ಪಾಕ್ ಪ್ರಧಾನಿ ಆಡಿಯೋ ಸೋರಿಕೆ

ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯದ ಪ್ರಮುಖ ಸಹಾಯಕರ ಹುದ್ದೆಗಳನ್ನು ಕೇಳುವ ಅಪರಿಚಿತ ವ್ಯಕ್ತಿಯೊಂದಿಗೆ ಚರ್ಚೆ ನಡೆಸುವ ಪ್ರಧಾನಿ ಷಹಬಾದ್ ಷರೀಫ್ ಅವರ ಆಡಿಯೋ ಬಹಿರಂಗಗೊಂಡ ಬಳಿಕ ಇದೀಗ ಮತ್ತೊಂದು ಆಡಿಯೋ ಸೋರಿಕೆಯಾಗಿದೆ.
ಬಿಲಾವಲ್ ಭುಟ್ಟೊ ಈ ವಿಷಯದಲ್ಲಿ ನನ್ನೊಂದಿಗೆ ಮಾತನಾಡಿದ್ದಾರೆ’ ಎಂಬ ಧ್ವನಿ ಪ್ರಧಾನಿ ಷರೀಫ್ ಅವರ ಆಡಿಯೋ ಬಿಡುಗಡೆಯಾಗಿದ್ದು ಆಡಳಿತ ಮತ್ತು ವಿರೋದ ಪಕ್ಷಗಳ ನಾಯಕರ ನಡುವೆ ಆರೋಪ ಪತ್ಯಾರೋಪಕ್ಕೆ ಕಾರಣವಾಗಿದೆ.ಪ್ರಧಾನಿ ಅವರ ಮಾತಿಗೆ ಮತ್ತೊಂದು ಕಡೆಯಿಂದ , “ನಾವು ಜಾಫರ್ ಮಹಮೂದ್ ಮತ್ತು ಜಹಾಂಜೇಬ್ ಸಾಹಿಬ್ ಅವರನ್ನು ಸಹ ಹೊಂದಿಸಬೇಕಾಗಿದೆ .. ಇಂದು ನಿಮಗೆ ಅಂತಿಮ ಸಂಖ್ಯೆಯನ್ನು ಹೇಳುತ್ತೇನೆ.
ಎನ್ನುವ ಪ್ರಧಾನಿ ಅವರ ಆಡಿಯೋ ಬಿಡುಗಡೆಯಾಗುದೆ.ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ನಾಯಕ ಮುತ್ತಹಿದಾ ಕ್ವಾಮಿ ಮೂವ್ಮೆಂಟ್ ಸದಸ್ಯ ಮಲಿಕ್ ಅಹ್ಮದ್ ಅವರು ಎರಡು ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ವಹಿಸಿದ ಪಾತ್ರವನ್ನು ನೆನಪಿಸುವ ಬಗ್ಗೆ ಮಾತನಾಡುತ್ತಾರೆ ಎಂದು ವರದಿಯಾಗಿದೆ.“ನಾವು ಜಾಫರ್ ಮಹಮೂದ್ ಮತ್ತು ಜಹಾಂಜೇಬ್ ಸಾಹಿಬ್ ಅವರನ್ನು ಸಹ ಹೊಂದಿಸಬೇಕಾಗಿದೆ … ನಾನು ಇಂದು ನಿಮಗೆ ಅಂತಿಮ ಸಂಖ್ಯೆಯನ್ನು ಹೇಳುತ್ತೇನೆ ಎಂದಿದ್ದಾರೆ.
ಪ್ರಧಾನಿ ಶಹಬಾಜ್ ಷರೀಫ್ ಸರ್ಕಾರ ಆಪಾದಿತ ಹ್ಯಾಕಿಂಗ್ ಮತ್ತು ಸೂಕ್ಷ್ಮ ಆಡಿಯೊ ಸಂಭಾಷಣೆಗಳ ಸೋರಿಕೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಕೆಲವು ದಿನಗಳ ನಂತರ ಆಡಿಯೊ ಕ್ಲಿಪ್ ಹೊರಬಿದ್ದಿದೆ.