ಜೀವನಶೈಲಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ -chandan.MRC

ಬೆಂಗಳೂರು:ಕಾಡು ಬೆಳೆಸಿ, ನಾಡು ಉಳಿಸಿ’, “ಮನೆಗೊಂದು ಮರ, ಊರಿಗೊಂದು ವನ’ ಈ ಎಲ್ಲ ಘೋಷಣೆಗಳು ಕೇಳುವುದಕ್ಕೆ ಚಂದ. ಈ ಸಾಲುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ರಕ್ಷಣೆ ಮಾಡುವವರು ಎಲ್ಲೋ ಕೆಲವರು ಮಾತ್ರ.

NCIB ಟೈಮ್ಸ್ ಮೀಡಿಯಾ ಡೈರೆಕ್ಟರ್ ಆಗಿರುವ ಚಂದನ್. ಎಮ್ ಆರ್ ಸಿ ಯವರು ಕಳೆದ ಬಾರಿ ಪರಿಸರ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಹಾಗೆ 2022ರ ಪರಿಸರ ದಿನದೊಂದು ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ.

ಒಂದು ವಿಷಯವನ್ನು ತೆಗೆದುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾಬಂದಿದೆವೇ.
“ಸಕಲ ಜೀವಜಾಲ ಮತ್ತು ನೆಲದ ಆರೋಗ್ಯವನ್ನು ಕಾಪಾಡೋಣ”
ಎಲ್ಲರಿಗೂ ಪರಿಸರ ದಿನದ ಶುಭಾಶಯಗಳು.

‘ಸ್ವೀಡನ್‌ನ ಸ್ಟಾಕ್‌ಹೋಮ್ ನಗರದಲ್ಲಿ ವಿಶ್ವ ಪರಿಸರ ದಿನವನ್ನು ಹೇಗೆ ಆಚರಿಸಲಾಗುತ್ತಿತು’. ಎನ್ನುವುದರ ಬಗ್ಗೆ ಒಂದು ತುಣುಕು ಮಾಹಿತಿ-
“”–“”
ಕನಿಷ್ಠ ಒಂದು ದಿನದ ಮಟ್ಟಿಗಾದರೂ ಖಾಸಗಿ ವಾಹನಗಳನ್ನು ಬಳಸದೆ ಸಾರ್ವಜನಿಕ ವಾಹನಗಳನ್ನು ಬಳಸುವುದು, ತಮ್ಮ ಕುಟುಂಬ, ಸ್ನೇಹಿತರು, ನೆರೆಹೊರೆಯವರನ್ನು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಪ್ರೋತ್ಸಾಹಿಸುವುದು. ಏರ್‌ಕಂಡಿಷನರ್‌ಗಳನ್ನು ಸ್ವಿಚ್ ಆಫ್ ಮಾಡುವುದು. ಅವು ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ನಿಮ್ಮ ಕೋಣೆಯ ಸುತ್ತಮುತ್ತಲಿನ ಪರಿಸರವನ್ನು ತಂಪಾಗಿಸುತ್ತವೆ ಮತ್ತು ಹಳೆಯ ಶಾಖೋತ್ಪನ್ನ ಅನಿಲಗಳನ್ನು ಹೊರದೂಡುತ್ತವೆ. ಸಂಜೆಯ ಕತ್ತಲನ್ನು ಆಸ್ವಾದಿಸಲು ಪ್ರಯತ್ನಿಸಿ ನೋಡಿ. ವಿದ್ಯುತ್ ದೀಪಗಳು, ಫ್ಯಾನ್‌ಗಳು, ಕಂಪ್ಯೂಟರ್‌ಗಳು, ಮೊಬೈಲ್‌ಗಳು ಮತ್ತು ವಿದ್ಯುತ್ ಯಂತ್ರಗಳನ್ನು ಬಳಸದ ಸಮಯದಲ್ಲಿ ಸ್ವಿಚ್ ಆಫ್ ಮಾಡಿ ನಿಮ್ಮ ಮನೆ, ಕಚೇರಿ ಮತ್ತು ಸುತ್ತಮುತ್ತಲಿನ ಪರಿಸರವನ್ನು ತಂಪಾಗಿಸಿಕೊಳ್ಳಿ. ನಿಮ್ಮ ತೋಟಕ್ಕೆ ನೀರುಣಿಸಿ ಒಂದೆರಡು