ಬಂಧನ ಭೀತಿಯಲ್ಲಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ!

ಬೆಂಗಳೂರು : ಆನೇಕಲ್ ಅಲಯನ್ಸ್ ಯೂನಿವರ್ಸಿಟಿಯ ಸಹೋದರರಿಬ್ಬರ ಗದ್ದುಗೆಗಾಗಿ ಗುದ್ದಾಟ ಮತ್ತೊಮ್ಮೆ ಬೀದಿಗೆ ಬಂದಿದೆ.
ಇದೀಗ ಸುಧೀರ್ ಅಂಗೂರ್ ಸುಪರ್ದಿಯಲ್ಲಿರುವ ಆನೇಕಲ್ ಅಲಯನ್ಸ್ ಇದೀಗಷ್ಟೇ ವಿರೋಧಿ ಬಣದ ಸಹೋದರ ಮಧುಕರ್ ಅಂಗೂರ್ ಸ್ವತಃ ತಮ್ಮ ತಂಡದೊಂದಿಗೆ ಶಸ್ತ್ರಾಸ್ತ್ರ ಮತ್ತು ಬೌನ್ಸರ್ಗಳೊಂದಿಗೆ ಒಳ ನುಗ್ಗಿದ ಘಟನೆ ಹಠಾತ್ ಶಾಕ್ ನೀಡಿದೆ.
ಕೋರ್ಟ್ ಆದೇಶವಿದೆ ಎಂದೇ ಯೂನಿವರ್ಸಿಟಿಗೆ ಓರ್ವ ದಿಟ್ಟ ಮಹಿಳೆಯೊಂದಿಗೆ ನುಗ್ಗಿರುವ ಮಧುಕರ್ ತಂಡ ಯುವಕರ ತಂಡದೊಂದಿಗೆ ಹೋಂಕರಿಸಿದ್ದಲ್ಲದೆ ಅಧಿಕಾರದ ಸೀಟಿನಲ್ಲಿ ಗಂಟೆಗಟ್ಟಲೆ ಕಳೆದಿದ್ದಾರೆ. ಇದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿ ಬನ್ನೇರುಘಟ್ಟ-ಸರ್ಜಾಪುರ ಇನ್ಸ್ಪೆಕ್ಟರ್ ಮಧ್ಯಸ್ಥಿಕೆಯಲ್ಲಿ ಮಧುಕರ್ ಅಂಗೂರ್ ಪಡೆಯನ್ನು ಹೊರಗಟ್ಟಿದ್ದಾರೆ.
ಕೋರ್ಟ್ ಆದೇಶವಿದ್ದರೆ ಸಕ್ರಮ ರೀತಿಯಲ್ಲಿ ಒಳಗೆ ಹೋಗಿ ಇಲ್ಲವಾದಲ್ಲಿ ಹೊರನಡೆಯಿರಿ ಎಂದು ತಾಕೀತು ಮಾಡಿದ ಬೆನ್ನಲ್ಲೇ ಮಧುಕರ್ ಅಂಗೂರ್ ಹೊರ ನಡೆದಿದ್ದಾರೆ. ಅಲ್ಲದೆ ಮಧುಕರ್ ರೊಂದಿಗೆ ಬಂದಿದ್ದ ಮಹಿಳೆ ಮಾತ್ರ ಹೊರ ನಡೆಯದೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದು ಕೊನೆಗೂ ಹೊರ ಹಾಕುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ದಶಕಗಳ ಇತಿಹಾಸವಿರುವ ಅಲಯನ್ಸ್ ಯೂನಿವರ್ಸಿಟಿ ಗದ್ದುಗೆಗಾಗಿ ಅಂಗೂರ್ ಸಹೋದರರ ಗುದ್ದಾಟ. ಹಲವು ಕೊಲೆಗಳೊಂದಿಗೆ ರಕ್ತ ಸಿಕ್ತ ಇತಿಹಾಸವನ್ನೂ ಹೊಂದಿದೆ.
