
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಮಳವಳ್ಳಿಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಶಶಿಕುಮಾರ್ (35)ನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಆತನ ಪತ್ನಿ ನಾಗಮಣಿ (28) ಹಾಗೂ ಆಕೆಯ ಪ್ರಿಯಕರ ಕನಕಪುರದ ಹೇಮಂತ್ (25)ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.
ಕಳೆದ ಸೆ.18ರಂದು ಶಶಿಕುಮಾರ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಈ ಬಗ್ಗೆ ಶಶಿಕುಮಾರ್ ತಾಯಿಗೆ ಸೊಸೆ ನಾಗಮಣಿ ಕೆಲವು ದುಷ್ಕರ್ಮಿಗಳು ಬಂದು ನನ್ನ ಹಾಗೂ ಮಗನ ಕೈ-ಕಾಲು ಕಟ್ಟಿಹಾಕಿ ರೂಮಿನಲ್ಲಿ ಕೂಡಿಹಾಕಿ ಶಶಿಕುಮಾರ್ ಅವರನ್ನು ಕೊಲೆ ಮಾಡಿ ಪರಾರಿಯಾದರು ಎಂದು ಸುಳ್ಳು ಹೇಳಿದ್ದಳು.
ಇದನ್ನು ನಂಬದ ಶಶಿಕುಮಾರ್ ತಾಯಿ ಸೊಸೆಯ ಮೇಲೆ ಅನುಮಾನಗೊಂಡು ಪಟ್ಟಣದ ಪೊೀಲಿಸರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಿಪಿಐ ಎ.ಕೆ.ರಾಜೇಶ್ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ ನೇತೃತ್ವದ ಪೊಲೀಸರ ತಂಡದ ವಿಚಾರಣೆ ವೇಳೆ ನಾಗಮಣಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು,ಈ ಸಂಬಂಧ ಪಟ್ಟಣದ ಪುರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗಮಣಿ ಮತ್ತು ಹೇಮಂತ್ ಕನಕಪುರ ಗ್ರಾಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು.ಈ ವೇಳೆ ಇಬ್ಬರಿಗೂ ಪರಿಚಯವಾಗಿ ಅನೈತಿಕ ಸಂಬಂಧ ಹೊಂದಿದ್ದರು.
ಪತ್ನಿಯ ಅನೈತಿಕ ಸಂಬಂಧ ತಿಳಿದು ಶಶಿಕುಮಾರ್ ಪತ್ನಿಯನ್ನು ಕಳೆದ ಎರಡು ತಿಂಗಳ ಹಿಂದೆ ಕೆಲಸ ಬಿಡಿಸಿ ಮಳವಳ್ಳಿ ಮನೆಗೆ ಕರೆತಂದು ಮನೆಯಲ್ಲಿಯೇ ಇರುವಂತೆ ಹೇಳಿದ್ದರು ಎನ್ನಲಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಿಂದ ಪ್ರೇರಿತಳಾದ ನಾಗಮಣಿ ಪ್ರಿಯಕರ ಹೇಮಂತ್ನನ್ನು ಮನೆಗೆ ಕರೆಸಿಕೊಂಡು ಮನೆಯಲ್ಲಿದ್ದ ಮಗನಿಗೆ ಮೊಬೈಲ್ ನೀಡಿ ರೂಮಿನಲ್ಲಿ ಆಟವಾಡಿಕೊಳ್ಳಲು ಹೇಳಿ ಶಶಿಕುಮಾರ್ನನ್ನು ದಿಂಬು ಮತ್ತು ವೇಲ್ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಯಾರೋ ದುಷ್ಕಮಿಗಳು ಬಂದು ನನ್ನನ್ನು ಮತ್ತು ಮಗನ ಕೈಕಾಲು ರೂಮಿನಲ್ಲಿ ಕೂಡಿಹಾಕಿ ಗಂಡನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ನಾಟಕವಾಡಿದ್ದಳು ಎಂದು ತಿಳಿದು ಬಂದಿದೆ.
ಮಂಡ್ಯ ಎಸ್ಪಿ ಯತೀಶ್ ಡಿವೈಎಸ್ಪಿ ನವೀನ್ ಕುಮಾರ್ ಮಾರ್ಗದರ್ಶನಲ್ಲಿ ಎ.ಕೆ.ರಾಜೇಶ ನೇತೃತ್ವದಲ್ಲಿ ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳಾದ ನಾಗಮಣಿ ಮತ್ತು ಕನಕಪುರ ಗ್ರಾಮದ ಹೇಮಂತ್ ನಡುವೆ ಸಂಬಂಧವಿತ್ತು.ಈ ವಿಚಾರವಾಗಿ ಮನೆಯಲ್ಲಿ ಜಗಳ ನಡೆದಿತ್ತು.
ಹಾಗಾಗಿ ನಾವಿಬ್ಬರೂ ಸೇರಿಕೊಂಡು ಈ ಕೃತ್ಯ ಮಾಡಿರುವುದಾಗಿ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಪಟ್ಟಣ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದ್ದಾರೆ.