ರಾಜ್ಯ

ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ

ರಾಜ್ಯದಲ್ಲಿ ೩೮ ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ೭ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ವಿ.

ಸುನಿಲ್‌ಕುಮಾರ್ ವಿಧಾನಪರಿಷತ್‌ನಲ್ಲಿಂದು ಹೇಳಿದರು.ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲು ಪ್ರತಿವರ್ಷ ೧೩ ಸಾವಿರ ಕೋಟಿ ರೂ. ಸಹಾಯ ಧನ ನೀಡಲಾಗುವುದು. ೬೦೦-೭೦೦ ಕೋಟಿ ರೂ.

ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಬಳಕೆಯಾಗುತ್ತಿದೆ ಎಂದರು.ಭಾರತಿಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ೨ ವರ್ಷಗಳ ಅವಧಿಯಲ್ಲಿ ಹೆಚ್ಚುವರಾಗಿ ೬.೩೦ ಲಕ್ಷ ರೈತರನ್ನು ಕೃಷಿ ಪಂಪ್‌ಸೆಟ್‌ಗೆ ಅಳವಡಿಸಿಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಅವಘಡ ಸೇರಿದಂತೆ ಇನ್ನಿತರ ಅಪಾಯಕಾರಿ ಘಟನೆ ಬೆಂಗಳೂರು ಸೇರಿದಂತೆ ಇತರೆ ಪ್ರಮುಖ ನಗರಗಳಲ್ಲಿ ಭೂಗತ ಕೇಬಲ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ಹಿಂದಿನ ಸರ್ಕಾರ ೫ ಸಾವಿರ ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದೆ.

ಈ ಸಂಬಂಧ ಈ ಯೋಜನೆ ಕಾರ್ಯಗತಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿದರು.೩೮.೭೩ ಕೋಟಿ ರೂ. ಸಾಲರಾಜ್ಯದ ಎಸ್ಕಾಂಗಳು ಮತ್ತು ಕೆಪಿಟಿಸಿಎಲ್‌ಗಳಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ೩೮,೯೭೩ ಕೋಟಿ ರೂ.

ಸಾಲ ಮಾಡಿವೆ ಎಂದು ಅವರು ಹೇಳಿದರು.ಈ ಪೈಕಿ ಕೆಪಿಟಿಸಿಎಲ್ ೯೫೯೦ ಕೋಟಿ ರೂ., ಬೆಸ್ಕಾಂ ೧೩,೬೧೩ ಕೋಟಿ, ಸೆಸ್ಕಾಂ ೩೫೩೬ ಕೋಟಿ, ಮೆಸ್ಕಾಂ ೧೨೮೨ ಕೋಟಿ, ಎಸ್ಕಾಂ ೭೪೮೦ ಕೋಟಿ ಮತ್ತು ಜೆಸ್ಕಾಂ ೩೪೨೨ ಕೋಟಿ ರೂ. ಸಾಲ ಮಾಡಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ವಿವಿಧ ವಿದ್ಯುತ್ ಕಂಪನಿಗಳು ಉತ್ಪಾದಿಸಲು ಒಟ್ಟಾರೆ ವಿದ್ಯುತ್ ಪೈಕಿ ಶೇ. ೬೦ ರಷ್ಟನ್ನು ನೀರಾವರಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button