ನೂಪುರ್ ಶರ್ಮಾರ ಬೆಂಬಲಿಸಿದ್ದ ಮತ್ತೋರ್ವನ ಕತ್ತು ಸೀಳಿ ಹತ್ಯೆ

ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದಕ್ಕಾಗಿ ಉದಯ್‌ಪುರದಲ್ಲಿ ಟೈಲರ್ ಹತ್ಯೆ ಮಾಡಿದಂತೆ ಮತ್ತೊಂದು ಹತ್ಯೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ವೈದ್ಯಕೀಯ ಪ್ರೊಫೆಸರ್ ಒಬ್ಬರನ್ನ ಕತ್ತು ಸೀಳಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ನೂಪುರ್‌ಶರಾಮ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಅಮರಾವತಿಯಲ್ಲಿ ವೈದ್ಯಕೀಯ ಪ್ರೊಫೆಸರ್ ಉಮೇಶ್ ಕೋಲೆ ಅವರನ್ನು ಜೂನ್ 21 ರಂದು ಶಿರಚ್ಛೇದ ಮಾಡಲಾಗಿದೆ ಎಂದು ಆರ್ಗನೈಸರ್ ವೀಕ್ಲಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಬ್ದುಲ್ (24), ಶೋಯೆಬ್ ಖಾನ್ (22), ಮುದಸ್ಸಿರ್ ಅಹ್ಮದ್ ಶೇಖ್ ಇಬ್ರಾಹಿಂ (22) ಮತ್ತು ಶಾರುಖ್ ಪಠಾಣ್ ಹಿದಾಯತ್ ಖಾನ್ (24) ಎಂಬ ನಾಲ್ವರನ್ನ ಬಂಧಿಸಲಾಗಿದೆ.ಆದರೆ ಹತ್ಯೆಯ ಸಮಯದಲ್ಲಿ ಇದು ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಮಾಡಲಾದ ಹತ್ಯೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಆರೋಪಿಗಳ ಬಂಧನದ ಬಳಿಕ ಖಚಿತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಬಿಜೆಪಿ ಆಗ್ರಹಿಸಿದೆ.