ರಾಜ್ಯ
ಫಲಿಸಿದ ಹರಕೆ… ಕೆನೆಡಾದಿಂದ ಮಾದಪ್ಪನ ಬೆಟ್ಟಕ್ಕೆ ಬಂದು ಗೋವು ಕೊಟ್ಟ ಭಕ್ತ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಕೆನೆಡಾದಿಂದ ಬಂದು ಹಸುವಿನ ಕರುವೊಂದನ್ನು ಕೊಡುಗೆ ಕೊಟ್ಟು ಹರಕೆ ತೀರಿಸಿರುವ ವಿಶೇಷ ಘಟನೆ ಇಂದು ನಡೆದಿದೆ.ಹೌದು, ದಕ್ಷಿಣ ಭಾರತದ ಪ್ರಮುಖ ದೇಗುಲಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಬಂದ ಕೆನಡಾದಿಂದ ಬಂದ ವೆಂಕಟೇಶ್ ಹಾಗೂ ಲಕ್ಷ್ಮಿ ಎಂಬ ದಂಪತಿ ಕ್ಷೇತ್ರದಲ್ಲಿನ ಸಾಲೂರು ಮಠಕ್ಕೆ ಹೆಣ್ಣು ಕರುವೊಂದನ್ನು ಕೊಡುಗೆ ಕೊಟ್ಟಿದ್ದಾರೆ.
ಅಂದಹಾಗೆ, ವೆಂಕಟೇಶ್ ಮತ್ತು ಲಕ್ಷ್ಮಿ ದಂಪತಿ ಬೆಂಗಳೂರಿನವರಾಗಿದ್ದು ಸದ್ಯ ಕೆನಡಾದಲ್ಲಿ ನೆಲೆಸಿದ್ದಾರೆ. ಕಟ್ಟಿಕೊಂಡಿದ್ದ ಹರಕೆಯೊಂದು ಫಲಿಸಿದ ಹಿನ್ನೆಲೆಯಲ್ಲಿ ಗೋವನ್ನು ಮಠಕ್ಕೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.