Educationರಾಜ್ಯ

ಬದಲಾಗದ ಭೂಮಾಲೀಕತ್ವ; ಶಿವಮೊಗ್ಗದಲ್ಲಿ ಶಾಲೆಗಳಿಗೂ ಭೂಮಿ ಕಳೆದುಕೊಳ್ಳುವ ಭೀತಿ..!

ಶಿವಮೊಗ್ಗ: ನಗರ ಮತ್ತು ಗ್ರಾಮಾಂತರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ನೂರಾರು ಸರಕಾರಿ ಶಾಲೆಗಳು ಭೂ ಒಡೆತನದ ಕಾರಣದಿಂದಾಗಿ ಜಾಗವನ್ನು ಕಳೆದುಕೊಳ್ಳುವ ಭೀತಿಗೆ ಒಳಗಾಗಿವೆ.

ಕಟ್ಟಡದ ಕಾರಣಕ್ಕೆ ಅದು ಸರಕಾರಿ ಶಾಲೆ ಜಾಗವೆಂದರೂ ದಾಖಲೆಗಳು ಬೇರೆ ಯಾರದ್ದೋ ಹೆಸರನ್ನು ಹೇಳುತ್ತಿವೆ.

ಹಳೇ ದಾಖಲೆಗಳನ್ನು ಮುಂದಿಟ್ಟುಕೊಂಡು ಶಾಲೆ ಜಾಗವನ್ನು ಬಿಟ್ಟುಕೊಡುವಂತೆ ಕೆಲವರು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದರೆ, ಇನ್ನೂ ಕೆಲವರು ಕಟ್ಟಡ ತೆರವು ಮಾಡಿಕೊಂಡುವಂತೆ ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದಾರೆ.

ಹಲವು ದಶಕಗಳ ಹಿಂದೆ, ಕೆಲವರು ಸ್ವಾತಂತ್ರ್ಯಪೂರ್ವದಲ್ಲಿ ತಮ್ಮೂರಿನ ಮಕ್ಕಳ ಶೈಕ್ಷಣಿಕ ಉದ್ದೇಶದಿಂದ ಹಿರಿಯರು ತಮ್ಮ ಭೂಮಿಯನ್ನು ದಾನ ನೀಡಿದ್ದಲ್ಲದೆ ಕಟ್ಟಡವನ್ನೂ ಕಟ್ಟಿಸಿಕೊಟ್ಟಿದ್ದರು. ಶಾಲೆಗೆ ಭೂಮಿ ನೀಡಿದ ಬಗ್ಗೆ ದಾನಪತ್ರವನ್ನೂ ಮಾಡಿಕೊಟ್ಟಿದ್ದರು.

ಆದರೆ, ಇತ್ತೀಚೆಗೆ ಭೂಮಿಯ ಬೆಲೆ ಗಗನಕ್ಕೇರಿದ ಬಳಿಕ ಆ ಕುಟುಂಬದವರು ಶಾಲೆ ಭೂಮಿಯನ್ನು ಬಿಟ್ಟುಕೊಡುವಂತೆ ಈಗ ಶಿಕ್ಷಣ ಇಲಾಖೆ, ಡಿಸಿ ಕಚೇರಿ ಮತ್ತು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ.

ಕಾನೂನು ಪ್ರಕಾರ ಭೂಮಿ ದಾನ ನೀಡಿದ ಮೇಲೆ ಅವರ ಕುಟುಂಬದವರಿಗೂ ಹಕ್ಕು ಚಲಾಯಿಸಲು ಅವಕಾಶ ಇರುವುದಿಲ್ಲ. ಆದರೆ, ದಾನ ನೀಡಿದ ಭೂಮಿಯ ಒಡೆತನ ಬದಲಾಗದಿರುವ ಕಾರಣದಿಂದಾಗಿ ಕೆಲ ಕುಟುಂಬದವರು ಭೂಮಿಯನ್ನು ವಾಪಸ್‌ ಕೇಳುತ್ತಿದ್ದಾರೆ.

ಶಾಲೆಗೆ ಹಿರಿಯರು ಭೂಮಿ ದಾನ ನೀಡಿದ ಬಳಿಕ ಆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಭೂಮಿ ಒಡೆತನವನ್ನು ಶಾಲೆಯ ಹೆಸರಿಗೆ ಬದಲಾಯಿಸಿಕೊಳ್ಳಬೇಕು. ಆದರೆ, ಅವರು ಆಗ ತೋರಿದ ನಿರ್ಲಕ್ಷ್ಯ ಈಗ ಸಮಸ್ಯೆ ಕುತ್ತಿಗೆಗೆ ಬಂದು ನಿಂತಿದೆ.

ದಾಖಲೆಗಳು ಬದಲಾಗದಿದ್ದರೂ ದಾನಪತ್ರ ಇದ್ದವರಿಗೆ ಕಾನೂನು ಸಮಸ್ಯೆ ಎದುರಾಗುವುದಿಲ್ಲ. ಅಂತಹ ಶಾಲೆಗಳು ಈಗಲೂ ಭೂ ಒಡೆತನವನ್ನು ಬದಲಾಯಿಸಿಕೊಳ್ಳಬಹುದು.

ಆದರೆ, ಬಹಳಷ್ಟು ಶಾಲೆಗಳು ದಾನಪತ್ರವನ್ನು ಕಳೆದುಕೊಂಡಿವೆ. ಇನ್ನು ಕೆಲವೆಡೆ ದಾನಪತ್ರವನ್ನೂ ಬರೆಸಿಕೊಳ್ಳದಿರುವುದು ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದೆ.

ಶಾಲೆಗಳ ಭೂ ಒಡೆತನಕ್ಕೆ ಸಂಬಂಧಪಟ್ಟಂತೆ ಸಮೀಕ್ಷೆ ನಡೆಸಲಾಗಿದೆ. ದಾನಪತ್ರಗಳ ಆಧಾರದ ಮೇಲೆ ತ್ವರಿತವಾಗಿ ದಾಖಲೆಗಳನ್ನು ಮಾಡಿಕೊಳ್ಳುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಸರಕಾರಿ, ಕಂದಾಯ ಇಲಾಖೆ ಒಡೆತನದಲ್ಲಿರುವ ಶಾಲೆಗಳನ್ನು ಜಿಲ್ಲಾಧಿಕಾರಿಗಳು ಮತ್ತು ಗ್ರಾಮ ಠಾಣಾದಲ್ಲಿರುವ ಶಾಲೆಗಳನ್ನು ಸಿಇಒ ಗಮನಕ್ಕೂ ತರಲಾಗಿದೆ ಎಂದು ಡಿಡಿಪಿಐ ಪರಮೇಶ್ವರಪ್ಪ ಹೇಳಿದ್ರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button