
ಹೊಸಕೋಟೆ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ಶ್ವೇತಾ ಎಂಬಾಕೆ ಮಗು ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶವಗಳು ಪತ್ತೆಯಾಗಿವೆ.
ಎರಡು ವರ್ಷದ ಹಿಂದೆ ಕಲ್ಕುಂಟೆ ಅಗ್ರಹಾರ ಗ್ರಾಮದ ರಾಕೇಶ್ ಜೊತೆ ಆಕೆ ಕೆಆರ್ ಪುರಂ ಬಳಿಯ ಮೇಡಹಳ್ಳಿ ನಿವಾಸಿ ಶ್ವೇತಾರ ಮದುವೆಯಾಗಿತ್ತು.
ಮದುವೆಯಾಗಿ ಎರಡು ವರ್ಷ ಕಳೆಯುವಷ್ಟರಲ್ಲೆ ರಾಕೇಶ್ ಬೇರೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿರುವುದು ಪತ್ನಿಗೆ ಗೊತ್ತಾಗಿದೆ.
ಹಲವು ಬಾರಿ ಇದೇ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು ಎರಡೂ ಮನೆಯವರು ಕುಳಿತು ರಾಜಿ ಪಂಚಾಯ್ತಿ ಮಾಡಿದ್ದಾರೆ.ಗಂಡ ಹಳೆ ಚಾಳಿ ಮುಂದುರಿಸಿ ಇತ್ತೀಚೆಗೆ ಶ್ವೇತಾಗೆ ವರದಕ್ಷಿಣೆ ಕಿರುಕುಳ ನೀಡಿದ್ದ ಎನ್ನಲಾಗಿದೆ.
ಮನನೊಂದ ಆಕೆ ಒಂದೂವರೆ ವರ್ಷದ ಮಗು ಜೊತೆ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ವೇತಾ ಸಾವಿಗೆ ಗಂಡ ರಾಕೇಶ್ ಮತ್ತು ಅವರ ಮನೆಯವರು ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.