
ಪ್ರಪಾತಕ್ಕೆ ವಾಹನ ಉರುಳಿ ಬಿದ್ದ ಪರಿಣಾಮ ಮೂವರು ಅಧಿಕಾರಿಗಳು ಸೇರಿದಂತೆ 13 ಭಾರತೀಯ ಯೋಧರ ಮೃತಪಟ್ಟ ಘಟನೆ ಸಿಕ್ಕಿಂನಲ್ಲಿ ಶುಕ್ರವಾರ ಸಂಭವಿಸಿದೆ.ಚತ್ತಾನ್ ನಿಂದ ಥಾಂಗೊ ಪ್ರದೇಶಕ್ಕೆ ಸೇನೆಯ ಮೂರು ಟ್ರಕ್ ಗಳು ಪ್ರಯಾಣಿಸುತ್ತಿದ್ದವು.
ಒಂದು ವಾಹನ ಸ್ಕೀಡ್ ಆಗಿ ಬಿದ್ದು ಪ್ಪಪಾತಕ್ಕೆ ಉರುಳಿ ಬಿದ್ದಿದೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ದುರ್ಘಟನೆ ನಡೆದ ಸ್ಥಳಕ್ಕೆ ಕೂಡಲೇ ಧಾವಿಸಿದ ಭದ್ರತಾ ಸಿಬ್ಬಂದಿ ನಾಲ್ವರನ್ನು ಏರ್ ಲಿಫ್ಟ್ ಮಾಡಿದೆ. ಘಟನೆಯಲ್ಲಿ ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.