Uncategorized

ಪೊಲೀಸ್ ದಂಡ ವಿಧಿಸಿದ್ದಕ್ಕೆ ಸ್ಟೇಷನ್​ ಪವರ್​ ಕಟ್ ಮಾಡಿದ ಲೈನ್​ಮ್ಯಾನ್​; ಠಾಣೆಯಲ್ಲಿ ಮೀಟರೇ ಇರ್ಲಿಲ್ಲ!

ಬರೇಲಿ: ಇದೊಂಥರ ಮುಯ್ಯಿಗೆ ಮುಯ್ಯಿ ಪ್ರಕರಣ. ಏಕೆಂದರೆ ಪೊಲೀಸ್ ದಂಡ ವಿಧಿಸಿದರು ಎಂಬ ಕಾರಣಕ್ಕೆ ಸಿಟ್ಟಾದ ಲೈನ್​ಮ್ಯಾನ್​, ಠಾಣೆಯ ವಿದ್ಯುತ್​ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ. ಇದರಿಂದ ಉತ್ತರಪ್ರದೇಶದ ಹರ್ದಸ್​ಪುರ್ ಪೊಲೀಸ್ ಠಾಣೆ ಕತ್ತಲಲ್ಲಿ ಇರುವಂತಾಗಿತ್ತು.

ಶನಿವಾರ ತಪಾಸಣೆಯಲ್ಲಿದ್ದ ಪೊಲೀಸರು ಭಗವಾನ್​ ಸ್ವರೂಪ್ ಎಂಬ ಲೈನ್​ಮ್ಯಾನ್​ ಒಬ್ಬರ ಬೈಕ್ ಅಡ್ಡಗಟ್ಟಿದ್ದರು. ಆಗ ದಾಖಲೆ ಕೇಳಿದ್ದಕ್ಕೆ ಕೊಡಲು ವಿಫಲನಾದ ಲೈನ್​ಮ್ಯಾನ್​ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು.

ಇದರಿಂದ ತೀವ್ರ ಬೇಸರಗೊಂಡ ಲೈನ್​ಮ್ಯಾನ್​, ತನಗೆ ಗೊತ್ತಿರುವ ಸಿಬ್ಬಂದಿಗೆ ಹೇಳಿಸಿ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಲೈನ್​ಮ್ಯಾನ್​, ಠಾಣೆ ವಿದ್ಯುತ್ ಸಂಪರ್ಕವಿದ್ದರೂ ಮೀಟರ್ ಇರಲಿಲ್ಲ, ಹೀಗಾಗಿ ಅದು ಕಾನೂನುಬಾಹಿರ ಎಂದು ಹೇಳಿದ್ದಾನೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಾಗಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button