ಅಪರಾಧ

ಪ್ಲಾಸ್ಮಾ ಎಂದು ಮೂಸಂಬಿ ಜ್ಯೂಸ್ ಕೊಟ್ಟ ವೈದ್ಯರು: ಡೆಂಗ್ಯೂ ರೋಗಿ ಸಾವು, ಆಸ್ಪತ್ರೆಗೆ ಬೀಗ

ಲಖನೌ: ಡೆಂಗ್ಯೂ ರೋಗಿಗೆ ಬ್ಲಡ್ ಪ್ಲೇಟ್‌ಲೆಟ್ಸ್ ಬದಲು ಮೂಸಂಬಿ ರಸ ನೀಡಿ, ಅವರ ಸಾವಿಗೆ ಕಾರಣವಾದ ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಗೆ ಬೀಗ ಜಡಿಯಲಾಗಿದೆ.

ಜಿಲ್ಲಾ ಆಡಳಿತ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಆಸ್ಪತ್ರೆ ಅಧಿಕಾರಿಗಳ ಕಡೆಯಿಂದ ಲೋಪ ಉಂಟಾಗಿರುವುದು ಸ್ಪಷ್ಟವಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ರೋಗಿಯ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.

ಪ್ರಯಾಗ್‌ರಾಜ್‌ನ ಗ್ಲೋಬಲ್ ಹಾಸ್ಪಿಟಲ್ ಮತ್ತು ಟ್ರಾಮಾ ಸೆಂಟರ್‌ನಲ್ಲಿ ‘ಪ್ಲಾಸ್ಮಾ’ ಎಂದು ನಮೂದಿಸಿದ್ದ ಚೀಲದಲ್ಲಿ ಮೂಸಂಬಿ ಜ್ಯೂಸ್ ಅನ್ನು ಒದಗಿಸಲಾಗಿದೆ ಎಂದು 32 ವರ್ಷದ ಮೃತ ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.

ಆಸ್ಪತ್ರೆ ಪೂರೈಸಿದ್ದ ಒಂದು ಚೀಲದಿಂದ ದ್ರವವನ್ನು ದೇಹಕ್ಕೆ ಹರಿಸಿದ ಬಳಿಕ ರೋಗಿಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.ಕೂಡಲೇ ರೋಗಿಯನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ರೋಗಿಗೆ ನೀಡಿದ ಪ್ಲೇಟ್ಲೆಟ್ ಚೀಲವು ನಕಲಿಯಾಗಿದೆ.

ವಾಸ್ತವವಾಗಿ ಅದರೊಳಗೆ ಇದ್ದದ್ದು ರಾಸಾಯನಿಕನ ಮಿಶ್ರಣ ಮತ್ತು ಸಿಹಿಯಂತಹ ಪದಾರ್ಥ ಅಥವಾ ಮೂಸಂಬಿ ಜ್ಯೂಸ್ ಎಂದು ಎರಡನೇ ಆಸ್ಪತ್ರೆ ವೈದ್ಯರು ತಿಳಿಸಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ.ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೋಗಿಯ ಮನೆಯವರು ಆಗ್ರಹಿಸಿದ್ದಾರೆ. “ನನ್ನ 26 ವರ್ಷದ ಸಹೋದರಿ ಈಗ ವಿಧವೆಯಾಗಿದ್ದಾಳೆ.

ಬೇಜವಾಬ್ದಾರಿತನ ಪ್ರದರ್ಶಿಸಿದ ಆಸ್ಪತ್ರೆ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ರೋಗಿಯ ಸಂಬಂಧಿ ಸೌರಭ್ ತ್ರಿಪಾಠಿ ಹೇಳಿದ್ದಾರೆ.ಸರ್ಕಾರದಿಂದ ತನಿಖೆ”ಡೆಂಗ್ಯೂ ರೋಗಿಗೆ ಪ್ಲೇಟ್‌ಲೆಟ್ಸ್ ಬದಲು ಮೂಸಂಬಿ ಹಣ್ಣಿನ ರಸ ನೀಡಿದ ಆಸ್ಪತ್ರೆಯ ವೈರಲ್ ವಿಡಿಯೋವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ನನ್ನ ನಿರ್ದೇಶನದಂತೆ ಆಸ್ಪತ್ರೆಗೆ ಬೀಗಮುದ್ರೆ ಹಾಕಲಾಗಿದೆ. ಪ್ಲೇಟ್ಲೆಟ್ ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತಪ್ಪಿತಸ್ಥರು ಎಂದು ಕಂಡುಬಂದರೆ, ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.ರೋಗಿ ಕಡೆಯವರದ್ದೇ ತಪ್ಪು ಎಂದ ಆಸ್ಪತ್ರೆಆದರೆ ಆಸ್ಪತ್ರೆ ಸಿಬ್ಬಂದಿ ಪ್ರತ್ಯಾರೋಪ ಮಾಡಿದ್ದಾರೆ. ರೋಗಿಗಳಿಗೆ ಸಂಬಂಧಿಕರು ಸ್ವತಃ ಪ್ಲೇಟ್ಲೆಟ್ ಖರೀದಿ ತರುತ್ತಾರೆ ಎಂದು ವಾದಿಸಿದ್ದಾರೆ.

ರೋಗಿಯ ಪ್ಲೇಟ್‌ಲೆಟ್ಸ್‌ಗಳ ಮಟ್ಟ 17,000ಕ್ಕೆ ಇಳಿಕೆಯಾಗಿತ್ತು. ಇದಕ್ಕಾಗಿ ಬ್ಲಡ್ ಪ್ಲೇಟ್‌ಲೆಟ್ಸ್‌ಗಳನ್ನು ವ್ಯವಸ್ಥೆ ಮಾಡುವಂತೆ ಅವರ ಸಂಬಂಧಿಕರಿಗೆ ಸೂಚಿಸಲಾಗಿತ್ತು ಎಂದು ಆಸ್ಪತ್ರೆ ಮಾಲೀಕರು ಹೇಳಿದ್ದಾರೆ.ಅವರು ಸರ್ಕಾರಿ ಆಸ್ಪತ್ರೆಯೊಂದರಿಂದ ಐದು ಯುನಿಟ್ ಪ್ಲೇಟ್‌ಲೆಟ್‌ ತಂದಿದ್ದರು.

ಮೂರು ಯುನಿಟ್‌ಗಳನ್ನು ಕೊಟ್ಟ ಬಳಿಕ ರೋಗಿಯಲ್ಲಿ ಪ್ರತಿಸ್ಪಂದನೆ ಇತ್ತು. ಹೀಗಾಗಿ ನಾವು ಅದನ್ನು ನಿಲ್ಲಿಸಿದ್ದೆವು” ಎಂದು ಮಾಲೀಕ ಹೇಳಿದ್ದಾರೆ.ತನಿಖೆ ಪ್ರಗತಿಯಲ್ಲಿದೆ. ಅಲ್ಲಿರುವ ಎಲ್ಲ ಪ್ಲೇಟ್‌ಲೆಟ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪ್ರಯಾಗ್‌ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ಹೇಳಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button