ಫೇಸ್‌ಬುಕ್‌ಗೆ ಭರ್ಜರಿ 200 ಕೋಟಿ ದಂಡ: ಇತಿಹಾಸದಲ್ಲೇ ಅತೀ ದೊಡ್ಡ ಜುಲ್ಮಾನೆ ಇದು

ರಾಜಕೀಯ ಪ್ರಚಾರ ಮತ್ತು ಜಾಹೀರಾತುಗಳಿಗೆ ಪಡೆದ ಹಣದ ವಿವರಗಳನ್ನು ಮುಚ್ಚಿಟ್ಟ ಆರೋಪದನ್ವಯ ಫೇಸ್‌ಬುಕ್ ಒಡೆತನದ ಮೆಟಾಗೆ ಅಮೆರಿಕದ ನ್ಯಾಯಾಲಯವು 25 ದಶಲಕ್ಷ ಡಾಲರ್ (ಸುಮಾರು 200 ಕೋಟಿ ರೂ.) ದಂಡವನ್ನು ವಿಧಿಸಿದೆ.
ಇದು ಅಮೆರಿಕದ ಇತಿಹಾಸದಲ್ಲಿ ಅತಿ ದೊಡ್ಡ ಹಣಕಾಸು ದಂಡ ಎಂದು ಹೇಳಲಾಗಿದೆ.ಕಿಂಗ್ ಕೌಂಟಿಯ ಸುಪೀರಿಯರ್ ಕೋರ್ಟ್‌ನ ನ್ಯಾಯಾಧೀಶ ಡೌಗ್ಲಾಸ್ ನಾತ್‌ರ್ ಅವರು, ಮೆಟಾ ಕಂಪನಿಯ ಅಕ್ರಮ ವ್ಯವಹಾರದ ಪದ್ಧತಿಗೆ ದಂಡ ವಿಧಿಸಿದ್ದಾರೆ. ವಾಷಿಂಗ್ಟನ್‌ನ ಅಟಾರ್ನಿ ಜನರಲ್ ಬಾಬ್ ಫರ್ಗುಸನ್ ಅವರು ಮೆಟಾ ವಿರುದ್ಧ ವಾದಿಸಿದರು.
ಫೇರ್‌ಕ್ಯಾಂಪೇನ್ ಪ್ರಾಕ್ಟೀಸಸ್ ಕಾಯಿದೆಯನ್ನು 2018ರಲ್ಲೂ ಫೇಸ್‌ಬುಕ್ ಉಲ್ಲಂಘಿಸಿದ್ದು, ಗರಿಷ್ಠ ದಂಡ ವಿಧಿಸಬೇಕು ಎಂದು ಕೋರಿದ್ದರು.ಕ್ಯಾಲಿಫೋರ್ನಿಯಾದಲ್ಲಿ ಮುಖ್ಯ ಕಚೇರಿ ಹೊಂದಿರುವ ಮೆಟಾ ಕಂಪನಿಯು ಕೋರ್ಟ್‌ನ ದಂಡ ಕುರಿತಾಗಿ ಪ್ರತಿಕ್ರಿಯಿಸಿಲ್ಲ.
ದುರಹಂಕಾರದ ವರ್ತನೆ:’ಈ ಪ್ರಕರಣದಲ್ಲಿ ಫೇಸ್‌ಬುಕ್‌ನ ನಡವಳಿಕೆಗೆ ನಾನು ‘ದುರಹಂಕಾರ’ ಎನ್ನುವ ಒಂದು ಪದದಲ್ಲಿ ವಿವರಿಸುತ್ತೇನೆ’ ಎಂದು ಫೇಸ್‌ಬುಕ್ ವಿರುದ್ಧ ಧ್ವನಿ ಎತ್ತಿರುವ ನ್ಯಾಯವಾದಿ ಬಾಬ್ ಫರ್ಗುಸನ್ ಅಭಿಪ್ರಾಯ ಪಟ್ಟಿದ್ದಾರೆ. 2018ರಲ್ಲಿಯೇ ಮೊದಲ ಮೊಕದ್ದಮೆಯನ್ನು ಅವರು ದಾಖಲಿಸಿದ್ದರು.
ಹೊಸದಿಲ್ಲಿ: ವಾರದೊಳಗೆ ಎರಡನೇ ಸಲ ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ಬೃಹತ್ ಮೊತ್ತದ ದಂಡ ವಿಧಿಸಿದೆ. ಇದೂ ಸೇರಿದಂತೆ ವಾರದಲ್ಲಿಯೇ ಸುಮಾರು 2,000 ಕೋಟಿ ರೂ.ಗೂ ಅಧಿಕ ಮೊತ್ತದ ದಂಡವನ್ನು ಗೂಗಲ್‌ಗೆ ಹಾಕಲಾಗಿದೆ.ಸ್ಪರ್ಧಾತ್ಮಕತೆಗೆ ವಿರುದ್ಧವಾದ ಅಕ್ರಮ ವ್ಯವಹಾರದ ನೀತಿಗಳನ್ನು ಗೂಗಲ್ ಅನುಸರಿಸುತ್ತಿದೆ ಎಂದು ದೂರಿರುವ ಸಿಸಿಐ, ತಪ್ಪನ್ನು ತಿದ್ದಿಕೊಳ್ಳುವಂತೆ ಸೂಚಿಸಿದೆ.
ಪ್ಲೇಸ್ಟೋರ್‌ನಂಥ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಆರೋಪವನ್ನು ಗೂಗಲ್ ವಿರುದ್ಧ ಮಾಡಲಾಗಿದೆ.ಪ್ಲೇ ಸ್ಟೋರ್ ಅನ್ನುವುದು ಆ್ಯಪ್ ಡೆಲವಪರ್‌ಗಳಿಗೆ ಪ್ರಮುಖವಾದ ವೇದಿಕೆ. ಪೇಯ್ಡ್ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಆ್ಯಪ್ ಡೆವಲಪರ್‌ಗಳಿಗೆ ತನ್ನ ಜಿಪಿಬಿಎಸ್ (ಗೂಗಲ್ ಪ್ಲೇ ಬಿಲ್ಲಿಂಗ್ ಸಿಸ್ಟಮ್) ಬಳಸುವುದನ್ನು ಗೂಗಲ್ ಕಡ್ಡಾಯಗೊಳಿಸಿತ್ತು.
ಇದು ಸೂಕ್ತವಾದ ಪದ್ಧತಿಯಲ್ಲ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗವು ಹೇಳಿದೆ.ಅಲ್ಲದೇ, ಆ್ಯಪ್ ಡೆವಲಪರ್‌ಗಳಿಗೆ ನಿರ್ಬಂಧಗಳನ್ನು ಹಾಕಬಾರದು. ಯಾವುದೇ ಥರ್ಡ್ ಪಾರ್ಟಿ ಬಿಲ್ಲಿಂಗ್ / ಪೇಮೆಂಟ್ ಸೇವೆಗಳನ್ನು ಬಳಸಲು ಅವಕಾಶ ನೀಡಬೇಕು,” ಎಂದು ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು ನಿರ್ದೇಶನ ನೀಡಿದೆ.