ರಾಜ್ಯ

ಪುನೀತ ಪರ್ವ’ದಲ್ಲಿ ಸ್ಟಾರ್ ನಟರು ಭಾಗಿ; ಅಶ್ವಿನಿ ಪುನೀತ್‌ ರಾಜ್‌ಕುಮಾರ್ ನೇತೃತ್ವದಲ್ಲಿ ಸಜ್ಜಾದ ಅರಮನೆ ಮೈದಾನ

ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರ ( Puneeth Rajkumar ) ಹೆಸರಿನಲ್ಲಿ ಬೆಂಗಳೂರಿನ ಅರೆಮನೆ ಮೈದಾನದಲ್ಲಿ ಇಂದು ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ‘ಪುನೀತ ಪರ್ವ’ ಎಂದು ಹೆಸರಿಟ್ಟಿದ್ದು, ಬೇರೆ ಬೇರೆ ರಾಜ್ಯಗಳ ಚಿತ್ರರಂಗಗಳಿಂದ ಸ್ಟಾರ್‌ ನಟರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪುನೀತ ಪರ್ವ ಕಾರ್ಯಕ್ರಮ ಎಲ್ಲಿ ನಡೆಯಲಿದೆ?ಇಂದು ಸಂಜೆ ಆರು ಗಂಟೆಗೆ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಸಂಜೆ ಪುನೀತ ಪರ್ವ ಕಾರ್ಯಕ್ರಮ ಆರಂಭವಾಗಲಿದೆ. ಅಕ್ಟೋಬರ್‌ 29ರಂದು ಪುನೀತ್‌ ರಾಜ್‌ಕುಮಾರ್‌ಅವರ ಮೊದಲ ವರ್ಷದ ಪುಣ್ಯಸ್ಮರಣೆ. ಅಕ್ಟೋಬರ್‌ 21ರಂದು ‘ಪುನೀತ ಪರ್ವ’ ಕಾರ್ಯಕ್ರಮ ನಡೆಯಲಿದೆ.

ನವೆಂಬರ್‌ 1ರಂದು ಪುನೀತ್‌ ರಾಜ್‌ ಕುಮಾರ್‌ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗುತ್ತಿದೆ.ಸ್ಟಾರ್ ಕಲಾವಿದರು ಭಾಗಿ‘ಪುನೀತ ಪರ್ವ’ಕಾರ್ಯಕ್ರಮಕ್ಕೆ ಆಗಮಿಸುವವರು ಬಿಳಿ ಬಣ್ಣದ ಉಡುಪು ಧರಿಸಲು ಮನವಿ ಮಾಡಲಾಗಿದೆ. ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ರಾಕಿಂಗ್‌ ಸ್ಟಾರ್‌ಯಶ್‌, ತಮಿಳು ನಟ ಸೂರ್ಯ, ತೆಲುಗಿನ ಬಾಲಯ್ಯ, ರಾಣಾ ದಗ್ಗುಬಾಟಿ ಸೇರಿದಂತೆ ದಕ್ಷಿಣ ಭಾರತದ ಹಲವು ನಟರು ಪಾಲ್ಗೊಳ್ಳಲಿದ್ದಾರೆ. ಕನ್ನಡದ ಎಲ್ಲಾನಟ, ನಟಿಯರು ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ.ಪುನೀತ ಪರ್ವ’ಕಾರ್ಯಕ್ರಮದಲ್ಲಿ ಹಾಡು, ಡಾನ್ಸ್‌ ಕೂಡ ಇರಲಿವೆ. ಕುನಾಲ್‌ ಗಾಂಜಾವಾಲ, ಅರ್ಮಾನ್‌ ಮಲಿಕ್‌ ಗಾನಸುಧೆ ಹರಿಸಲಿದ್ದಾರೆ.

ಪ್ರಭುದೇವ ಮತ್ತು ನಟಿ ರಮ್ಯಾ ನೃತ್ಯ ಮಾಡಲಿದ್ದಾರೆ.ಪುನೀತ ಪರ್ವ’ಕಾರ್ಯಕ್ರಮ ಅಪ್ಪು ಪತ್ನಿ ಅಶ್ವಿನಿ ಅವರ ನೇತೃತ್ವದಲ್ಲಿ ನಡೆಯಲಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರೇ ಇದರ ಮುಂದಾಳತ್ವ ವಹಿಸಿಕೊಂಡಿದ್ದಾರೆ. ‘ಈ ಕಾರ್ಯಕ್ರಮ ಎಲ್ಲರ ಕಣ್ಣಿಗೆ ಹಬ್ಬದ ಹಾಗೆ ಇರುತ್ತದೆ.

ಇದನ್ನು ಅಭಿಮಾನಿಗಳಿಗಾಗಿ ಮಾಡುತ್ತಿದ್ದೇವೆ. ಎಲ್ಲರಿಗೂ ತಲುಪಿಸೋದು ನಮ್ಮ ಧರ್ಮ. ಅಪ್ಪು ಯಾರೊಬ್ಬರ ಸ್ವತ್ತಲ್ಲ. ಇಡೀ ಕರ್ನಾಟಕದ ಸ್ವತ್ತು. ಕಾರ್ಯಕ್ರಮಕ್ಕೆ ಎಷ್ಟು ಜನ ಬರುತ್ತಾರೆ ಅಂತ ನಾವು ಲೆಕ್ಕ ಹಾಕಲು ಹೋಗಿಲ್ಲ.

ಎಷ್ಟೇ ಜನ ಬಂದರೂ ಅವರಿಗೆ ಕಾರ್ಯಕ್ರಮ ತೋರಿಸುವ ಕೆಲಸ ನಮ್ಮದು. ಅದಕ್ಕೆ ನಾವು ರೆಡಿಯಿದ್ದೇವೆ’ ಎಂದು ರಾಘವೇಂದ್ರ ರಾಜ್‌ಕುಮಾರ್‌ತಿಳಿಸಿದ್ದಾರೆ.2021 ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button