ನಿವೃತ್ತಿಗೆ ಕೇವಲ 1 ದಿನ ಬಾಕಿ ಇರುವಾಗಲೇ ಎಸಿಬಿ ಬಲೆಗೆ ಬಿದ್ದ MUDA ಅಧಿಕಾರಿ

NCIB ಮೈಸೂರು : ತನ್ನ ವೃತ್ತಿ ನಿವೃತ್ತಿಗೆ ಕೇವಲ ಒಂದು ದಿನ ಇರುವಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (Mysore Urban Development Authority – MUDA) ಅಧಿಕಾರಿಯೋಬ್ಬ ಎಸಿಬಿ (ACB) ಬಲೆಗೆ ಬಿದ್ದಿದ್ದಾರೆ. 50 ಸಾವಿರ ಲಂಚ ಸ್ವೀಕರಿಸುವ ವೇಳೆ ದಾಳಿ ಮಾಡಿದ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮೈಸೂರು (Mysuru) ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜನಾ ಶಾಖೆ ಸದಸ್ಯ ಹಾಗೂ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಟಿಪಿಎಂ ಜಿ.ಎಸ್.ಜಯಸಿಂಹ ಹಾಗೂ ಡಾಟಾ ಎಂಟ್ರಿ ಆಪರೇಟರ್ ಬಲೆಗೆ ಬಿದ್ದ ಭ್ರಷ್ಟರಾಗಿದ್ದಾರೆ. 50 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ (Anti Corruption Bureau ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಡಾವಣೆಯೊಂದರ ಮಂಜೂರಾತಿಗಾಗಿ ಡೆವಲಪರ್ ವೇಣುಗೋಪಾಲ್ ಎಂಬುವರ ಬಳಿ 3.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ವೇಣುಗೋಪಾಲ್ ರವರು ಈ ಕುರಿತಂತೆ ಎಸಿಬಿ ಯಲ್ಲಿ ದೂರು ದಾಖಲಿಸಿದ್ದರು. ಇಂದು ತಮ್ಮ ಕಚೇರಿಯಲ್ಲಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
ಆರಂಭದಿಂದಲೂ ಮೂಡಾದಲ್ಲಿ ಕೆಲಸ ಮಾಡುತ್ತಿದ್ದ ಜಯಕುಮಾರ್ ಮೇಲೆ ಸಾಕಷ್ಟು ಬಾರಿ ಭ್ರಷ್ಟಾಚಾರದ (corruption) ಆರೋಪ ಕೇಳಿ ಬಂದಿತ್ತು. ಹಲವು ತಿಂಗಳಿಂದ ಡೆವಲಪರ್ ವೇಣುಗೋಪಾಲಗಗೆ ಕೂಡ ಲಂಚದ ಬೇಡಿಕೆ ಇಟ್ಟಿದ್ದ ಬಗ್ಗೆ ದೂರು ನೀಡಲಾಗಿತ್ತು. ಮೈಸೂರು ಹೊರ ವಲಯದಲ್ಲಿ ನಿರ್ಮಾಣ ಆಗುತ್ತಿರುವ ಲೇಔಟ್‌ನ ಪ್ಲಾನ್ ಮಂಜೂರು ಮಾಡಲು ಲಕ್ಷ ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರಂತೆ. ಅದರಂತೆ ಇಂದು ಮೊದಲ ಕಂತಿನಲ್ಲಿ ಹಣ ಕೊಡಲು ಮಾತುಕತೆ ನಡೆದಿತ್ತು.
ಇದೇ ಸಂಬಂಧ ಎಸಿಬಿ ದೂರು ನೀಡಿದ್ದ ವೇಣುಗೋಪಾಲ್ ಮೂಡಾ ಕಚೇರಿಗೆ ಬಂದು ಜಯಕುಮಾರ್‌ಗೆ ಹಣ ನೀಡಲು ಮುಂದಾಗಿದ್ದಾರೆ. ಆ ವೇಳೆ ಡಾಟಾ ಆಪರೇಟರ್ ಹಣ ಪಡೆದಿದ್ದು ತಕ್ಷಣ ಸ್ಥಳಕ್ಕೆ ಬಂದ ಎಸಿಬಿ ಅಧಿಕಾರಿಗಳು ಆರೋಪಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಎಸಿಬಿ ಎಸ್‌ಪಿ ವಿ.ಜೆ.ಸುಜೀತ್ ನೇತೃತ್ವದಲ್ಲಿ ದಾಳಿ ನಡೆದಿದೆ.