Uncategorized
ಪಿಎಸ್‍ಐ ಪರೀಕ್ಷೆ ಅಕ್ರಮ: ಮತ್ತೊಬ್ಬ ಆರೋಪಿ ಬಂಧನ

ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಇಲ್ಲಿಯವರೆಗೆ ಅಕ್ರಮದಲ್ಲಿ ಭಾಗಿಯಾಗಿ ಬಂಧಿಸಲ್ಪಟ್ಟಿರುವ ಆರೋಪಿಗಳ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ವಸಂತರಾಯ್ ನರಿಬೋಳ ಬಂಧನವಾದ ಇನ್ನೋರ್ವ ಆರೋಪಿ.ಬಂಧಿತ ವಸಂತರಾಯ್ ಈಗಾಗಲೇ ಸಿಐಡಿ ವಶದಲ್ಲಿರುವ ಅಭ್ಯರ್ಥಿ ಎನ್.ವಿ.ಸುನೀಲ್‍ಕುಮಾರ್‍ನ ತಂದೆಯಾಗಿದ್ದಾರೆ.
ಸುನೀಲ್‍ನನ್ನು ಪರೀಕ್ಷೆಯಲ್ಲಿ ತೇರ್ಗಡೆ ಮಾಡಿಸುವುದಕ್ಕಾಗಿ ವಸಂತರಾಯರು ಆರ್.ಡಿ.ಪಾಟೀಲ್ ಮೊರೆ ಹೋಗಿದ್ದರು.
ಇತ್ತೀಚೆಗಷ್ಟೇ ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಅಭ್ಯರ್ಥಿಯಾಗಿದ್ದ ಶಾಂತಿಬಾಯಿ ಹಾಗೂ ಪತಿ ಬಸಯ್ಯಾ ನಾಯಕ ಎರಡು ತಿಂಗಳ ಬಳಿಕ ಸಿಐಡಿ ಬಲೆಗೆ ಬಿದ್ದಿದ್ದರು.
ಹೈದರಾಬಾದ್‍ನಲ್ಲಿ ಸಿಐಡಿ ಪೊಲೀಸರು ಶಾಂತಿಬಾಯಿ ಹಾಗೂ ಆಕೆಯ ಪತಿ ಬಸಯ್ಯಾ ನಾಯಕ್‍ನನ್ನು ಬಂಧಿಸಿದ್ದರು.