ಪ್ರತಿದಿನ ಬೆಳಿಗ್ಗೆ ಬಂದು ಸಂಜೆ ಮರಳುವ ನಾಗರಹಾವು: ಬೆಂಗಳೂರಿನಲ್ಲೊಂದು ವಿಸ್ಮಯ!

ಪ್ರತಿದಿನ ಬೆಳಿಗ್ಗೆ ಬಂದು ಮರವೇರಿ ಸಂಜೆಯಾಗುತ್ತಿದ್ದಂತೆ ಮರಳುವ ನಾಗರಹಾವಿನ ನಡೆ ವಿಸ್ಮಯ ಮೂಡಿಸಿದ್ದು, ಇದನ್ನು ನೋಡಲು ಜನರು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ನಾರಾಯಣಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಕಳೆದ ಒಂದೂವರೆ ಎರಡು ತಿಂಗಳಿನಿಂದ ಪ್ರತಿದಿನ ನಾರಾಯಣಪುರ ಗ್ರಾಮದ ನಾರಾಯಣಪುರ ಕೆರೆಯ ಬಳಿ ಬರುವ ನಾಗರಾಜ ಗಿಡದ ರೆಂಬೆಯ ಮೇಲೆ ಬಂದು ಮಲಗುತ್ತಿದೆ.ಬೆಳಗ್ಗೆ 11 ಗಂಟೆಗೆ ಬಂದು ಗಿಡವನ್ನು ಏರಿ, ರೆಂಬೆಯ ಮೇಲೆ ಕೆಲಕಾಲ ನಿದ್ರಿಸಿ ನಂತರ ಸಂಜೆ 5 ಘಂಟೆಗೆ ನಾಗಪ್ಪ ಮರಳಿ ಹೋಗುತ್ತದೆ.
ಚಿಕ್ಕಕೆರೆ ಪಕ್ಕದಲ್ಲಿರುವ ಎರಡು ಅರಳಿಕಟ್ಟೆಯ ಬಳಿ ಗಿಡದ ಮೇಲೆ ನಾಗರಹಾವು ಮಲಗುತ್ತಿದ್ದು, ಗಿಡದ ಬಳಿ ನೂರಾರು ಜನ ನಿಂತರೂ ಕೂಡ ಅತ್ತಿತ್ತ ಸರಿಯದೆ ಹಾವು ಮಲಗುತ್ತಿದೆ.
ಸುತ್ತಮುತ್ತ ಜನ ಬಂದು ನಿಲ್ಲುವುದನ್ನು ನೋಡುತ್ತಾ ಮಲಗುವ ನಾಗಪ್ಪನಿಗೆ ಹೊಸ ವರ್ಷದ ಸಂದರ್ಭದಲ್ಲಿ ಗ್ರಾಮಸ್ಥರು ಹಾಲಿಟ್ಟು, ಆರತಿ ಎತ್ತಿ ಹಾಕಿ ಪೂಜಿಸುತ್ತಿದ್ದಾರೆ. ಹಾಗೆಯೇ ಸ್ಥಳೀಯರಲ್ಲಿ ಬೆಳಗ್ಗೆ ಬಂದು ಸಂಜೆ ಮರಳುವ ಹಾವಿನ ನಡೆ ಏನು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.