
ಧಾರವಾಡದ ಹೈಕೋರ್ಟ್ ಪೀಠದಲ್ಲಿ ಕೆಲಸ ಕೊಡಿಸುವುದಾಗಿ, ಧಾರವಾಡದ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಹೆಸರಿನಲ್ಲಿ ನಕಲಿ ಸಹಿ ಮಾಡಿ ಆದೇಶ ಪತ್ರ ನೀಡಿದ್ದ ಶಂಕರಗೌಡ ಪಾಟೀಲ ಎಂಬಾತನಿಗೆ ನಗರದ ಎರಡನೇ ಜೆಎಂಎಫ್‍ಸಿ ಕೋರ್ಟ್ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ.
ಅಪರಾ ಶಂಕರಗೌಡ ಕೆಲಸ ಕೊಡಿಸುವುದಾಗಿ ಹೇಳಿ ಕಳ್ಳೆಪ್ಪ ಮದೆಪ್ಪನವರ ಹಾಗೂ ರಾಮಪ್ಪ ಹೊರಟ್ಟಿ ಎಂಬುವರಿಂದ 2012ರಲ್ಲಿ 1.13 ಲಕ್ಷ ಪಡೆದಿದ್ದ.
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾೀಶರಾದ ಕರ್ನಸಿಂಗ್ ಆರ್.ಯು. ಆರೋಪಿಗೆ ಶಿಕ್ಷೆ ವಿಸಿ ಆದೇಶ ಹೊರಡಿಸಿದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಗೋವಿಂದ್ದಮ್ಮ ಬಾಲಯ್ಯ ವಾದ ಮಂಡಿಸಿದ್ದರು.