ಫ್ರೆಂಚ್‍ನಲ್ಲಿ ರಾಜಕೀಯ ಅಸ್ಥಿರತೆ : ಬಹುಮತ ಕಳೆದುಕೊಂಡ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

ಪ್ಯಾರಿಸ್: ಫ್ರೆಂಚ್‍ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಶಾಸಕಾಂಗ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದಾರೆ.
ಶಾಸಕಾಂಗ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತವಿಲ್ಲದ ಕಾರಣ ಫ್ರೆಂಚ್‍ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅಧ್ಯಕ್ಷರಾಗಿ ಮುಂದುವರಿಯಬೇಕಾದರೆ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

577 ಸೀಟುಗಳ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತಕ್ಕೆ 289 ಸ್ಥಾನಗಳ ಅಗತ್ಯವಿದೆ. ಮ್ಯಾಕ್ರನ್ ಪಕ್ಷ ಹಾಗೂ ಅದರ ಮಿತ್ರಪಕ್ಷಗಳು 245 ಸ್ಥಾನಗಳನ್ನು ಗೆಲುವು ಸಾಧಿಸಿದೆ. ಫ್ರೆಂಚ್ ಸಮಾಜವಾದಿಗಳು, ಕಮ್ಯುನಿಸ್ಟ್‍ಗಳು ಮತ್ತು ಗ್ರೀನ್ಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿರುವ ತೀವ್ರ ಎಡಪಂಥೀಯ ನಾಯಕ ಜೀನ್-ಲುಕ್ ಮೆಲೆನ್‍ಚೋನ್ ನೇತೃತ್ವದ ಒಕ್ಕೂಟವು 131 ಸ್ಥಾನಗಳನ್ನು ಗಳಿಸಿದೆ.
ಈ ಬಗ್ಗೆ ಫ್ರೆಂಚ್ ಅಧ್ಯಕ್ಷ ಮಾತನಾಡಿ, ದೇಶವನ್ನು ಮುನ್ನಡೆಸಲು ಬಯಸುವ ಎಲ್ಲರೊಂದಿಗೆ ಕೆಲಸ ಮಾಡಲು ಸರ್ಕಾರ ಸಿದ್ಧವಾಗಿದೆ. ಇತರೆ ಪಕ್ಷಗಳ ಸಹಕಾರ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.