ಪಠ್ಯಪುಸ್ತಕ ಪರಿಷ್ಕರಣೆ : ಚಕ್ರತೀರ್ಥ ಸಮಿತಿಯ ತಪ್ಪು ತಿದ್ದಲು ಮತ್ತೊಂದು ಸಮಿತಿ ರಚನೆ!

ಬೆಂಗಳೂರು : ರಾಜ್ಯದಲ್ಲಿ ತಣ್ಣಗಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆ ಗುದ್ದಾಟ ಮತ್ತೆ ಮುನ್ನಲೆಗೆ ಬಂದಿದೆ.
ರೋಹಿತ್ ಚಕ್ರತೀರ್ಥ ಸಮಿತಿಯ ಎಡವಟ್ಟು ಸರಿಪಡಿಸಲು ಶಿಕ್ಷಣ ಇಲಾಖೆ ಸಿಎಂ ಸೂಚನೆಯಂತೆ ಮತ್ತೊಂದು ಸಮಿತಿ ಮೊರೆ ಹೋಗಿದೆ.
ರೋಹಿತ್ ಚಕ್ರತೀರ್ಥ ಪರಿಷ್ಕರಣೆ ವೇಳೆಯಾದ ಎಡವಟ್ಟು ಹಾಗೂ ವಿರೋಧ ಕೇಳಿಬಂದಿರುವ ಅಂಶಗಳ ಪರಿಷ್ಕರಣೆಗೆ ಹೊಸ ಸಮಿತಿ ರಚನೆ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆ ಹೊಸ ಸಮಿತಿಯಲ್ಲಿ ಶಿಕ್ಷಣ ತಜ್ಞರು ಚಿಂತಕರು ಸಾಹಿತಿಗಳು ಯಾರಿಗೂ ಮಣೆ ಹಾಕಲಿದೆ ಎಂದು ಹೇಳಲಾಗುತ್ತಿದೆ.
ಮತ್ತೆ ವಿರೋಧ ಕೇಳಿ ಬರುವ ಆತಂಕದಿಂದ ಹಳೆಯ ಸಮಿತಿಯ ಯಾವುದೇ ಸದಸ್ಯೆನಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಶಿಕ್ಷಣ ಇಲಾಖೆಯೇ ತಪ್ಪುಗಳನ್ನ ಸರಿಪಡಿಸಲು ಮುಂದಾಗಿದೆ.
ಶಿಕ್ಷಣ ಇಲಾಖೆಯ ಡೈಯಟ್ ಪ್ರಾಶಂಪಾಲರು ಹಾಗೂ ನುರಿತ ಶಿಕ್ಷಕರು, ತಜ್ಞ ಶಿಕ್ಷಕರ ನೇತೃತ್ವದಲ್ಲಿ ಎಡವಟ್ಟು ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ಪರಿಷ್ಕೃತ ತಪ್ಪುಗಳನ್ನ ಸರಿಪಡಿಸಿ ಮಕ್ಕಳಿಗೆ ನೀಡಲುಮುಂದಾಗಿದೆ.