
ನೀರು ಕುಡಿಯಲು ಹೋಗಿ ಮೂವರು ಬಾಲಕಿಯರು ನೀರು ಪಾಲಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ.
ಸುನಿತಾ ಲಕ್ಷ್ಮಣ ಲಮಾಣಿ(9), ಅಂಕಿತಾ ಲಕ್ಷ್ಮಣ ಲಮಾಣಿ(13), ಸುನಿತಾ ಲೋಕೆಶ್ ಲಮಾಣಿ(10) ಮೃತ ದುರ್ದೈವಿಗಳಾಗಿದ್ದಾರೆ. ಕೃಷಿ ಹೊಂಡದಲ್ಲಿ ನೀರು ಕುಡಿಯುವಾಗ ಓರ್ವ ಬಾಲಕಿ ನೀರು ಪಾಲಾಗಿದ್ದಾಳೆ. ಆಕೆಯನ್ನು ಉಳಿಸಲು ಹೋಗಿ ಮತ್ತಿಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿದ್ದಾರೆ. ಘಟನಾ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಬಾಲಕಿಯರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ಬಾಲಕಿಯರ ಮೃತದೇಹಗಳನ್ನು ಹೊರತೆಗೆಯಲಾಯಿತು. ಬಾಲಕಿಯರ ಶವಗಳನ್ನು ನೋಡಿ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರ, ಸಿಪಿಐ ಸುನೀಲ್ ಸೌದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.