
ಹರಿಯಾಣದ ಬಲ್ಲಭಗಢ ಮೂಲದ ಮಹಿಳೆಯ ಗಂಡನಿಗೆ ಸರ್ಕಾರಿ ಕೆಲಸ ನೀಡುವುದಾಗಿ ಆಮಿಷವೊಡ್ಡಿ ಆಕೆಯಿಂದ ಕಿಡ್ನಿ ದಾನ ಮಾಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಎರಡು ವರ್ಷಗಳ ಹಿಂದೆ ಕಿಡ್ನಿ ಕಸಿಗೆ ಸಂಬಂಧಿಸಿದ ಜಾಹೀರಾತನ್ನು ಮಹಿಳೆ ನೋಡಿದ್ದಳು.
ಬಳಿಕ ಜಾಹೀರಾತಿನಲ್ಲಿ ಪ್ರಕಟವಾಗಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿ, ತಾನು ಕಿಡ್ನಿ ದಾನ ಮಾಡುವುದಾಗಿ ಹೇಳಿದ್ದಳು.
ನಂತರ ಕಿಡ್ನಿ ದಾನ ಮಾಡುವುದರಿಂದ ಹಿಂದೆ ಸರಿದಿದ್ದಳು. ಇದಾದ ಬಳಿಕ ಜಾಹೀರಾತು ನೀಡಿದವರು ಮಹಿಳೆಗೆ ಹಲವು ಬಾರಿ ಕರೆ ಮಾಡಿ ಕಿಡ್ನಿ ದಾನ ಮಾಡುವಂತೆ ಆಕೆಯ ಮನವೊಲಿಸಿದ್ದಾರೆ.
ಕಿಡ್ನಿ ದಾನ ಮಾಡಿದರೆ ಗಂಡನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿಕೊಂಡು ಮಹಿಳೆ ಒಂದು ಕಿಡ್ನಿಯನ್ನು ದಾನ ಮಾಡಿದ್ದಾಳೆ.
ಫರೀದಾಬಾದ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಕಸಿ ಮಾಡಲಾಗಿದೆ. ಆದರೆ ಸಾಕಷ್ಟು ತಿಂಗಳು ಕಳೆದರು ಗಂಡನಿಗೆ ಮಾತ್ರ ಸರ್ಕಾರಿ ಕೆಲಸ ಸಿಕ್ಕಿಲ್ಲ.ಕರೆ ಮಾಡಿ ವಿಚಾರಿಸಿದರೆ ಯಾವುದೇ ಸ್ಪಂದನೆ ನೀಡಿಲ್ಲ.
ಇದರಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು. ಈ ಪ್ರಕರಣದ ಹಿಂದೆ ಅಂಗಾಂಗ ಮಾಫಿಯಾ ಇದೆಯಾ ಎಂಬ ಆಯಮದಲ್ಲೂ ತನಿಖೆ ನಡೆಸುವುದಾಗಿ ಅಧಿಕಾರಿ ತಿಳಿಸಿದ್ದಾರೆ.