ನ್ಯಾ. ಚಂದ್ರಚೂಡ್ ಸುಪ್ರಿಂನ ನೂತನ ಸಿಜೆ ನೇಮಕ

ಸುಪ್ರೀಂಕೋರ್ಟ್‌ನ ೫೦ನೇ ಮುಖ್ಯ ನ್ಯಾಯಾಧೀಶರಾಗಿ ಹಿರಿಯ ನ್ಯಾಯಾಧೀಶರಾದ ಡಿ.ವೈ ಚಂದ್ರಚೂಡ್ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಮುಂದಿನ ತಿಂಗಳು ೮ ರಂದು ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ತಮ್ಮ ಉತ್ತರಾಧಿಕಾರಿಯಾಗಿ ಡಿ.ವೈ ಚಂದ್ರಚೂಡ್ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.ಸುಪ್ರೀಂಕೋರ್ಟ್ ನ ಎಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಮುಂದಿನ ಮುಖ್ಯನ್ಯಾಯಮೂರ್ತಿಯನ್ನಾಗಿ ಶಿಫಾರಸ್ಸು ಮಾಡಲಾಗುತ್ತಿದೆ ಎಂದು ಮುಖ್ಯನ್ಯಾಯಮೂರ್ತಿ ಯು.ಯು ಲಲಿತ್ ಪ್ರಕಟಿಸಿದ್ದಾರೆ…
ಮುಂದಿನ ತಿಂಗಳು ಅವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ೭ ರಂದು ಕೇಂದ್ರ ಕಾನೂನು ಸಚಿವಾಲಯ ಮುಖ್ಯ ನ್ಯಾಯಾಧಿಶರಾದ ಯು.ಯು ಲಲಿತ್ ಅವರಿಗೆ ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ತಿಳಿಸಿದೆ. ಅದರನ್ವಯ ನೂತನ ಮುಖ್ಯ ನ್ಯಾಯಮೂರ್ತಿ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ.
ಕೊಲಿಜಿಯಂ ತಿರಸ್ಕಾರ.ಸುಪ್ರೀಂಕೋರ್ಟ್‌ಗೆ ನಾಲ್ವರು ನ್ಯಾಯಮೂರ್ತಿಯನ್ನು ನೇಮಕ ಮಾಡುವ ಶಿಫಾರಸ್ಸಿನ ಪ್ರಸ್ತಾವನೆಯನ್ನು ಮುಖ್ಯನ್ಯಾಯಮೂರ್ತಿ ಯು. ಯು. ಲಲಿತ್ ನೇತೃತ್ವದ ಕೊಲಿಜಿಯಂ ತಿರಸ್ಕರಿಸಿದೆ.ನಾಲ್ವರು ನ್ಯಾಯಾಧೀಶರ ನೇಮಕ ಸಂಬಂಧ ಕೊಲಿಜಿಯಂನಲ್ಲಿ ಹೆಚ್ಚು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ.
ಸುಪ್ರೀಂ ಕೋರ್ಟ್ ಇಬ್ಬರು ನ್ಯಾಯಾಧೀಶರರಾದ ನ್ಯಾಯಮೂರ್ತಿಗಳು ಡಿ.ವೈ. ಚಂದ್ರಚೂಡ್ ಮತ್ತು ಎಸ್.ಎ. ನಜೀರ್ ಆಕ್ಷೇಪ ವ್ಯಕ್ತಪಡಿಸಿದ್ದರು.ನಾಲ್ಕು ನ್ಯಾಯಾಧೀಶ ಪೈಕಿ ಮೂವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರ ಹೆಸರನ್ನು ಶಿಫಾರಸು ಮಾಡುವ ಪ್ರಸ್ತಾವನೆಗೆ ಮುಖ್ಯನ್ಯಾಯಮೂರ್ತಿ ಯು.ಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕೆ ಕೌಲ್ ಮತ್ತು ಕೆಎಂ ಜೋಸೆಫ್ ಅವರ ಅನುಮೋದನೆ ಪಡೆದಿದೆ.
೧೯೯೮ ರ ಸಂವಿಧಾನ ಪೀಠದ ‘ನ್ಯಾಯಾಧೀಶರ ನೇಮಕಾತಿಗಳು ಮತ್ತು ವರ್ಗಾವಣೆಗಳ’ ತೀರ್ಪಿನ ಪ್ರಕಾರ, ಕೊಲಿಜಿಯಂ ನಿರ್ಣಯವನ್ನು ಮುಖ್ಯನ್ಯಾಯಮೂರ್ತಿ ಸೇರಿದಂತೆ ಐದು ನ್ಯಾಯಾಧೀಶರಲ್ಲಿ ಕನಿಷ್ಠ ನಾಲ್ವರು ಬೆಂಬಲಿಸಬೇಕಾಗಿದೆ.
ಹೀಗಾಗಿ ಮುಂದಿನ ಮುಖ್ಯನ್ಯಾಯಾಧೀಶರು ನೇಮಕಾತಿ ಮಾಡಲು ಅವರ ವಿವೇಚನೆಗೆ ಬಿಡಲಾಗಿದೆ.