ರಾಜ್ಯ

ನೀವು ಬಿಜೆಪಿ ಜೊತೆ ವೀಲಿನವಾಗಿ, ನಾವು ಮತ್ತೆ ಶಿವಸೇನಾ ಕಟ್ಟುತ್ತೇವೆ”

ನವದೆಹಲಿ: ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣ ಈಗ ಮಹಾರಾಷ್ಟ್ರದಲ್ಲಿ ಬಂಡಾಯ ಎದ್ದಿರುವ ಬೆನ್ನಲ್ಲೇ ಶಿವಸೇನಾ ವಕ್ತಾರ ಸಂಜಯ್ ರಾವತ್ ಅವರು ಬಂಡಾಯ ಶಾಸಕರಿಗೆ ಬಿಜೆಪಿ ಜೊತೆ ವೀಲಿನವಾಗಿರಿ, ನಾವು ಹೊಸದಾಗಿ ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ ಎಂದು ಹೇಳಿದ್ದಾರೆ.

ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಜಯ್ ರಾವತ್ “ಎಲ್ಲಾ ಶಾಸಕರು ಸದನಕ್ಕೆ ಬರಲಿ, ನಾವು ನಂತರ ನೋಡುತ್ತೇವೆ, ಅವರು ಮಹಾರಾಷ್ಟ್ರದಲ್ಲಿ ತಿರುಗಾಡುವುದು ಕಷ್ಟವಾಗುತ್ತದೆ” ಎಂದು ಅವರು ಹೇಳಿದರು. ಬಂಡಾಯ ಶಾಸಕರ ಜೊತೆ ಮಾತುಕತೆ ನಡೆಯುತ್ತಿದೆಯೇ? ಎನ್ನುವ ಬಗ್ಗೆ ಉತ್ತರಿಸಿದ ರಾವತ್ “ಅವರೆಲ್ಲರೂ ನಮ್ಮ ಸ್ನೇಹಿತರು… ಅವರ ಒತ್ತಡ ಏನು ಎನ್ನುವುದು ನಮಗೆ ತಿಳಿದಿಲ್ಲ, ಪಕ್ಷ ಮತ್ತು ರಾಜ್ಯವು ಉದ್ಧವ್ ಠಾಕ್ರೆ ಅವರೊಂದಿಗೆ ಇದೆ.

ಕೆಲವು ಶಾಸಕರು ತೊರೆದ ಕಾರಣ ಪಕ್ಷ ಹೋಗಿದೆ ಎಂದಲ್ಲ” ಎಂದು ಹೇಳಿದರು.”ಬಾಳಾಸಾಹೇಬ್ ಠಾಕ್ರೆ ಅವರ ಕಾಲದಲ್ಲಿಯೂ ಬಹಳಷ್ಟು ಜನರು ಪಕ್ಷವನ್ನು ತೊರೆದರು, ಆದರೆ ನಾವು ಪಕ್ಷವನ್ನು ಮತ್ತೆ ಕಟ್ಟಿದ್ದೇವೆ ಮತ್ತು ಅದನ್ನು ಅಧಿಕಾರಕ್ಕೆ ತಂದಿದ್ದೇವೆ.ಹಾಗೆಯೇ ಈಗ ನಾವು ಮತ್ತೆ ಅದನ್ನು ಕಟ್ಟಿ ಅಧಿಕಾರಕ್ಕೆ ತರುತ್ತೇವೆ ಎಂದು ರಾವತ್ ಹೇಳಿದರು.

ಇದೆ ವೇಳೆ ಸಿಎಂ ಅವರ ಮನೆ ಶಾಸಕರ ಮಿತಿಯಿಂದ ಹೊರಗಿದೆ ಎನ್ನುವ ಶಿಂಧೆ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು ‘ಕ್ಷಮಿಸಿ, ಒಂದು ವರ್ಷ ಕೋವಿಡ್ ನಿರ್ಬಂಧಗಳು ಇದ್ದವು; ಮತ್ತು ನಂತರ ಮುಖ್ಯಮಂತ್ರಿ ಠಾಕ್ರೆ ಆರು ತಿಂಗಳ ಕಾಲ ಅಸ್ವಸ್ಥರಾಗಿದ್ದರು.

ಪಕ್ಷ ಮತ್ತು ರಾಜ್ಯ ಸಚಿವ ಸಂಪುಟದಲ್ಲಿ, ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗಿತ್ತು. ಈಗ ಯಾರು ಪಕ್ಷವನ್ನು ಬಿಡಲು ಬಯಸುತ್ತಿದ್ದಾರೋ ಅವರೆಲ್ಲರೂ ಬಿಡಬಹುದು, ಈ ಭೂಮಿ ಶಿವಸೇನೆ ಮತ್ತು ಬಾಳಾಸಾಹೇಬರಿಗೆ ಸೇರಿದ್ದು… ಫೀನಿಕ್ಸ್ ಹಕ್ಕಿಯಂತೆ ಮತ್ತೆ ನಾವು ಮೇಲೆದ್ದು ಮೇಲೇರುತ್ತೇವೆ.

ಕಳೆದ 56 ವರ್ಷಗಳಲ್ಲಿ ನಾವು ಇಂತಹ ಹಲವಾರು ಹೋರಾಟಗಳನ್ನು ನೋಡಿದ್ದೇವೆ “ಎಂದು ಅವರು ಹೇಳಿದರು.

ಬಹುಶಃ ನಾವು ಸರ್ಕಾರವನ್ನು ಕಳೆದುಕೊಳ್ಳಬಹುದು, ಅಧಿಕಾರ ಕಳೆದುಕೊಳ್ಳಬಹುದು, ಸಚಿವ ಸ್ಥಾನ ಕಳೆದುಕೊಳ್ಳಬಹುದು ಜೊತೆಗೆ ರಾಜಕೀಯದಲ್ಲಿ ಇನ್ನೇನೋ ಆಗಬಹುದು? ನೀವು ನಮ್ಮ ವಿರುದ್ಧ ಇಡಿ ಮತ್ತು ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳುತ್ತೀದ್ದಿರಿ, ನಮ್ಮನ್ನು ನೀವು ಬಹಳ ಎಂದರೆ ಜೈಲಿಗೆ ಹಾಕಬಹುದುದು, ನಮ್ಮನ್ನು ಶೂಟ್ ಮಾಡುತ್ತೀರಾ? ನಾವು ಎಲ್ಲವನ್ನೂ ನೋಡಿದ್ದೇವೆ, ಯಾವುದಕ್ಕೂ ಹೆದರುವುದಿಲ್ಲ’ ಎಂದು ಸಂಜಯ್ ರಾವತ್ ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button