ಗಿಡಗಳನ್ನು ನೆಟ್ಟು ಆನಂದಿಸಿ ನೋಡಿ ನಿಮ್ಮ ಮನಸ್ಸಿಗೆ ಸಮಾಧಾನವಾಗುತ್ತದೆ. ನಿಮ್ಮ ಹಿತ್ತಲು ಮತ್ತು ನೆರೆಹೊರೆಯ ಗಿಡಮರಗಳು ಕೇವಲ ಉಚಿತ ಆಮ್ಲಜನಕವನ್ನು ಪೂರೈಸುವುದಲ್ಲದೆ, ಅವು ಮಳೆಗಾಲದಲ್ಲಿ ಮಣ್ಣಿನ ಹರಿವನ್ನು ತಡೆಯುತ್ತವೆ ಮತ್ತು ಸಮುದಾಯಗಳನ್ನು ಹೆಚ್ಚು ವಾಸಯೋಗ್ಯವಾಗಿಸುತ್ತವೆ. ಹಳ್ಳಿ ಪಟ್ಟಣ ಪುರಸಭೆಗಳು ಮತ್ತು ಜನಸಮುದಾಯಗಳು ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ. ವಿಶ್ವ ಪರಿಸರ ದಿನವನ್ನು ಆಚರಿಸುವ ಕಾರ್ಯಕ್ರಮಗಳಲ್ಲಿ ಜನರು ಪಾಲ್ಗೊಂಡು ಸಮುದಾಯಗಳ ಸ್ವಚ್ಛತೆಯನ್ನು ಕಾಪಾಡಬೇಕಿದೆ. ಇದು ಸಾಮಾಜಿಕ ಉದ್ದೇಶಕ್ಕಾಗಿ ಜನರು ಒಗ್ಗೂಡಲು ಸಹಾಯ ಮಾಡುತ್ತದೆ. ಪರಿಸರ ದಿನದ ಬಗ್ಗೆ ಗೊತ್ತಿಲ್ಲದವರಿಗೆ ಪರಿಸರ ಸಂರಕ್ಷಣೆ ಮಹತ್ವದ ಬಗ್ಗೆ ತಿಳಿಸಿ ಅವರನ್ನು ಪ್ರೇರೇಪಿಸುವುದು. ದೈನಂದಿನ ಜೀವನ ಪದ್ಧತಿಗಳಲ್ಲಿನ ಸಣ್ಣ ಬದಲಾವಣೆಗಳು ಸಹ ಪರಿಸರದಲ್ಲಿ ಹೇಗೆ ಅಗಾಧವಾದ ಬದಲಾವಣೆಗಳನ್ನು ತರಬಲ್ಲವು ಎಂಬುದರ ಬಗ್ಗೆ ತಿಳಿದುಕೊಂಡು ಜನರಲ್ಲಿ ಜಾಗೃತಿ ಮೂಡಿಸಿ. ಪರಿಸರ ದಿನವನ್ನು ನೀವು ಹೇಗೆ ಆಚರಿಸಿಕೊಳ್ಳುತ್ತೀರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ, ಇದು ಇತರರನ್ನು ಪ್ರೇರೇಪಿಸುತ್ತದೆ. *** ಪರಿಸರವನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಅರಣ್ಯ ಅಪರಾಧಗಳನ್ನು ತಡೆಗಟ್ಟುವುದು ಮತ್ತು ಹೊಸ ಅರಣ್ಯಗಳನ್ನು ಬೆಳೆಸುವ ಕೆಲಸಗಳನ್ನು ಕೈಗೊಳ್ಳಬೇಕಾಗಿದೆ. ಅಂದರೆ ಜನರು ಮತ್ತು ಪರಿಸರದ ನಡುವೆ ಸೇತುವೆ ಬೆಸೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಪರಿಸರದ ಸೌಂದರ್ಯ ಮತ್ತು ಅದರ ಪ್ರಾಮುಖ್ಯತೆಯನ್ನು ಶ್ಲಾಘಿಸುವುದು ಮತ್ತು ನಮಗೆ ಎಲ್ಲವನ್ನೂ ನೀಡುವ ಭೂಮಿಯನ್ನು ಸಂರಕ್ಷಿಸಿಕೊಳ್ಳುವ ಕೆಲವನ್ನು ನಾವೆಲ್ಲ ತಪ್ಪದೆ ಮಾಡಬೇಕಿದೆ. ಜೊತೆಗೆ ಈ ಮಹತ್ವಾಕಾಂಕ್ಷೆಯ ಸಂಬಂಧಗಳನ್ನು ಅನುಭವಿಸುತ್ತ, ಆನಂದಿಸುತ್ತ ವಿನೋದ ಉತ್ತೇಜಕ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಇಂಗಾಲ ಡೈಆಕ್ಸೈಡ್ ಮತ್ತು ಇತರ ‘ಹಸಿರು ಮನೆ ಪರಿಣಾಮ’ ಬೀರುವ ಅನಿಲಗಳನ್ನು ಬಿಡುಗಡೆ ಮಾಡುವ ಎಲ್ಲಾ ವಿಧಾನಗಳನ್ನು ಕಡಿತಗೊಳಿಸುವುದು ಇಂದಿನ ತೀವ್ರ ಮತ್ತು ತುರ್ತು ಕೆಲಸವಾಗಿದೆ. ಇಂದು ಪರಿಸರ ಬಗೆಗಿನ ಜಾಗೃತಿ ಪ್ರಮುಖ ವಿಷಯವಾಗಿದ್ದು ಅದು ಜನರ ಜೀವನ ಮಟ್ಟವನ್ನು ಸುಧಾರಿಸಲು ಸ್ಫೂರ್ತಿದಾಯಕವಾಗಿದೆ ಮತ್ತು ಭವಿಷ್ಯದ ಪೀಳಿಗೆಗಳಿಗೆ ರಾಜಿ ಮಾಡಿಕೊಳ್ಳದ ಕೆಲಸವಾಗಿದೆ. ಪರಿಸರ, ತನ್ನ ಒಡಲಲ್ಲಿರುವ ಸಮಸ್ತ ಜೀವಜಾಲ-ಮನುಷ್ಯನೂ ಸೇರಿ ಅದು ಬೌದ್ಧಿಕ, ನೈತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕತೆಯನ್ನು ಪೋಷಿಸುವ ಕೆಲಸವನ್ನು ಮಾಡುತ್ತಿದೆ. ಭೂಗ್ರಹದ ಮೇಲೆ ಮಾನವ ಜನಾಂಗ ದೀರ್ಘವಾಗಿ ಮತ್ತು ಕೊನೆ ಹಂತಗಳಲ್ಲಿ ಅತಿ ವೇಗವಾಗಿ ವಿಕಸನಗೊಂಡಿದ್ದರ ಜೊತೆಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ವೇಗವರ್ಧನೆಯು ಪರಿಸರವನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಘಾಸಿಗೊಳಿಸಿಬಿಟ್ಟಿದೆ. ಇಂತಹ ದುರಂತ ಘಟಿಸುತ್ತಿರುವ ಈ ಹೊತ್ತಿನಲ್ಲಿ ಪರಿಸರ ಸಂರಕ್ಷಣೆ ಮತ್ತು ಅದರ ಸುಧಾರಣೆ ಬಹುಮುಖ್ಯ ಜವಾಬ್ದಾರಿಯಾಗಿದೆ. ಇದು ಜಗತ್ತಿನಾದ್ಯಂತ ಒಟ್ಟು ಮನುಕುಲದ ಆರ್ಥಿಕ ಮತ್ತು ಅಭಿವೃದ್ಧಿಯ ಯೋಗಕ್ಷೇಮವನ್ನು ಪ್ರಭಾವಿಸುತ್ತದೆ. ಪ್ರಸ್ತುತ ಪ್ರಪಂಚದಲ್ಲಿ ಪ್ರತಿವರ್ಷ 500 ಶತಕೋಟಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗುತ್ತಿದ್ದು, ಒಂದು ವರ್ಷದಲ್ಲಿ 8 ದಶಲಕ್ಷ ಟನ್ ಪ್ಲಾಸ್ಟಿಕ್ ಸಮುದ್ರ ಸೇರುತ್ತಿದೆ. ಒಂದು ದಿನಕ್ಕೆ ಅಷ್ಟೇ ಟನ್‌ಗಳ ತ್ಯಾಜ್ಯ ನೆಲದ ಮೇಲೆ ಬೀಳುತ್ತಿದೆ. ಹಿಂದಿನ ಶತಮಾನದಲ್ಲಿ ಉತ್ಪಾದಿಸಿದಷ್ಟು ಪ್ಲಾಸ್ಟಿಕನ್ನು ಕಳೆದ ಒಂದು ದಶಕದಲ್ಲಿ ಉತ್ಪಾದಿಸಲಾಗಿದೆ. ವಿಶ್ವದಾದ್ಯಂತ ಒಂದೇ ಸಲ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಶೇ.50ರಷ್ಟಾದರೆ ಒಂದು ನಿಮಿಷಕ್ಕೆ ಒಂದು ದಶಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಜನರು ಕೊಂಡುಕೊಳ್ಳುತ್ತಿದ್ದಾರೆ. ಮನುಷ್ಯರು ಭೂಮಿಯ ಮೇಲೆ ಸೃಷ್ಟಿಸುವ ಒಟ್ಟು ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಶೇ. 