ನೀಲಕುರಿಂಜಿ ಹೂ ಕಣ್ತುಂಬಿಕೊಳ್ಳಲು ಕಾಫಿನಾಡಿಗೆ ಪ್ರವಾಸಿಗರ ಲಗ್ಗೆ

ವರ್ಷಕ್ಕೊಮ್ಮೆ ಅರಳುವ ನೀಲಕುರಿಂಜಿ ಹೂಗಳನ್ನು ನೋಡಲು ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹೌದು ನೀಲಕುರಿಂಜಿ ಹೂವಿನ ಬಗ್ಗೆ ನೀವು ಕೇಳಿದ್ದೀರಾ ಇದು ೧೨ ವರ್ಷಗಳಿಗೊಮ್ಮೆ ಅರಳುವ ಹೂವು.
ಇದು ದಕ್ಷಿಣ ಭಾರತದಲ್ಲಿರುವ ನೀಲಗಿರಿ ಬೆಟ್ಟದಲ್ಲಿರುವ ಸೋಲಾ ಕಾಡಿನಲ್ಲಿ ಹೆಚ್ಚಾಗಿ ಕಾಣಸಿಗಲಿದೆ. ಇದರ ವೈಜ್ಞಾನಿಕ ಹೆಸರು ಸ್ಟ್ರೊಬಿಯಾಂತಸ್ ಕುಂತಿಯಾನ.೧೨ ವರ್ಷಗಳಿಗೊಮ್ಮೆ ಅರಳೋ ಈ ಹೂವು ತಿಂಗಳುಗಳ ಕಾಲ ತನ್ನ ಸೌಂದರ್ಯವನ್ನು ಹೊರಚೆಲ್ಲುತ್ತಾ ಕಾಫಿ ನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮತ್ತೊಂದು ಸೌಂದರ್ಯಕ್ಕೆ ಸಾಕ್ಷಿಯಾಗಿದೆ.
ನೀಲಗಿರಿ ಬೆಟ್ಟ ಹೆಸರು ಬರಲು ಕಾರಣವೇನು ಎಂಬ ಪ್ರಶ್ನೆ ಮೂಡುವುದು ಸಹಜ. ನೀಲಗಿರಿ ಬೆಟ್ಟವನ್ನು ಈ ಹೆಸರಿನಲ್ಲಿ ಗುರುತಿಸಲ್ಪಡಲು ಈ ಹೂವೇ ಕಾರಣ ಎನ್ನಲಾಗುತ್ತದೆ. ಈ ಹೂವು ಅರಳಿದಾಗ ಇದು ನೀಲಿ ಬಣ್ಣದಲ್ಲಿರುತ್ತದೆ. ಹಾಗಾಗಿ ಬೆಟ್ಟವಿಡೀ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ.
ಹಾಗಾಗಿ ನೀಲಗಿರಿ ಎನ್ನಲಾಗಿದೆ.ಹತ್ತೊಂಬತ್ತನೇ ಶತಮಾನದಲ್ಲಿ ಕ್ರಿಶ್ಚಿಯನ್ ಗಾಟ್ಫ್ರೈಡ್ ಡೇನಿಯಲ್ ನೀಸ್ ವಾನ್ ಎಸೆನ್ಬೆಕ್ ಎಂಬ ವ್ಯಕ್ತಿ ಈ ಹೂವನ್ನು ಮೊದಲು ಗುರುತಿಸಿದ್ದರು. ಈ ಕುರುಂಜಿ ಹೂವು ೨೫೦ ಜಾತಿಗಳಲ್ಲಿ ಕಂಡುಬರುತ್ತದೆ.
ಅದರಲ್ಲಿ ೪೬ ಜಾತಿಯ ಹೂವುಗಳು ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಹಾಕಿದ್ದಾರೆ.ಪ್ರತಿ ೧೨ ವರ್ಷಗಳಿಗೊಮ್ಮೆ ಅರಳುವ ಅಪರೂಪದ ನೀಲಕುರಿಂಜಿ ಹೂವುಗಳು ವಿಶೇಷ, ಹಲವು ವರ್ಷಗಳ ಬಳಿಕ ಅರಳಿರುವ ಹೂವುಗಳು ದೇಶ ವಿದೇಶಗಳಿಂದ ಬರುತ್ತಿರುವ ಪ್ರವಾಸಿಗರನ್ನು ಕಣ್ಮನ ಕೋರೈಸಿ ತಮ್ಮತ್ತ ಸೆಳೆಯುತ್ತಿವೆ.
