ಅಪರಾಧ

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದ ನಾಗನಿಗೆ ಗ್ಯಾಂಗ್ರಿನ್​​​​ ಕಾಯಿಲೆ!

ಪ್ರೀತಿಯನ್ನು ನಿರಾಕರಿಸಿದ್ದ ಯುವತಿಯ ಮೇಲೆ ಆ್ಯಸಿಡ್​​ ಹಾಕಿದ್ದ ಆ್ಯಸಿಡ್​ ನಾಗ ಇದೀಗ ಗ್ಯಾಂಗ್ರೀನ್ ಕಾಯಿಲೆಯಿಂದ ನರಳುವಂತಾಗಿದೆ.ಯುವತಿ ಮೇಲೆ ಆ್ಯಸಿಡ್‌ ದಾಳಿ ಮಾಡಿ ಜೈಲುಪಾಲಾಗಿದ್ದ ನಾಗನಿಗೆ ಗ್ಯಾಂಗ್ರಿನ್‌ ಕಾಣಿಸಿಕೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಏಪ್ರಿಲ್‌ 28ರಂದು ಹೆಗ್ಗನಹಳ್ಳಿಯಲ್ಲಿ ಕೆಲಸಕ್ಕೆ ಹೋಗುವಾಗ ಯುವತಿಗೆ ಆ್ಯಸಿಡ್‌ ನಾಗೇಶ್​​​​​​​​ ಆ್ಯಸಿಡ್​ ಹಾಕಿದ್ದ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯುವತಿ ಹಲವು ಆಪರೇಷನ್​​​​ಗಳ ನಂತರ ಚೇತರಿಸಿಕೊಳ್ತಿದ್ದಾಳೆ.

ನಾಗನಿಗೆ ಗ್ಯಾಂಗ್ರಿನ್‌ ಆರಂಭವಾಗಿದ್ದು, ನಡೆಯೋಕೆ, ಎದ್ದೆಳೋಕು ಆಗ್ತಿಲ್ಲ. ಸೂಕ್ತ ಚಿಕಿತ್ಸೆ ನೀಡುವಂತೆ ಪೊಲೀಸರಿಗೆ ಕೋರ್ಟ್‌ ನಿರ್ದೇಶನ ನೀಡಿದೆ. ಆ್ಯಸಿಡ್ ದಾಳಿಯಲ್ಲಿ ಈಗಾಗಲೇ ನಾಗನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button