
ಹಾಸನ: ಪಿಎಫ್‌ಐ ನಿಷೇಧದ ನಂತರ ಮಂಗಳೂರಿನಲ್ಲಿಇನ್ನೂ ಸಂಚು ರೂಪಿಸುತ್ತಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿಐದು ಜನರನ್ನು ಬಂಧಿಸಿದ್ದೇವೆ.
ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದು, ಎಲ್ಲಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದ್ದಾರೆ.
ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ”ಪಿಎಫ್‌ಐ ಸಂಘಟನೆಯವರಿಗೆ ವಿಶೇಷವಾಗಿ ಯಾರೊಂದಿಗೆ ಲಿಂಕ್ ಇತ್ತು ಎಂಬುದನ್ನು ಪತ್ತೆ ಮಾಡಬೇಕು.
ಇದರ ಜತೆಗೆ ಟ್ರೈನಿಂಗ್ ಎಲ್ಲೆಲ್ಲಿಆಗಿದೆ, ಯಾವ್ಯಾವ ರೀತಿ ನಡೆಯುತ್ತಿತ್ತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ,” ಎಂದರು.
”ಪಿಎಫ್‌ಐ ಸಂಘಟನೆ ಜತೆ ಹೊರಗಡೆಯವರು ಯಾರು, ಯಾರು ಇದ್ದಾರೆ ಪತ್ತೆ ಹಚ್ಚಬೇಕಿದೆ. ತನಿಖೆಯ ವಿಚಾರವನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ.
ಎಲ್ಲಾಆಯಾಮಗಳಲ್ಲೂತನಿಖೆ ಮಾಡಿ, ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದರು. ”ಯಾರೇ ಆಗಲಿ ಅಕ್ರಮ ಚಟುವಟಿಕೆ ಮಾಡುವವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳುತ್ತೇವೆ.
ಕರಾವಳಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ದಾವಣಗೆರೆ ಆಗಲಿ ಎಲ್ಲಾಕಡೆ ನಮ್ಮ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಲ್ಲಾ ವಿಚಾರಗಳನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ,” ಎಂದು ತಿಳಿಸಿದರು.
ಪುತ್ತೂರಿನಲ್ಲಿನಡೆಯುತ್ತಿದ್ದ ತರಬೇತಿ ಬಿಟ್ಟು ಬೇರೆ ಬೇರೆ ಕಡೆ ಎಲ್ಲೆಲ್ಲಿತರಬೇತಿ ನಡೆಯುತ್ತಿದೆ ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದೀವಿ,” ಎಂದು ತಿಳಿಸಿದರು.
”ಹಲಾಲ್ ಮುಕ್ತ ಅಭಿಯಾನ ವಿಚಾರ ಕಾನೂನು ಇತಿಮಿತಿಯಲ್ಲಿಯಾರು ಪ್ರತಿಭಟನೆ ಮಾಡುತ್ತಾರೆ ಅದಕ್ಕೆ ನಮ್ಮ ಕಡೆಯಿಂದ ಸಮಸ್ಯೆಯಿಲ್ಲ.
ಕಾನೂನು ಮೀರಿ ಯಾರು ಏನಾದರೂ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ”, ಎಂದು ಎಚ್ಚರಿಸಿದರು. ಎಸ್ಪಿ ಹರಿರಾಂ ಶಂಕರ್, ಎಎಸ್‌ಪಿ ಮಿಥುನ್, ಡಿವೈಎಸ್‌ಪಿ ಉದಯ್‌ಭಾಸ್ಕರ್, ಸಿಪಿಐ ಸುರೇಶ್ ಹಾಜರಿದ್ದರು.
ಪಿಎಫ್‌ಐ ಸಂಘಟನೆ ನಿಷೇಧದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಬಂಧಿತ ಆರೋಪಿಗಳ ವಿರುದ್ಧ ಮತ್ತಷ್ಟು ಸಾಕ್ಷ್ಯ ಸಂಗ್ರಹಕ್ಕೆ ಇಳಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ಬೆಂಗಳೂರು ಪೊಲೀಸರು ಬುಧವಾರ ಪಿಎಫ್‌ಐ ಸಂಘಟನೆಯ ಚಟುವಟಿಕೆ ಪ್ರದೇಶಗಳಿಂದ ಹೆಚ್ಚಿನ ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ.
ಬಂಧಿತ ಪಿಎಫ್‌ಐ ಮುಖಂಡರು ನೀಡಿದ ಮಾಹಿತಿಯ ಆಧಾರದಲ್ಲಿಬೆಂಗಳೂರು ಪೊಲೀಸರು ಈ ಕಾರ್ಯ ನಡೆಸಿದ್ದಾರೆ.
ಡಿ.ಜೆ.ಹಳ್ಳಿ ಮಾದರಿಯಲ್ಲಿದುಷ್ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ ಪಿಎಫ್‌ಐ ಮುಖಂಡರನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ ಸಹಕಾರದಲ್ಲಿ ಬೆಂಗಳೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ವೇಳೆ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿ ಪೊಲೀಸರು ತೆರಳಿದ್ದರು.
ಇದೀಗ ಪಿಎಫ್‌ಐ ಭಾಗಿಯಾದ ಪ್ರತಿಭಟನೆ, ಗಲಭೆಗಳ ಬಗ್ಗೆ ಮಾಹಿತಿ ಸಂಗ್ರಹಕ್ಕೆ ತೊಡಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಬೈಯಪ್ಪನಹಳ್ಳಿ ಇನ್‌ಸ್ಪೆಕ್ಟರ್ ವೆಂಕಟಾಚಲಪತಿ ಮತ್ತು ಆಡುಗೋಡಿ ಇನ್‌ಸ್ಪೆಕ್ಟರ್ ಮಂಜುನಾಥ್ ಅವರ ತಂಡ ಆಗಮಿಸಿ, ಮಂಗಳೂರು ಕಮಿಷನರೇಟ್ ಕಚೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಪೊಲೀಸರ ನೆರವು ಪಡೆದಿದ್ದಾರೆ.
ಮಂಗಳೂರಿನಲ್ಲಿ ನಡೆದ ಸಿಎಎ ಸಂಘರ್ಷ, ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆ ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಪೊಲೀಸ್ ಠಾಣೆಗಳಿಂದ ಸಾಕ್ಷ್ಯ ಸಂಗ್ರಹಿಸಲಾಗಿದೆ.
ಪಿಎಫ್‌ಐ ದುಷ್ಕೃತ್ಯಗಳ ಬಗ್ಗೆ ವೀಡಿಯೊ ಸಾಕ್ಷ್ಯ ಹಾಗೂ ಕೆಲವು ಹೇಳಿಕೆಗಳನ್ನು ಬೆಂಗಳೂರು ಪೊಲೀಸರು ಸಂಗ್ರಹಿಸಿದ್ದಾರೆ.
ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಸೇರಿದಂತೆ ಹಲವೆಡೆ ನಡೆದ ಚಟುವಟಿಕೆಗಳ ಸಾಕ್ಷ್ಯ ಕಲೆ ಹಾಕಿ ಬೆಂಗಳೂರಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.