10 ಇದೆ. ವಿಪರ್ಯಾಸವೆಂದರೆ ಪರಿಸರದ ಬಗ್ಗೆ ಮಾತನಾಡುವ ದೇಶಗಳು ಮತ್ತು ಜನರು ಎರಡು ನಿಮಿಷಗಳಿಗೆ ನಾಲ್ಕು ಟ್ರಕ್ಕುಗಳಷ್ಟು ಪ್ಲಾಸ್ಟಿಕ್ಕನ್ನು ಸಮುದ್ರಕ್ಕೆ ತಳ್ಳುತ್ತಿದ್ದಾರೆ. ಪರಿಣಾಮ ಜಾಗತಿಕ ತಾಪಮಾನ ಹೆಚ್ಚುತ್ತಿರುವುದರಿಂದ ಸಾಗರಗಳ ಅಗಾಧ ನೀರು ಆವಿಯಾಗಿ ಪ್ರಪಂಚದಾದ್ಯಂತ ಅಪಾರ ಮಳೆ ಬೀಳುತ್ತಿದ್ದು ನೆರೆಯಿಂದ ಎಲ್ಲವೂ ಕೊಚ್ಚಿಹೋಗುತ್ತಿದೆ. ನೆಲ ನೀರು ಗಾಳಿ ಎಲ್ಲವೂ ಮಲಿನಗೊಳ್ಳುತ್ತಿದ್ದು ಮಿತಿಮೀರಿದ ಜನಸಂಖ್ಯೆಯಿಂದ ಸಮಸ್ಯೆಗಳು ಬಿಗಡಾಯಿಸುತ್ತಿವೆ. ಅಭಿವೃದ್ಧಿ ಹೊಂದಿದ ದೇಶಗಳ ಜನರು ಹೆಚ್ಚೆಚ್ಚು ಸವಲತ್ತುಗಳನ್ನು ಅನುಭವಿಸುತ್ತಾ ಭೂಮಿಯಲ್ಲಿ ದೊರಕುವ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಮುಗಿಸುತ್ತಿದ್ದಾರೆ. ಉದ್ಯಮಗಳು, ಸಮುದಾಯಗಳು ಮತ್ತು ವ್ಯಕ್ತಿಗಳು ಒಟ್ಟುಗೂಡಿ ಶಾಖೋತ್ಪನ್ನ ಅನಿಲಗಳನ್ನು ಉರಿಸುವುದನ್ನು ತುರ್ತಾಗಿ ಕಡಿತಗೊಳಿಸಬೇಕಾಗಿದೆ. ನದಿ, ಸಾಗರಗಳನ್ನು ಮಾಲಿನ್ಯಗೊಳಿಸುವ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆಯನ್ನು ತುರ್ತಾಗಿ ಕಡಿಮೆ ಮಾಡಬೇಕಿದೆ.

ಸಮುದ್ರ ಮಾಲಿನ್ಯಗೊಳಿಸುವುದೆಂದರೆ ಸಾಗರ ಜೀವಿಗಳನ್ನು ಹಾನಿಗೊಳಿಸುವುದು. ಸುಂದರವಾದ ಕಡಲ ತೀರಗಳು, ನದಿಗಳು ನಾಶವಾಗುತ್ತಿವೆ. ಫಲವತ್ತಾದ ಭೂಮಿ ಬರಡು ಭೂಮಿಯಾಗುತ್ತಿದೆ. ಮಿಲಿಯಾಂತರ ಲೀಟರ್‌ಗಳ ಇಂಧನ-ಅನಿಲವನ್ನು ಸುಡುವುದರ ಫಲಿತಾಂಶ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು ಆಕಾಶದಲ್ಲಿ ಓರೆನ್ ರಂಧ್ರ ದೊಡ್ಡದಾಗುತ್ತಾ ಹೋಗುತ್ತಿದೆ. ಇದರಿಂದ ಅತಿ ನೇರಳಾತೀತ ಕಿರಣಗಳು ಭೂಮಿಯ ಮೇಲೆ ಬಿದ್ದು ಮನುಷ್ಯ, ಪಕ್ಷಿ-ಪ್ರಾಣಿಗಳು ಹಲವು ರೋಗಗಳಿಗೆ ತುತ್ತಾಗುತ್ತಿವೆ. ಭೂಮಿ, ಫಲವತ್ತಾದ ಮಣ್ಣು ಮತ್ತು ಸಾಗರ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುವುದರ ಜೊತೆಗೆ ಮುಂದಿನ ಪೀಳಿಗೆಗಳಿಗೆ ಬಿಟ್ಟುಹೋಗಬೇಕಿದೆ. ಇಲ್ಲವೆಂದರೆ ಅವರ ಭವಿಷ್ಯ ಅಂಧಮಯವಾಗಲಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button