದಿಗಳೇ ಹೆಚ್ಚಾದ ಕಾರಣಗಳ ತಿಳಿದು, ಅದಾಗಲೇ ಬಾಬಾಸಾಹೇಬರ ಚಳುವಳಿಯ ಬಗ್ಗೆ ಜಾಗೃತಗೊಂಡಿದ್ದ ಒಬ್ಬ ಯುವ ಚಿಂತಕನ ಜೊತೆ ಪ್ರತಿದಿನ ನಿರಂತರ ಚರ್ಚೆ ನಡೆಸಿ, ಬಿಜೆಪಿ ಪಕ್ಷದ ನೈಜ ಸಿದ್ಧಾಂತಗಳ ತಿಳಿದುಕೊಂಡರು‌.2015ರಲ್ಲಿ ‘ಡಿ.ಎಸ್.ಎಸ್ ಭೀಮ್ ವಾದ’ದಲ್ಲಿ ಗುರುತಿಸಿಕೊಂಡು ನಂತರ ‘ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ’ಯ ರಾಜ್ಯ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಸೈದ್ಧಾಂತಿಕ ಕಾರಣಗಳಿಂದ ಹೊರಬಂದು 2016 ರಲ್ಲಿ ‘ಬಹುಜನ ಅಂಬೇಡ್ಕರ್ ಸಂಘ’ದ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಘದ ಬಲವರ್ಧನೆಗೆ ಶ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಬೌದ್ಧ ಧಮ್ಮ ಕಾರ್ಯ ಮಾಡಲು “ಕರ್ನಾಟಕ ಬೌದ್ಧ ಸಮಾಜ”ದ ಜೊತೆಯೂ ಗುರುತಿಸಿಕೊಂಡಿರುತ್ತಾರೆ ಕಾರಣಾಂತರಗಳಿಂದ 2019 ರಲ್ಲಿ ಬಹುಜನ ಅಂಬೇಡ್ಕರ್ ಸಂಘಕ್ಕೆ ರಾಜೀನಾಮೆ ನೀಡಿ, ತಮ್ಮ ಒಡನಾಡಿಗಳ ಜೊತೆ ಚರ್ಚಿಸಿ ಅವರ ಸಹಕಾರದಿಂದ 2019ರ ಡಿಸೆಂಬರ್ 6ರಂದು “ಮೂಲನಿವಾಸಿ ಅಂಬೇಡ್ಕರ್ ಸೇನೆ”ಯ ಸ್ಥಾಪನೆಗೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಮೂಲನಿವಾಸಿ ಅಂಬೇಡ್ಕರ್ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸೇವಾ ಸಾಧನೆಗಳು: ಮುನಿಮಾರಪ್ಪ ಮೊದಲಿನಿಂದಲೂ ಪ್ರಚಾರಕ್ಕಾಗಿ ಪೋಸು ಕೊಡುವವರಲ್ಲ. ಅವರು ಎಂತದ್ದೇ ಕೆಲಸ ಮಾಡಿದ್ದರೂ ಹೀಗೆಲ್ಲ ಮಾಡಿದ್ದೇನೆ ಎಂದು ಜಂಭ ಕೊಚ್ಚಿಕೊಳ್ಳುವುದಿಲ್ಲ! ಯಾರಾದರೂ “ಅರೇ! ಎಂಥ ಒಳ್ಳೆಯ ಕೆಲಸ ಮಾಡಿದ್ದೀರಿ ಫೇಸ್ ಬುಕ್ ನಲ್ಲಿ ಹಾಕಿ” ಎಂದು ಬಲವಂತ ಮಾಡಿದರೆ ಮಾತ್ರ ಹಾಕುತ್ತಾರೆ‌. ಇವರು ಸರ್ಕಾರದಿಂದ ಸುಮಾರು ಐದಾರು ವರ್ಷಗಳಲ್ಲಿ 50ಕ್ಕೂ ಹೆಚ್ಚಿನ ಜನರಿಗೆ 1 ಲಕ್ಷ ರೂಪಾಯಿಗಳ ಸಾಲವನ್ನು ಕೊಡಿಸಿದ್ದಾರೆ, 50ಕ್ಕಿಂತ ಹೆಚ್ಚಿನ ಕಾರು ಮತ್ತು ಆಟೋಗಳನ್ನು ಕೊಡಿಸಿದ್ದಾರೆ, ಒಂದು ಸಾವಿರಕ್ಕಿಂತ ಹೆಚ್ಚಿನ ಪೊಲೀಸ್ ಸ್ಟೇಷನ್ ಕೇಸುಗಳನ್ನು ಪರಿಹರಿಸಿದ್ದಾರೆ. ಸುಮಾರು 100ಜನ ಬೀದಿ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ತಲಾ 10ಸಾವಿರ ರೂ.