ಇದರ ನಡುವೆ ಇದೀಗಷ್ಟೇ ಹೊಸ ದಾಖಲೆಗಾಗಿ ಆಗಮಿಸುತ್ತಿರುವ ವಿದ್ಯಾರ್ಥಿಗಳ ಕಣ್ಣ ಮುಂದಿನ ಹೈಡ್ರಾಮ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಹೈ ಡ್ರಾಮತೆಲುಗು-ಕನ್ನಡ ಚಲನ ಚಿತ್ರ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಮಧುಕರ್ ಅಂಗೂರ್ ಜೊತೆ ಅಲಯನ್ಸ್ ಯೂನಿವರ್ಸಿಟಿಗೆ ನುಗ್ಗಿದ್ದಲ್ಲದೆ ಮುಂದಿನ ಚಾನ್ಸಲರ್ ತಾನೇ ಅಂತ ಸಿಬ್ಬಂದಿಗೆ ಗದರಿಸಿದ್ದಾರೆ.
ಮಧುಕರ್ ಅಂಗೂರ್ ಯೂನಿವರ್ಸಿಟಿ ಬಿಟ್ಟು ಹೊರ ಹೊರಟರೂ ಗಂಟೆಗಳ ಕಾಲ ಒಳಗೆ ಇದ್ದು ನಾನೇ ಚಾನ್ಸಲರ್ ಎಂದು ಪಟ್ಟು ಹಿಡಿದು ಕುಳಿತರು. ಆನೇಕಲ್ ಉಪವಿಭಾಗದ ಪೊಲೀಸರು ದೊಡ್ಡ ಬಳ್ಳಾಪುರ ಕಾರ್ಯಕ್ರಮದಲ್ಲಿದ್ದು, ಸಿಬ್ಬಂದಿ ಕೊರತೆಯನ್ನು ಸ್ವರ್ಣಲತಾ ಚಾಕುಚಕ್ಯತೆಯಿಂದ ಬಳಸಿಕೊಂಡು ಕೊನೆಗೂ ಹೊರ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಸ್ತ್ರಾಸ್ತ್ರ ಆಕ್ಟ್ ಒಳಗೊಂಡಂತೆ 50ಕ್ಕೂ ಮಂದಿ ಮೇಲೆ ಪ್ರಕರಣ ದಾಖಲುಅಲಯನ್ಸ್ ಯೂನಿವರ್ಸಿಟಿ ಒಳಗೆ ಶಸ್ತ್ರಸಜ್ಜಿತ ತಂಡದೊಂದಿಗೆ ಅಕ್ರಮ ಪ್ರವೇಶ ಪಡೆದ ಮಧುಕರ್, ಸ್ವರ್ಣಲತ, ರವಿಕುಮಾರ್ ಮನ್ನವ್, ಪದ್ಮನಾಭ್, ಮೋಹನ್, ಪೊಣಚ್ಚ ಸೇರಿ ನಾಲ್ಕು ಬಂದೂಕು, ಒಂದು ಪಿಸ್ತೂಲ್ ಹೊಂದಿದ ಐವರು ಮತ್ತು 50 ಮಂದಿ ಬೌನ್ಸರ್ ಗಳ ಮೇಲೆ ಯೂನಿವರ್ಸಿಟಿ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ನೀಡಿದ ದೂರಿನನ್ವಯ ಇಂಡಿಯನ್ ಆರ್ಮ್ಸ್ ಆಕ್ಟ್ 1959(25)ರ ಅಡಿ ಪ್ರಕರಣವನ್ನು ಆನೇಕಲ್ ಇನ್ಸ್ಪೆಕ್ಟರ್ ದಾಖಲಿಸಿದ್ದಾರೆ.
ನೂತನವಾಗಿ ದಾಖಲಾತಿಗೆ ಬಂದ ವಿದ್ಯಾರ್ಥಿಗಳ ಕಣ್ಣ ಮುಂದೆ ಸಿನಿಮೀಯ ರೀತಿ ಎಂಟ್ರಿಯೂನಿವರ್ಸಿಟಿಯ ವಿವಿಧ ವಿಭಾಗಗಳಿಗೆ ದಾಖಲಾತಿಗಾಗಿ ಬಂದ ವಿದ್ಯಾರ್ಥಿಗಳ ಕಣ್ ಮುಂದೆ ಒಂದು ಬಸ್, ಒಂದು ಬೆಂಝ್ ಕಾರು, ಬಸ್ಸಿನೊಳಗಿಂದ ಗೇಟ್ ತೆರೆದು ಶಸ್ತ್ರಗಳೊಂದಿಗೆ ಮಧುಕರ್ ಎಂಟ್ರಿ ವಿದ್ಯಾರ್ಥಿಗಳನ್ನ ದಂಗು ಬಡಿಸಿತ್ತು.
