ಬಂಧನದಲ್ಲಿರುವ ದೆಹಲಿ ಸಚಿವ ಜೈನ್ ಮನೆ ಮತ್ತು ಇತರ ಸ್ಥಳಗಳ ಮೇಲೆ ಇಡಿ ದಾಳಿ

ಈಗಾಗಲೆ ಬಂಧಿತರಾಗಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ನಡೆಸಲಾಗುತ್ತಿರುವ ಹವಾಲಾ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಇಂದು ರಾಜಧಾನಿ ವಿವಿಧೆಡೆ ದಾಳಿ ನಡೆಸಿದೆ ದೆಹಲಿಯಲ್ಲಿರುವ ಜೈನ್ ಅವರ ಮನೆ ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಮದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೇ 30 ರಂದು ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲïಎ) ಕ್ರಿಮಿನಲ್ ಪ್ರಕರಣದಡಿಯಲ್ಲಿ ಬಂಸಲಾಗಿದ್ದು , ಜೂನ್ 9 ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ. ಜೈನ್ ಅವರ ವಿಚಾರಣೆ ನಂತರ ಕೆಲವು ಹೊಸ ಸಾಕ್ಷ್ಯಗಳನ್ನು ಕಲೆಹಾಕಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ಕೆಲವು ಹವಾಲಾ ದಂಧೆ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ.ಹಣದ ಒಳಹರಿವಿನ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ದಾಳಿಗಳನ್ನು ಪ್ರಾರಂಭಿಸಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಜೈನ್ ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಯಾವುದೇ ಖಾತೆ ಇಲ್ಲದೆ ಸಚಿವರಾಗಿದ್ದಾರೆ. ಜೈನ್ ಅವರ 6ಕ್ಕೂ ಹೆಚ್ಚು ಖಾತೆಗಳನ್ನು ಜೂನ್ 2 ರಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ವರ್ಗಾಯಿಸಲಾಯಿತು.
ಇದರ ನಡುವೆ ದೆಹಲಿಯ ಸಚಿವ ಅರವಿಂದ್ ಕೇಜ್ರಿವಾಲ್ ಅವರು ಜೈನ್ ಅವರನ್ನು ಪ್ರಾಮಾಣಿಕ ಮತ್ತು ದೇಶಭಕ್ತ ವ್ಯಕ್ತಿ ಎಂದು ಸಮರ್ಥಿಸಿಕೊಂಡಿದ್ದಾರೆ ಮತ್ತು ಅವರು ಸುಳ್ಳು ಪ್ರಕರಣದಲ್ಲಿ ಸಿಲುಕಿದ್ದಾರೆ ಮತ್ತು ಇಡಿ ತನಿಖೆಯ ನಂತರ ಸಚಿವರು ಹೊರಬರುತ್ತಾರೆ ಎಂದು ಆಶಿಸಿದ್ದಾರೆ.
ಏಪ್ರಿಲ್‍ನಲ್ಲಿ ತನಿಖೆಯ ಭಾಗವಾಗಿ ಇಡಿ ಜೈನ್ ಅವರ ಕುಟುಂಬದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮತ್ತು ಅವರ ಲಾಭದಾಯಕವಾಗಿ ಒಡೆತನದ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳನ್ನು ಜಪ್ತಿ ಮಾಡಿತ್ತು.