
ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಸಿಕಂದರಬಾದ್ನ ಬರ್ದೆಪಲ್ಲಿ ನಿವಾಸಿ ಬಿಲ್ಲಾಪುರಂ ನಾಗರಾಜ್(25) ಕೊಲೆಯಾಗಿರುವ ವ್ಯಕ್ತಿ.ಮಲ್ಕಾಪೇಟೆಯಲ್ಲಿರುವ ಪ್ರತಿಷ್ಠಿತ ಕಾರು ಶೋರೂಮ್ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈತ ಕಳೆದ ಎರಡು ತಿಂಗಳ ಹಿಂದಷ್ಟೇ ಸೈಯದ್ ಅಶ್ರಿನ್ ಸುಲ್ತಾನ( ಪಲ್ಲವಿ) ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು.
ನಿನ್ನೆ ಹೈದರಾಬಾದ್ನ ಸರೂರ್ನಗರ ತಹಸೀಲ್ದಾರ್ ಕಚೇರಿ ಬಳಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ನಾಗರಾಜ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.ಘಟನೆಯನ್ನು ಖಂಡಿಸಿ ನಾಗರಾಜ್ ಅವರ ಸಂಬಂಕರು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನತೆ ಸೃಷ್ಟಿಸಿದೆ ಮತ್ತು ಕೊಲೆಯ ಹಿಂದೆ ಅವರ ಪತ್ನಿಯ ಕುಟುಂಬದ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ಇವರಿಬ್ಬರ ಪ್ರೇಮ ವಿವಾಹವೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮತ್ತಷ್ಟು ವಿಚಾರಣೆ ನಡೆಸುತ್ತಿದ್ದೇವೆ. ಬಳಿಕಷ್ಟೇ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.ಈ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಂ ಪತಿಯನ್ನು ಹಿಂದೂ ಹೆಂಡತಿಯ ಕುಟುಂಬದವರು ಕೊಂದಿದ್ದರೆ ಏನಾಗುತ್ತದೆ ಎಂಬುದು ನಮಗೆ ತಿಳಿದಿದೆ.
ಕಾಂಗ್ರೆಸ್, ಎಎಪಿ, ಟಿಎಂಸಿ, ಎಸ್ಪಿ ಇಸ್ಲಾಮೋಫೋಬಿಯಾವನ್ನು ಆರೋಪಿಸಿ ವಿಶ್ವಸಂಸ್ಥೆಯನ್ನು ತಲುಪಿದ್ದವು. ಆದರೆ ಈಗ ಹೈದರಾಬಾದ್ನಲ್ಲಿ ಹಿಂದೂ ಹತ್ಯೆಯಾಗಿರುವುದರಿಂದ ಅಪರಾಧ ಜಾತ್ಯತೀತವೇ? ಆದ್ದರಿಂದ ಸೆಕ್ಯುಲರ್ ಸುಮ್ಮನಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.