
ಆನೇಕಲ್- ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರಿನ ನೀಲಗಿರಿ ತೋಪಿನಲ್ಲಿ ಗಾಂಜಾ ಮತ್ತಿನಲ್ಲಿದ್ದ ಗ್ಯಾಂಗ್ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಗ್ಯಾಂಗ್ಗೆ ಪೋಲೀಸ್ ಸಿಬ್ಬಂದಿ ರಂಗನಾಥ್ ಬುದ್ಧಿ ಹೇಳಿದ್ದಾರೆ.
ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗ್ಯಾಂಗ್, ರಂಗನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.ಗಾಂಜಾ ಮತ್ತಿನಲ್ಲಿದ್ದ ವರುಣ್ ಅಲಿಯಾಸ್ ಕೆಂಚ ಮತ್ತು ಈತನ ಗ್ಯಾಂಗ್ ರಾಘವೇಂದ್ರ ಸರ್ಕಲ್ನಲ್ಲಿ ನಡು ರಸ್ತೆಯಲ್ಲಿ ಬೈಕ್ ಇರಿಸಿ ನಿಂತಿತ್ತು.
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ರಂಗನಾಥ್ ಬೈಕ್ ಸೈಡಿಗೆ ಹಾಕಿ ಎಂದು ಹೇಳಿದ್ದಾರೆ. ರಂಗನಾಥ ಅವರನ್ನು ಸುತ್ತವರಿದ ಗ್ಯಾಂಗ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ದಿನ್ನೂರು ಕಡೆ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾಗಿದ್ದರೂ ಪರಾರಿಯಾಗುತ್ತಿದ್ದ ಕಿರಾತಕರನ್ನು ಬೈಕ್ನಲ್ಲಿ ಹಿಂಬಾಲಿಸಿದ್ದಾರೆ.ದಿನ್ನೂರಿನ ನೀಲಗಿರಿ ತೋಪಿನ ಕಡೆಗೆ ಗಾಂಜಾ ಗ್ಯಾಂಗ್ ಎಸ್ಕೇಪ್ ಆಗಿದೆ.
ಈ ಬಗ್ಗೆ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿದ ರಂಗನಾಥ್ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಂಭೀರ ಗಾಯಗೊಂಡಿದ್ದ ರಂಗನಾಥ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.