ಪ್ರಕೃತಿ, ಪ್ರಾಣಿ ಆಧ್ಯಾತ್ಮಿಕತೆಯ ಆಧಾರ

ಪ್ರಕೃತಿ, ಪರಿಸರ, ಪ್ರಾಣಿಗಳು ಮತ್ತು ಪಕ್ಷಿಗಳು, ಭಾರತಕ್ಕೆ ಕೇವಲ ಸುಸ್ಥಿರತೆ ಮತ್ತು ಭದ್ರತೆ ಮಾತ್ರವಲ್ಲ. ನಮಗೆ ಸಂವೇದನೆ ಮತ್ತು ಆಧ್ಯಾತ್ಮಿಕತೆಯ ಆಧಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
೨೧ ನೇ ಶತಮಾನದ ಭಾರತ, ಆರ್ಥಿಕತೆ ಮತ್ತು ಪರಿಸರ ವಿಜ್ಞಾನ ಸಂಘರ್ಷದ ಕ್ಷೇತ್ರಗಳಲ್ಲ,ಬದಲಾಗಿ ಅಭಿವೃದ್ದಿ ಮತ್ತು ಬದಲಾವಣೆಯತ್ತ ಸಾಗಿದೆ ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತಿದೆ ಎಂದು ಹೇಳಿದ್ದಾರೆ.
ಮದ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ತರಲಾದ ೮ ಈ ಚಿರತೆ ಸೇರ್ಪಡೆ ಮಾಡಿದ ಬಳಿಕ ಮಾತನಾಡಿದ ಅವರು, ಚಿರತೆಯನ್ನು ನೋಡಲು ಜನರು ತಾಳ್ಮೆ ತೋರಿಸಬೇಕು ಮತ್ತು ಕೆಲವು ತಿಂಗಳು ಕಾಯಬೇಕು ಎಂದು ತಿಳಿಸಿದ್ದಾರೆ.
ಈ ಚಿರತೆಗಳು ಈ ಪ್ರದೇಶದ ಬಗ್ಗೆ ಅರಿವಿಲ್ಲದೆ ಅತಿಥಿಗಳಾಗಿ ಬಂದಿವೆ. ಅವುಗಳು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಳ್ಳಬೇಕು ಇದಕ್ಕಾಗಿ ಚಿರತೆಗಳಿಗೆ ಕೆಲವು ತಿಂಗಳುಗಳ ಸಮಯವನ್ನು ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.ಅಂತರರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಿ, ಭಾರತ, ಈ ಚಿರತೆಗಳನ್ನು ನೆಲೆಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ.
ನಮ್ಮ ಪ್ರಯತ್ನ ವಿಫಲವಾಗಲು ಬಿಡಬಾರದು ಎಂದು ಅವರು ಮನವಿ ಮಾಡಿದ್ದಾರೆ.೧೯೫೨ ರಲ್ಲಿ ನಾವು ದೇಶದಿಂದ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ನಾವು ಘೋಷಿಸಿದ್ದು ದುರದೃಷ್ಟಕರವಾಗಿದೆ, ಆದರೆ ದಶಕಗಳಿಂದ ಅವುಗಳನ್ನು ಪುನರ್ವಸತಿ ಮಾಡಲು ಯಾವುದೇ ಅರ್ಥಪೂರ್ಣ ಪ್ರಯತ್ನ ನಡೆದಿಲ್ಲ. ಇಂದು, ನಾವು ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸುತ್ತಿರುವಾಗ, ದೇಶ ಹೊಸ ಶಕ್ತಿಯೊಂದಿಗೆ ಚಿರತೆಗಳನ್ನು ಪುನರ್ವಸತಿ ಮಾಡಲು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.
ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ, ಸೇರಿದಂತೆ ಹಿರಿಯ ಅಧಿಕಾರಿಗಳ ಉಪಸ್ಥಿತರಿದ್ದರು.ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳನ್ನು ರಾಷ್ಟ್ರೀಯ ಉದ್ಯಾವನಕ್ಕೆ ಸೇರ್ಪಡೆ ಮಾಡುವ ಮೂಲಕ ವನ್ಯಜೀವಿ ಆವಾಸ ಸ್ಥಾನ ಮತ್ತು ವನ್ಯಜೀವಿ ಸಂಪತ್ತು ಹೆಚ್ಚು ಮಾಡುವ ಉದ್ದೇಶವನ್ನು ಹೊಂದಲಾಗಿದೆ.
ನಮೀಬಿಯಾದಿಂದ ಚಿರತೆ ಹೊತ್ತ ವಿಶೇಷ ಸರಕು ಸಾಗಣೆ ವಿಮಾನವನ್ನು ಮೊದಲು ಯೋಜಿಸಿದಂತೆ ರಾಜಸ್ಥಾನದ ಜೈಪುರ ಬದಲಿಗೆ ಮಧ್ಯಪ್ರದೇಶದ ಗ್ವಾಲಿಯರ್‍ಗೆ ಬಂದ ಚಿರತೆಗಳನ್ನು ವಾಯುಸೇನೆಯ ಹೆಲಿಕ್ಯಾಪ್ಟರ್ ಮೂಲಕ ಕುನೂ ರಾಷ್ಟ್ರೀಯ ಉದ್ಯಾವನಕ್ಕೆ ಕರೆ ತರಲಾಯಿತು.
ನಿಟ್ಟಿಸಿರುಬಿಟ್ಟ ಅಧಿಕಾರಿಗಳು:ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದ ಹಾಜು ಬಾಜಿನಲ್ಲಿ ಭಾರಿ ಮಳೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಕೊಂಚ ಆತಂತಕ್ಕೆ ಒಳಗಾಗಿದ್ದ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರು ಚಿರತೆಗಳನ್ನು ರಾಷ್ಟ್ರೀಯ ಉದ್ಯಾವನಕ್ಕೆ ಸೇರ್ಪಡೆ ಮಾಡುತ್ತಿದ್ದಂತೆ ನಿಟ್ಟಿಸಿರು ಬಿಟ್ಟರು.