Travelಬೆಂಗಳೂರುರಾಜ್ಯ

ಪಾಸ್, ಟಿಕೆಟ್ ದರ ಏರಿಕೆ: ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಬಿಎಂಟಿಸಿ ಶಾಕ್!

ಹೆಚ್ಚುತ್ತಿರುವ ಇಂಧನ ಬೆಲೆಯ ಹಿನ್ನೆಲೆಯಲ್ಲಿ ಬಿಎಂಟಿಸಿ ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಶಾಕ್​ ನೀಡಿದೆ.ಹೊಸ ವರ್ಷದ ಮೊದಲ ವಾರದಿಂದಲೇ ಟಿಕೆಟ್ ದರ ಏರಿಕೆಯಾಗಲಿದ್ದು,

ಈ ಮೂಲಕ ಹೊಸ ವರ್ಷಕ್ಕೆ ಪ್ರಯಾಣಿಕರ ಜೇಬಿಗೆ ಬಿಎಂಟಿಸಿ ಕತ್ತರಿ ಹಾಕಲು ಮುಂದಾಗಿದೆ.ಬಿಎಂಟಿಸಿ ಸಂಸ್ಥೆಯ ಆರ್ಥಿಕ ನಷ್ಟ ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.

ಇದರ ಜೊತೆಗೆ ಮಾಸಿಕ ಪಾಸ್ ತೆಗೆದುಕೊಂಡವರಿಗೆ ಮತ್ತೊಂದು ಶಾಕ್ ನೀಡಿದ್ದು, ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಪಾಸ್​ ಬಳಸಿ ಉಚಿತ ಪ್ರಯಾಣ ಮಾಡುವಂತಿಲ್ಲ.

ವಜ್ರ ( ವೋಲ್ವೋ) ಪ್ರಸ್ತುತ ಮಾಸಿಕ ದರ 1500 ರೂಪಾಯಿಗಳಿತ್ತು, ಸದ್ಯ ಪರಿಷ್ಕೃತ ವಜ್ರ ಮಾಸಿಕ ಪಾಸಿನ ದರ ಒಟ್ಟು 1800 ರೂಪಾಯಿಯಾಗಿದೆ. ವಜ್ರ ವೋಲ್ವೋ ಪ್ರಸ್ತುತ ದೈನಿಕ ಪಾಸಿನ ದರ 100 ರೂಪಾಯಿ ಇತ್ತು, ಪರಿಷ್ಕೃತ ದರ 120 ರೂಪಾಯಿಗೆ ಹೆಚ್ಚಳವಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button