Uncategorized

ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಡೋಂಗಿ ವ್ಯಕ್ತಿ” ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದರು.

ಬೆಂಗಳೂರು ಮೇ 24: “ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಡೋಂಗಿ ವ್ಯಕ್ತಿ” ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದರು.

ಜಯನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, “ಪ್ರಧಾನಿ ಸ್ಥಾನದ ಬಗ್ಗೆ ನನಗೆ ಗೌರವವಿದೆ.
ಆದರೆ ನರೇಂದ್ರ ಮೋದಿ ಅವರು ಒಬ್ಬ ಡೋಂಗಿ ಪ್ರಧಾನಿ. ಅಚ್ಚೇ ದಿನ್ ಬರಲಿದೆ ಎಂದು ದೇಶದ ಜನರಿಗೆ ಅವರು ಹೇಳಿದ್ದರು. ಅಚ್ಚೇ ದಿನ್’ ನಿಜವಾಗಿಯೂ ಬಂತೆ?” ಎಂದು ವ್ಯಂಗ್ಯವಾಡಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕ 3.46 ರೂ. ಹಾಗೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9.20 ರೂ. ಇತ್ತು. ನರೇಂದ್ರ ಮೋದಿ ಅವರು ಏಕೆ ಅಬಕಾರಿ ಸುಂಕವನ್ನು ಏರಿಸಿದರು?. ಕೇಂದ್ರ ಸರಕಾರಕ್ಕೆ ಕೇವಲ ಅಬಕಾರಿ ಸುಂಕ ಒಂದರಿಂದಲೇ 26 ಲಕ್ಷ ರೂ. ಆದಾಯ ಬಂದಿದೆ,” ಎಂದು ಸಿದ್ದರಾಮಯ್ಯ ಹೇಳಿದರು.

2017-18ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಯನಗರಕ್ಕೆ 316 ಕೋಟಿ ರು. ಅನುದಾನ ಹಂಚಿಕೆ ಮಾಡಿದ್ದೆ. ಆದರೆ ಬಿಜೆಪಿ ಸರಕಾರ ಕಳೆದ ಮೂರು ವರ್ಷಗಳಿಂದ ಕ್ಷೇತ್ರಕ್ಕೆ ಕೇವಲ 122 ಕೋಟಿ ರು. ಅನುದಾನ ಹಂಚಿಕೆ ಮಾಡಿದೆ,” ಎಂದರು.

“ತೆರಿಗೆದಾರರ ಹಣದಲ್ಲಿ ನಗರೋತ್ಥಾನ ಯೋಜನೆಯಡಿ 15 ಮಂದಿ ಬಿಜೆಪಿ ಶಾಸಕರಿಗೆ 9,890 ಕೋಟಿ ರು. ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ 12 ಮಂದಿ ಕಾಂಗ್ರೆಸ್ ಶಾಸಕರಿಗೆ ಕೇವಲ 2,165 ಕೋಟಿ ರು. ಅನುದಾನ ಹಂಚಿಕೆ ಮಾಡಿದೆ. ರಾಜ್ಯ ಸರಕಾರದಿಂದ ಈ ರೀತಿಯ ತಾರತಮ್ಯ ಮಾಡಲಾಗುತ್ತಿದೆ,” ಎಂದು ಸಿದ್ದರಾಮಯ್ಯ ದೂರಿದರು.

“ಇದರಿಂದ ತಿಳಿಯುವುದಿಲ್ಲವೇ ಕೇಂದ್ರ ಸರಕಾರ ಒಂದು ಡೋಂಗಿ ಸರಕಾರ ಎಂದು. ಬೆಲೆ ಏರಿಕೆ ನೆಪದಲ್ಲಿ ಅದು ನಾಗರಿಕರ ರಕ್ತ ಹೀರುತ್ತಿದೆ,” ಎಂದು ದೂರಿದರು.

ರಾಜ್ಯ ಸರಕಾರದಿಂದ ಮಲತಾಯಿ ಧೋರಣೆ: “ಬೆಂಗಳೂರಿನ ವಿಧಾನಸಭೆ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಿಸಲಾಗುತ್ತಿದೆ” ಎಂದು ಆರೋಪಿಸಿದರು
ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ: “ಬಿಬಿಎಂಪಿ ಚುನಾವಣೆ ಆಗಸ್ಟ್‌ನಲ್ಲಿ ನಡೆಯುವ ಸಂಭವವಿದೆ. ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರನ್ನು ಭೇಟಿಯಾಗಿ ಬಿಜೆಪಿ ಸರಕಾರದ ವೈಫಲ್ಯಗಳನ್ನು ತಿಳಿಸಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೆಲಸ ಮಾಡಬೇಕು,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಕಾಂಬರಿನಗರ ಮತ್ತು ಬೈರಸಂದ್ರ ವಾರ್ಡ್ ಗಳ ಸ್ಥಳೀಯ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು. ಈ ವೇಳೆ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button