ಪ್ರವೇಶವಾದ ಕೂಡಲೇ ಹಳೆಯ ತನ್ನ ಚೇಂಬರ್ ಗೆ ನುಗ್ಗಿ ಇದು ನನ್ನ ಯೂನಿವರ್ಸಿಟಿ ಎಂದು ಗರ್ವದಿಂದ ಪ್ರತ್ಯುತ್ತರ ನೀಡಿದ್ದು. ಈಗಿರುವ ಶೈಲಾ ಚಬ್ಬಿ, ಸುಧೀರ್ ಅಂಗೂರ್ ಮತ್ತಿತರರಿಗೆ ಶಾಕ್ ನೀಡಿತ್ತು.ಕೋರ್ಟ್ ಆದೇಶವಿದೆ ಎಂದು ಸುಳ್ಳು ಹೇಳಿ ಅಕ್ರಮ ಪ್ರವೇಶತನಗೆ ಕೋರ್ಟ್ ಆದೇಶ ನೀಡಿದೆ ಎಂದು ಬರೀ ಬಾಯಿ ಮಾತಿನಲ್ಲಿ ಸಹೋದರ ಸುಧೀರ್ ಅಂಗೂರ್ ತಂಡಕ್ಕೆ ಹಾಗು ಪೊಲೀಸರಿಗೆ ತಿಳಿಸಿದ ಮಧುಕರ್ ಅಂಗೂರ್ ಜೊತೆಯಲ್ಲಿ ಸಣ್ಣ ಆದೇಶವೂ ಇಲ್ಲದಿರುವುದು ಮಧುಕರ್ ಅಂಗೂರ್ ನಡೆಗೆ ದೊಡ್ಡ ಪೆಟ್ಟಾಗಿ ಪರಿಣಮಿಸಿದೆ.
ಮಧುಕರ್ ಅಂಗೂರ್ ಆಗಮನಕ್ಕೆ ಸಂತಸ ವ್ಯಕ್ತಪಡಿಸಿ ಯೂನಿವರ್ಸಿಟಿ ಆಚೆ ನೆರೆದ ಜನಕ್ಕೆ ನಿರಾಸೆಸುಧೀರ್ ಅಂಗೂರ್ ಪಾರುಪತ್ಯವಿರುವ ಅಲಯನ್ಸ್ ಯೂನಿವರ್ಸಿಟಿ ಒಳಗಡೆಗೆ ಮಧುಕರ್ ಅಂಗೂರ್ ಬಂದರು ಎಂದು ತಿಳಿದೊಡನೆ ಆನೇಕಲ್ ಅಉತ್ತಲ ಅವರ ಪಾಳಯ ಕೂಡಲೇ ಅಲಯನ್ಸ್ ಯೂನಿವರ್ಸಿಟಿ ಹೊರಗೆ ಜಮಾಯಿಸಿತ್ತು.
ಮದ್ಯಾಹ್ನ ಮಧುಕರ್ ತಂಡವನ್ನು ಆನೇಕಲ್ ಪೊಲೀಸರು ಹೊರಹಾಕಿದ್ದೇ ತಡ, ಕೂಡಲೇ ನೆರದವರ ಮುಖ ಸೊರಗಿತ್ತು.ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಭೇಟಿ:ದಶಕಗಳ ಅಲಯನ್ಸ್ ಯೂನಿವರ್ಸಿಟಿ ವಿವಾದದ ನಡುವೆ ಮಧುಕರ್ ಅಂಗೂರ್ ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂದಿಸಿದಂತೆ ತಡ ರಾತ್ರಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಆನೇಕಲ್ ಗೆ ಆಗಮಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರು.
16 ಮಂದಿ, 1 ಪಿಸ್ತೂಲ್, 4 ಬಂದೂಕು, 20 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿರುವ ಆನೇಕಲ್ ಪೊಲೀಸರು ಮಧುಕರ್ ಅಂಗೂರ್ರನ್ನು ಇಂದು ಸಂಜೆಯೊಳಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.