ಗಳನ್ನು ಉಚಿತವಾಗಿ ಕೊಡಿಸಿದ್ದಾರೆ, 120ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಜಾತಿ ಪ್ರಮಾಣ ಪತ್ರಗಳನ್ನು ಮಾಡಿ ಕೊಟ್ಟಿದ್ದಾರೆ. 125 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಾಯೋಜಕರಿಂದ ಅಡ್ಮಿಷನ್ ಫೀಸುಗಳನ್ನು ಕೊಡಿಸಿದ್ದಾರೆ‌. ಹೀಗೆ ಯಾವುದೇ ಕೆಲಸವನ್ನು ಮಾಡಿದರೂ ಒಂದು ರೂಪಾಯಿ ಲಂಚವನ್ನು ಮುಟ್ಟದೇ, ಸಂಘಟನೆಯಿದೆ ಎಂದು ದಬ್ಬಾಳಿಕೆ ಮಾಡಿ ರೋಲ್ ಕಾಲ್ ಮಾಡದೇ, ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥವಾಗಿ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.ಕೋವಿಡ್-19 ಸೇವೆ: ಕೊರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಬೀದಿಗಿಳಿದು ಶೋಷಿತ ಸಮುದಾಯಗಳನ್ನು ಗುರುತಿಸಿ 850 ಕುಟುಂಬಗಳಿಗೆ ಉಚಿತ ರೇಷನ್ ಕಿಟ್ ಗಳನ್ನು ನೀಡಿದ್ದಾರೆ ಹಾಗೂ 13500 ಜನರಿಗೆ ಉಚಿತವಾಗಿ ಊಟವನ್ನು ಒದಗಿಸಿದ್ದಾರೆ. ಒಟ್ಟಾರೆ ಮುನಿಮಾರಪ್ಪ ನವರು ಸಂಬಳ ಬರುವಂತ ಯಾವ ಕೆಲಸವನ್ನೂ ಮಾಡದೇ ಶೋಷಿತ ಸಮುದಾಯಗಳ ಜಾಗೃತಿ ಮತ್ತು ಅಭಿವೃದ್ಧಿಗಾಗಿ ನಿಸ್ವಾರ್ಥ ಮತ್ತು ಪ್ರಾಮಾಣಿಕ ಚಳುವಳಿಯ ಸೇವೆ ಮಾಡುತ್ತಿದ್ದಾರೆ. ಅವರಿಗೆ ಬಾಬಾಸಾಹೇಬರ ವಿಮೋಚನ ರಥವನ್ನು ಎಳೆಯುವ ಪ್ರಯತ್ನ ಮಾಡುತ್ತಿರುವ ಪ್ರತಿಯೊಬ್ಬರೂ ಸಹಕಾರ ನೀಡಲಿ ಎಂದು ಆಶಿಸುತ್ತೇನೆ.ಇಂದು ಅವರ ಹುಟ್ಟು ಹಬ್ಬ. ಅವರಿಗೆ ಬುದ್ಧ ಬಸವ ಬಾಬಾಸಾಹೇಬರ ಆಶೀರ್ವಾದಗಳಿರಲಿ, ಅವರ ಕನಸುಗಳೆಲ್ಲಾ ನನಸಾಗಲಿ ಎಂದು ಶುಭ ಹಾರೈಸುತ್ತೇನೆ. ಜೈ ಭೀಮ್ Cನ

Related Articles

Leave a Reply

Your email address will not be published. Required fields are marked *

Back to top button