
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, ಜುಲೈ -2022ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗೂ ಬರವಣಿಗೆ ವಿಷಯಗಳ ಫಲಿತಾಂಶವನ್ನು ಪ್ರಕಟಿಸಿದೆ.
ಈ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದಾಗಿದೆ.
ಜುಲೈ -2022ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗೂ ಬರವಣಿಗೆ ವಿಷಯಗಳ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್ http://sslc.karnataka.gov.in ಗೆ ಭೇಟಿ ನೀಡಿ ಪಡೆಯಬಹುದಾಗಿದೆ.
ಅಲ್ಲದೆ ದಿನಾಂಕ 07-10-2022 ರಂದು ಸಂಬಂಧಿಸಿದ ಸಂಸ್ಥೆಗಳ ಲಾಗಿನ್‌ಗಳಲ್ಲಿ ಲಭ್ಯಮಾಡಲಾಗುವುದು ಎಂದು ತಿಳಿಸಿದೆ.
ಸದರಿ ಫಲಿತಾಂಶವನ್ನು ಎಲ್ಲಾ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು ಫಲಿತಾಂಶ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸುವುದು.
ಫಲಿತಾಂಶದಲ್ಲಿ ತಿದ್ದುಪಡಿ ಇದ್ದಲ್ಲಿ ಫಲಿತಾಂಶ ಪ್ರಕಟಣೆಯಾದ 15 ದಿನಗಳೊಳಗೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸುವುದು.
ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮನುಸಾರ ಫಲಿತಾಂಶವನ್ನು ತಿದ್ದುಪಡಿ ಮಾಡಲು ಕ್ರಮವಹಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಫಲಿತಾಂಶ ಚೆಕ್ ಮಾಡುವ ವಿಧಾನ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://sslc.karnataka.gov.in ಗೆ ಭೇಟಿ ನೀಡಿ.ಮುಖಪುಟದಲ್ಲಿ ಜುಲೈ -2022ರ ವಾಣಿಜ್ಯ ಪರೀಕ್ಷೆಯ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ.ನಂತರ ಮತ್ತೊಂದು ಪುಟ ತೆರೆದುಕೊಳ್ಳಿ.
ಆ ಪುಟದಲ್ಲಿ ರಿಜಿಸ್ಟರ್ ನಂಬರ್, ಜನ್ಮ ದಿನಾಂಕ ನಮೂದಿಸಿ.ನಂತರ ಪರದೆಯ ಮೇಲೆ ಫಲಿತಾಂಶ ಕಾಣಸಿಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ಇನ್ನೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಉತ್ತರ ಪತ್ರಿಕೆ ಛಾಯಚಿತ್ರ ಪ್ರತಿ ಪಡೆಯಲು, ಅಂಕಗಳ ಮರು ಎಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ.
ಶುಲ್ಕದ ವಿವರ ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿ ಪಡೆಯಲು ಒಂದು ವಿಷಯಕ್ಕೆ ಶುಲ್ಕ – ರೂ. 500.ಮರುಮೌಲ್ಯಮಾನಕ್ಕೆ ಒಂದು ವಿಷಯಕ್ಕೆ ಶುಲ್ಕ – ರೂ. 800.ಉತ್ತರ ಪತ್ರಿಕೆಗಳ ಮರುಎಣಿಕೆ ಶುಲ್ಕ ( ಒಂದು ವಿಷಯಕ್ಕೆ) – ರೂ. 150.
ಪ್ರಮುಖ ದಿನಾಂಕಗಳುವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗು ಬರವಣಿಗೆ ವಿಷಯಗಳ ಉತ್ತರ ಪತ್ರಿಕೆಗಳ ಛಾಯಪ್ರತಿಯಾಗಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 10-10-2022.ವಾಣಿಜ್ಯ ಪರೀಕ್ಷೆಯ ಬೆರಳಚ್ಚು,
ಶೀಘ್ರಲಿಪಿ ಹಾಗು ಬರವಣಿಗೆ ವಿಷಯಗಳ ಉತ್ತರ ಪತ್ರಿಕೆಗಳ ಅಂಕಗಳ ಮರುಎಣಿಕೆಗೆ ಹಾಗೂ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 11-10-2022.ವಾಣಿಜ್ಯ ಪರೀಕ್ಷೆಯ ಬೆರಳಚ್ಚು,
ಶೀಘ್ರಲಿಪಿ ಹಾಗು ಬರವಣಿಗೆ ವಿಷಯಗಳ ಉತ್ತರ ಪತ್ರಿಕೆಗಳ ಛಾಯಪ್ರತಿಯಾಗಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ – 19-10-2022.ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗು ಬರವಣಿಗೆ ವಿಷಯಗಳ ಉತ್ತರ ಪತ್ರಿಕೆಗಳ ಅಂಕಗಳ ಮರುಎಣಿಕೆಗೆ ಹಾಗೂ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ – 21-10-2022.
ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.