ನೋಟು ರದ್ದು :ಅ. ೧೨ ಸುಪ್ರೀಂ ವಿಚಾರಣೆ

ದೇಶದಲ್ಲಿ ನೋಟು ರದ್ದತಿ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ ೧೨ ರಂದು ನಡೆಸಲು ಸುಪ್ರೀಂಕೋರ್ಟ್ ಸಾಂವಿಧಾನಿಕ ಸಮ್ಮತಿಸಿದೆ.
ದೇಶದಲ್ಲಿ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಕೇಂದ್ರದ ೨೦೧೬ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಅಕ್ಟೋಬರ್ ೧೨ ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಹೇಳಿದೆ.
೨೦೧೬ ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೋಟುಗಳ ಅಮಾನ್ಯೀಕರಣದ ವಿರುದ್ಧದ ಅರ್ಜಿಗಳನ್ನು ವಿಚಾರಣೆಯನ್ನು ಸುಪ್ರೀಂಕೋರ್ಟ್ ಸಂವಿಧಾನ ಪೀಠ ಇಂದು ವಿಚಾರಣೆ ನಡೆಸಲು ಸಮಯ ನಿಗದಿಪಡಿಸಿತ್ತು.
ಇಂದು ಅರ್ಜಿಯನ್ನು ಅಕ್ಟೋಬರ್ ೧೨ ಕ್ಕೆ ಮುಂದೂಡಿದೆ.ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.೨೦೧೬ ರ ನವೆಂಬರ್ ೮ ಅಧಿಸೂಚನೆಯನ್ನು ಪ್ರಶ್ನಿಸಿ ವಿವೇಕ್ ನಾರಾಯಣ ಶರ್ಮಾ ಅವರು ಅರ್ಜಿಗಳಲ್ಲಿ ಒಂದನ್ನು ಸಲ್ಲಿಸಿದ್ದಾರೆ.
೨೦೧೬ ರ ನವಂಬರ್ ನಲ್ಲಿ ಅಧಿಸೂಚನೆಯು ಕಲಂ ೨೬ (೨) ಮತ್ತು ಕಲಂ ೭.೧೭.೨೩,೨೪,೨೯ ಮತ್ತು ಸೆಕ್ಷನ್‌ಗಳಿಗೆ ವಿರುದ್ಧವಾಗಿದೆಯೇ ಎಂಬ ಸಮಸ್ಯೆಗಳನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, ೧೯೩೪ ರ ೪೨ ಮತ್ತು ಅಧಿಸೂಚನೆಯು ಸಂವಿಧಾನದ ೩೦೦ (ಎ) ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎನ್ನುವುದನ್ನು ಪರಿಶೀಲಿಸಲು ನ್ಯಾಯಾಲಯ ಸಮ್ಮತಿಸಿದೆ.
೫೦೦ ಮತ್ತು ೧೦೦೦ ರೂ.ಗಳ ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರದ ೨೦೧೬ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ನೇತೃತ್ವದ ನಾಲ್ಕನೇ ಸಾಂವಿಧಾನಿಕ ಪೀಠ, ಸಂವಿಧಾನದ ೧೪, ೧೯, ೨೧ ಮತ್ತು ೩೦೦ಎ ಪರಿಚ್ಛೇದಗಳ ಉಲ್ಲಂಘನೆಯಾಗಿದೆಯೇ ಎಂಬ ಕಾರಣಕ್ಕಾಗಿ ಆರ್‌ಬಿಐ ಕಾಯ್ದೆಯಡಿಯಲ್ಲಿ ಹೊರಡಿಸಲಾದ ಆದೇಶದ ಸಿಂಧುತ್ವವನ್ನು ಅರ್ಜಿಗಳು ಪ್ರಶ್ನಿಸಿವೆ.