ಈ ಹೂವುಗಳು ಅರಳಿದಾಗ ಗಿಡದ ಕಾಂಡದಲ್ಲಿ ಅಪಾರ ಪ್ರಮಾಣದ ಔಷಧಿಯ ಗುಣ ಅಡಗಿರುತ್ತದೆಯಂತೆ. ಹೀಗಾಗಿ ನಾನಾ ಕಾಯಿಲೆಗೂ ಇದನ್ನು ಔಷಧಿಯಾಗಿ ಬಳಸುತ್ತಾರೆ.ಪ್ರವಾಸಿಗರು, ಮೈಕ್ರೋ-ಬ್ಲಾಗಿಂಗ್ ಸೈಟ್ನಲ್ಲಿ, ನೀಲಕುರಿಂಜಿಯಿಂದ ತುಂಬಿದ ಪರ್ವತಗಳ ಉಸಿರುಕಟ್ಟುವ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಇವುಗಳು ಪ್ರಾಥಮಿಕವಾಗಿ ದೇಶದ ದಕ್ಷಿಣ ಭಾಗದಲ್ಲಿ ಕಂಡುಬರುತ್ತವೆ ಎಂದು ಉಲ್ಲೇಖಿಸಿದ್ದಾರೆ. ಮುಖ್ಯವಾಗಿ ಊಟಿ ಮತ್ತು ಮುನ್ನಾರ್ ಸೇರಿದಂತೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ.೧೨ ವರ್ಷಗಳ ನಂತರ ಇಲ್ಲಿ ನೀಲಕುರುಂಜಿ ಹೂವು ಅರಳಿದೆ.
ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂವುಗಳು ಅರಳುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ೫, ೭, ೧೨, ೧೪ ಹಾಗೂ ೧೬ ವರ್ಷಕ್ಕೆ ಒಮ್ಮೆ ಅರಳುವ ಪ್ರಭೇದದ ಹೂವುಗಳೂ ಇದೆ. ಸ್ಟ್ರೊಬಿಲಂಥೆಸ್ ಕುಂತಿಯಾನ ಎನ್ನುವ ಸಸ್ಯ ಶಾಸ್ತ್ರೀಯ ಹೆಸರು ಇರುವ ಈ ಹೂವನ್ನು ಗುರ್ಗಿ ಹೂವು ಎಂದು ಕೂಡ ಕರೆಯಲಾಗುತ್ತದೆ.
ಸುಮಾರು ೨ ತಿಂಗಳು ಈ ಹೂವು ಅರಳಿರುತ್ತದೆ. ಮತ್ತೆ ಇದನ್ನು ನೋಡ ಬೇಕಾದರೆ ಹನ್ನೆರೆಡು ವರ್ಷ ಕಾಯಬೇಕು.ಈ ಗಿಡ ಮೂವತ್ತರಿಂದ ಅರವತ್ತು ಸೆಂ.ಟಿ ಮೀಟರ್ ಉದ್ದ ಬೆಳೆಯುತ್ತದೆ. ಆದರೆ ಇದಕ್ಕೆ ೧೮೦ ಸೆಂ.ಟಿ ಮೀಟರ್ ತನಕ ಬೆಳೆಯುವ ಕ್ಷಮತೆ ಇದೆ. ಈ ಹೂವಿನ ಸೌಂದರ್ಯ ವನ್ನು ಸವಿಯಲು ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ.
ಹಾಗಾಗಿ ನೀಲಗಿರಿ ಬೆಟ್ಟವು ಒಂದು ಪ್ರವಾಸಿ ತಾಣವಾಗಿದೆ.ಕಳೆದ ವರ್ಷ ಲೋಕಸಭಾ ಸಂಸದ ಪಿಸಿ ಮೋಹನ್ ಅವರು ಕರ್ನಾಟಕದ ಕೊಡಗು ಜಿಲ್ಲೆಯ ಮಾಂದಲಪಟ್ಟಿ ಮತ್ತು ಕೋಟೆ ಬೆಟ್ಟದಲ್ಲಿ ನೀಲಕುರಿಂಜಿ ಅರಳುತ್ತಿರುವ ಬಹುಕಾಂತೀಯ ಚಿತ್ರಗಳನ್ನು ಹಂಚಿಕೊಂಡಿದ್ದರು ಕಳೆದವರ್ಷ ಕೊಡಗಿನ ಪ್ರವಾಸಿ ತಾಣ ಮಾಂದಲಪಟ್ಟಿ ಸಂಪೂರ್ಣ ನೀಲಿಮಯವಾಗಿತ್ತು.
ಬೆಟ್ಟದ ತುಂಬಾ ಅಪರೂಪದ ಕುರುಂಜಿ ಹೂವು ಅರಳಿರದ್ದರಿಂದ ಇಲ್ಲಿಯ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳಿಸಿತ್ತು.