ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಮಹತ್ವದ ಸಭೆ

ಬೆಳಗಾವಿಯ ಚಳಿಗಾಲದ ಅವೇಶನ, ಇತ್ತೀಚೆಗೆ ನಡೆದ ಭಯೋತ್ಪದನೆ ಘಟನೆ, ಗಡಿ ಬಿಕ್ಕಟ್ಟು, ರಾಜ್ಯದ ಸಾಮಾನ್ಯ ಕಾನೂನು ಸುವ್ಯವಸ್ಥೆ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗೃಹ ಸಚಿವರು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲï, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಅಧಿಕಾರಿಗಳಾದ ಅಲೋಕ್ ಕುಮಾರ್, ದಯಾನಂದ, ಮಾಲಿನಿ ಕೃಷ್ಣಮೂರ್ತಿ, ಹಿತೇಂದ್ರ ಅವ ರೊಂದಿಗೆ ಸಭೆ ನಡೆಸಿ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ, ಗಡಿ ಸಾಮರಸ್ಯ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭಾರತಕ್ಕೆ ಈ ವರ್ಷ ಜಿ-20 ದೇಶಗಳ ಶಿಖರ ಸಮ್ಮೇಳನ ಆತಿಥ್ಯ ವಹಿಸುವ ಗೌರವ ಸಿಕ್ಕಿದೆ. ಈ ಸಂಬಂಧ ಜಿ-20 ದೇಶಗಳ ಹಿರಿಯ ಅಧಿಕಾರಿಗಳ ನೇತೃತ್ವದ ಸಭೆ ನಡೆಯುವ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು ಎಂದರು.ಬೆಳಗಾವಿ ಅವೇಶನ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಸಹ ಚರ್ಚೆಯಾಯಿತು.
ರಾಜ್ಯದ ಸಾಮಾನ್ಯ ಕಾನೂನು ಸುವ್ಯವಸ್ಥೆ, ಬೆಳಗಾವಿ ಅವೇಶನ, ಇತ್ತೀಚೆಗೆ ನಡೆದ ಭಯೋತ್ಪದನೆ ಘಟನೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಹಿರಿಯಅಧಿಕಾರಿಗಳೊಂದು ಸಮಾಲೋಚನೆ ನಡೆಸಲಾಯಿತು. ಜತೆಗೆ ಬೆಳಗಾವಿ ಗಡಿ ಭಾಗದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಸಲಹೆ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.